ಹುಳಿಯಾರು ಪಟ್ಟಣದ ಹತ್ತನೇ ವಾರ್ಡಿನಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದ್ದು ಈ ಬಗ್ಗೆ ಹಲವಾರೂ ಬಾರಿ ಮನವಿ ಮಾಡಿದರೂ ಸ್ಪಂದಿಸದ ಪಂಚಾಯ್ತಿ ಸದಸ್ಯರ ವರ್ತನೆಗೆ ಬೇಸತ್ತ ವಾರ್ಡಿನ ಕೆಲ ಮಹಿಳೆಯರು ಪಂಚಾಯ್ತಿ ಕಛೇರಿಗೆ ಬಂದು ಕೂಡಲೇ ಒಳಚರಂಡಿ ನಿರ್ಮಿಸಿ ಎಂದು ಗ್ರಾ.ಪಂ. ಕಾರ್ಯದರ್ಶಿ ಹಾಗೂ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ.
ಪಟ್ಟಣದ ೧೦ ನೇ ವಾರ್ಡ್‌ನಲ್ಲಿ ಸಾಕಷ್ಟು ವರ್ಷಗಳಿಂದ ಒಳಚರಂಡಿ ನಿರ್ಮಾಣವಾಗಿಲ್ಲ. ಮನೆಗಳಿಂದ ಬರುವ ಬಚ್ಚಲು ಮನೆಯ ನೀರು ಮನೆಗಳ ಮುಂದೆ, ರಸ್ತೆಗಳಲ್ಲಿ ನಿಲ್ಲುತ್ತಿದ್ದು ಓಡಾಡುವವರು ಇದನ್ನು ದಾಟಿಕೊಂಡೆ ಹೋಗುವಂತಾಗಿದೆ.ಅಲ್ಲದೆ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು ಸೊಳ್ಳೆ ಹಾಗೂ ಹಂದಿಗಳ ಕಾಟ ತಾಳದಂತಾಗಿದೆ. ಕೊಳಚೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ ಎಂದು ಹರಿಹಾಯ್ದರು.
ಸಮಸ್ಯೆ ಆಲಿಸಿದ ಗ್ರಾ.ಪಂ. ಕಾರ್ಯದರ್ಶಿ ಉಮಾಮಹೇಶ್ ಹಾಗೂ ಗ್ರಾ.ಪಂ. ಸದಸ್ಯ ಅಹಮದ್‌ಖಾನ್ ಸಮಸ್ಯೆ ಪರಿಹರಿಸಲು ೧೩ ನೇ ಹಣಕಾಸು ಯೋಜನೆಯಡಿ ಬರುವ ಅನುದಾನದಲ್ಲಿ ಒಳಚರಂಡಿ ನಿರ್ಮಿಸುವ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಆಕ್ಷನ್ ಪ್ಲಾನ್‌ಗೆ ಸೇರಿಸಲಾಗುವುದು.ಅಲ್ಲಿಯವರೆಗೂ ಕಾಲಾವಕಾಶ ಕೊಡಿ ಎಂದು ಭರವಸೆ ನೀಡಿ ಸಮಾಧಾನ ಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ