ಹಂದನಕೆರೆ ಹೋಬಳಿ ನಿರುವಗಲ್ ಗ್ರಾಮದ ಅಂಗನವಾಡಿ ಕಟ್ಟಡ ಬಿದ್ದು ಹೋಗಿ ೭ ವರ್ಷಗಳಾಗಿದ್ದರೂ ದುರಸ್ಥಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಧ್ಯಕ್ಕೆ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ನಡೆಯುತ್ತಿದ್ದು ಸುತ್ತಮುತ್ತಲ ಕೊಳಕಾದ ಪರಿಸರದಿಂದಾಗಿ ಅನೈರ್ಮಲ್ಯತೆಯ ತಾಣವಾಗಿದೆ.
ಕಟ್ಟಡದ ಪಕ್ಕ ಕೊಳಚೆ ನೀರು ನಿಂತು ಸೂಳ್ಳೆಗಳ ಆಶ್ರಯತಾಣವಾಗಿದೆ. ಈ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಳ್ಳುವಂತಾಗಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ.ಇನ್ನಾದರೂ ಅಂಗನವಾಡಿ ಕಟ್ಟಡ ದುರಸ್ಥಿಗೆ ಮುಂದಾಗಬೇಕು ಹಾಗೂ ಹಾಲಿ ಅಂಗನವಾಡಿ ನಡೆಯುತ್ತಿರುವ ಕಟ್ಟಡದ ಸುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವಂತೆ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ