ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಗಸಾಧುಗಳೊಂದಿಗೆ ಸಿಬಿಎಸ್

  ಬಾಣಾವರದಲ್ಲಿ ನಡೆದ ಸಾಧುಸಂತರ ಸಮಾಗಮಕ್ಕೆ ಆಗಮಿಸಿದ ನಾಗಸಾಧುಗಳೊಂದಿಗೆ ಚಿ.ನಾ.ಹಳ್ಳಿ ಕ್ಷೇತ್ರದ ಶಾಸದ ಸಿ.ಬಿ.ಸುರೇಶ್ ಬಾಬು.

ಕೈಗೆಟಕುವಂತಿರುವ ವಿದ್ಯುತ್ ಲೈನ್

       ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಪಾತಲಿಂಗೇಶ್ವರ ದೇವಾಲಯದ ಹಿಂಭಾಗದ ನಿಂಗಜ್ಜಪಾತಯ್ಯನ ಮನೆಮುಂದೆ ವಿದ್ಯುತ್ ವೈರ್ ಕೈಗೆಟಕುವಂತೆ ಜಗ್ಗಿದ್ದು ಅಪಾಯವನ್ನು ಆಹ್ವಾನಿಸುವಂತಿದೆ. ದೊಡ್ಡಬಿದರೆಯಲ್ಲಿ ಕೈಗೆಟಕುವಂತೆ ಜಗ್ಗಿರುವ ವಿದ್ಯುತ್ ಲೈನ್.          ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ವಿದ್ಯುತ್ ವೈರ್‍ಗಳು ಜಗ್ಗಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹಾಗೂ ಲೈನ್‍ಮೆನ್ ಗಳಿಗೆ ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ತಿಂಗಳು ಬಿಲ್ ಗೆ ಬರುವ ಬಿಲ್‍ಕಲೆಕ್ಟರ್ ಗೆ ವೈರ್ ಜಗ್ಗಿರುವುದನ್ನು ತೋರಿಸಿದರೆ ಲೈನ್ ಮೆನ್ ಬಂದು ಸರಿ ಮಾಡುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಾರೆ ಹೊರತು ಯಾವುದೇ ಕೆಲಸ ಮಾಡಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.         ವಿದ್ಯುತ್ ಸಂಪರ್ಕ ಕಲ್ಪಿಸಿರುವ ಎರಡು ಕಂಬಗಳು ದೂರವಿರುವುದರಿಂದ ವೈರ್‍ಗಳು ಜಗ್ಗಿದ್ದು ಕೈಗೆಟಕುವಂತಿದೆ ಈ ಲೈನ್ ಓಡಾಡುವ ದಾರಿಯಲ್ಲಿ ಹಾದುಹೋಗಿದ್ದು ನಿತ್ಯ ಹತ್ತಾರೂ ಜನ,ಎತ್ತಿನಗಾಡಿ, ಟ್ರ್ಯಾಕ್ಟರ್ ತಿರುಗಾಡುತ್ತಿರುತ್ತವೆ. ಅಲ್ಲದೆ ಮಕ್ಕಳುಮರಿ ಆಟವಾಡುತ್ತಿರುತ್ತಾರೆ. ಗಾಡಿಮೇಲೆ ಹೋಗುವಾಗ ತಾಕಿದರೆ ಅಥವಾ ಏನಾದರೂ ತುಂಡಾಗಿ ಯಾರ ಮೇಲಾದರೂ ಬಿದ್ದರೆ ಪ್ರಾಣಾಪಾಯ ಸಂಭವಿಸುತ್ತದೆ . ಇಂತಹ ಯಾವುದೇ ಅವಘಡ ಸಂಭವಿಸುವ ಮೊದಲೇ ಬೆಸ್ಕಾಂನವರು ಎಚ್ಚೆತ್ತು ವೈರ್ ಜಗ್ಗಿರುವುದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇಲ್

ದೊಡ್ಡಬಿದರೆ ಕೆರೆ ತೂಬಲ್ಲಿ ಸೋರಿಕೆಯಾಗುತ್ತಿರುವ ನೀರು

ಹುಳಿಯಾರು ಹೋಬಳಿಯ ದೊಡ್ಡಬಿದರೆ ಕೆರೆಯ ತೂಬಲ್ಲಿ ನೀರು ಸೋರಿಕೆಯಾಗಿ ಗದ್ದೆಬಯಲಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದು ಈ ಬಗ್ಗೆ ಯಾರೊಬ್ಬರು ಗಮನ ನೀಡಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ. ತೂಬಿನ ಮೂಲಕ ವ್ಯರ್ಥವಾಗಿ ಹೊರ ಹೋಗುತ್ತಿರುವ ನೀರು. ತೂಬಿನ ಕಾಲುವೆ ಮೂಲಕ ಹರಿದ ನೀರು ಗದ್ದೆಯೆಲ್ಲಾ ಆವರಿಸಿರುವುದು ಕಳೆದ ನಾಲ್ಕೈದು ವರ್ಷದಿಂದ ಬರಿದಾಗಿದ್ದ ದೊಡ್ಡಬಿದರೆ ಕೆರೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸೋಮವಾರದಂದು ಕೆರೆ ಕೋಡಿ ಬಿದ್ದಿದ್ದು ಇಲ್ಲಿನ ಜನರಲ್ಲಿ ಹರ್ಷವನ್ನುಂಟು ಮಾಡಿತ್ತು. ಆದರೆ ಈಗ ಅದರ ಬೆನ್ನಲೇ ತೂಬಿನ ಮೂಲಕ ನೀರು ಸೋರಿಕೆಯಾಗುತ್ತಿದ್ದು, ಒಂದುವಾರದಿಂದ ನೀರು ಹರಿಯುತ್ತಲೇ ಇದ್ದು ಕೆರೆನೀರು ವ್ಯರ್ಥವಾಗಿ ಹರಿಯುತ್ತಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ತೂಬಿನಿಂದ ಹೊರ ಬರುವ ನೀರು ಗದ್ದೆಬಯಲಿನ ಮೂಲಕ ಹರಿದು ಪೋಚಕಟ್ಟೆ ಕೆರೆಗೆ ಹೋಗುತ್ತಿರುವುದರಿಂದ ದಿನೇ ದಿನೇ ಕೆರೆಯಲ್ಲಿನ ನೀರಿನ ಪ್ರಮಾಣ ಕ್ಷಿಣಿಸುತ್ತಿದೆ, ಹೊರ ಹೋಗುವ ನೀರಿನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ನೀರುಗಂಟಿ ಮುಖಾಂತರ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿಗಳು. ಬೇಸಿಗೆ ಸಮಯದಲ್ಲಿ ಕೆರೆಏರಿ ಹಾಗೂ ತೂಬುಗಳ ದುರಸ್ಥಿ ಕೆಲಸ ಮಾಡಬೇಕಾಗಿದ್ದ ನೀರಾವರಿ ಇಲಾಖೆಯವರು ಯಾವುದೇ ಕಾರ್ಯಗಳನ್ನು ಮಾಡದೆ ಕೈಕಟ್ಟಿ ಕೂತಿದ್ದರ ಪ

ಕವಿಗೋಷ್ಠಿ ಕಾರ್ಯಕ್ರಮ ನಾಳೆ (ತಾ.1)

         ಕನ್ನಡರಾಜ್ಯೋತ್ಸವದ ಪ್ರಯುಕ್ತ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ (ತಾ.1) ಶನಿವಾರ ಬೆಳಿಗ್ಗೆ ರಾಜ್ಯೋತ್ಸವ ಆಚರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು ಕನ್ನಡ ನಾಡು-ನುಡಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಕಾವ್ಯ,ಕಥೆ,ಕವನ,ಚುಟುಕು ಕವನ ವಾಚನ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಪ್ರದರ್ಶಿಸಬಹುದಾಗಿದೆ. ಉಪನ್ಯಾಸಕರಾದ ಸಯ್ಯದ್ ಇಬ್ರಾಹಿಂ, ಅಶೋಕ್,ಹನುಮತಪ್ಪ, ಶ್ರೀನಿವಾಸ್,ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿರುವರು.

ಹುಳಿಯಾರಮ್ಮ ದೇವಿಯ ಕಾರ್ತೀಕೋತ್ಸವಕ್ಕೆ ಚಾಲನೆ

ಹುಳಿಯಾರು ಪಟ್ಟಣದ ಗ್ರಾಮದೇವತೆ ಹುಳಿಯಾರಮ್ಮನವರ ಕಾರ್ತಿಕೋತ್ಸವಕ್ಕೆ ಮಂಗಳವಾರ ಸಂಜೆ ಅಮ್ಮನವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.   ಕಾರ್ತೀಕದ ಅಂಗವಾಗಿ ನಡೆದ ಹುಳಿಯಾರಮ್ಮನ ಕುಣಿತ. ಕಾರ್ತೀಕೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಅಮ್ಮನವರ ವಿಶೇಷ ಪೂಜೆ ನಡೆದು, ಸಂಜೆ ಅಲಂಕೃತ ಉತ್ಸವ ಮೂರ್ತಿಯನ್ನು ಹೊರಡಿಸಲಾಯಿತು. ಹುಳಿಯಾರಮ್ಮನ ಮೂಲ ದೇವಸ್ಥಾನ, ರಂಗನಾಥಸ್ವಾಮಿ ದೇವಸ್ಥಾನ, ಕೆಂಚಮ್ಮ ದೇವಾಲಯಕ್ಕೆ ಭೇಟಿಯಿತ್ತು ವಾದ್ಯಮೇಳ ಹಾಗೂ ಭಕ್ತಾಧಿಗಳ ಉದ್ಘೋಷದೊಂದಿಗೆ ದೀಪ ಏರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷರಾದ ನರೇಂದ್ರಬಾಬು,ಬಡಗಿರಾಮಣ್ಣ, ದುರ್ಗಪ್ಪ, ಬೀರಪ್ಪ, ಚಂದ್ರಣ್ಣ, ದುರ್ಗರಾಜ್ ಕೋಡಿಪಾಳ್ಯ ನಾಗರಾಜು ಸೇರಿದಂತೆ ಹುಳಿಯಾರು, ಕೇಶವಾಪುರ, ತಿಪಟೂರು ರಸ್ತೆ, ಕೋಡಿಪಾಳ್ಯ,ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯದ ಭಕ್ತಾಧಿಗಳು ಉಪಸ್ಥಿತರಿದ್ದರು. 

ಸೂಕ್ತ ನಿರ್ವಹಣೆಯಿಲ್ಲದ ಜೋಡಿತಿರುಮಲಾಪುರ ಕೆರೆತೂಬುಗಳು

ಹುಳಿಯಾರು : ಸಮೀಪದ ಜೋಡಿತಿರುಮಲಾಪುರ ಕೆರೆಯಲ್ಲಿನ ತೂಬುಗಳ ಸೂಕ್ತ ನಿರ್ವಹಣೆಯಿಲ್ಲದೆ ಕೆರೆಗೆ ಬಂದಿದ್ದ ಅಲ್ಪಸ್ವಲ್ಪ ನೀರು ಕೂಡ ಕಳೆದೆರಡು ದಿನ ತೂಬಿನ ಮೂಲಕ ಹರಿದುಪೋಲಾಗಿದ್ದು ಈ ಬಗ್ಗೆ ನೀರಾವರಿ ಇಲಾಖೆಯವರ ನಿರ್ಲಕ್ಷ ಎದ್ದುಕಾಣುತ್ತಿದೆ. ಕೆರೆ ತೂಬಿನಲ್ಲಿ ಪ್ಲೇಟ್ ಕಾಣೆಯಾಗಿರುವುದು. ಜೋಡಿತಿರುಮಲಾಪುರಕ್ಕೆ ಈ ಕೆರೆಯ ನೀರೆ ಆಸರೆಯಾಗಿದ್ದು, ಈ ಕೆರೆ ತುಂಬಿದಲ್ಲಿ ಈ ಭಾಗದ ಜನರ ಭತ್ತ ಬೆಳೆಯುವ ಕನಸು ಚಿಗುರೊಡೆಯುತ್ತದೆ. ಅಲ್ಲದೆ ಅಂತರ್ಜಲದ ಮಟ್ಟ ಏರಿಕೆಯಾಗಿ ಭತ್ತಿಹೋಗಿರುವ ಕೊಳವೆಬಾವಿಗಳು ಕೂಡ ಉತ್ತಮಗೊಳ್ಳುತ್ತದೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಕೆರೆಗೆ ನೀರು ಬರುತ್ತಿದ್ದು, ಕೆರೆ ಒಳಗಿನ ಗುಂಡಿಗೊಟರುಗಳೆಲ್ಲಾ ತುಂಬಿದ್ದು ಇನ್ನೊಂದೆರಡು ದಿನ ಭರ್ತಿ ಮಳೆಯಾದಲ್ಲಿ ಕೆರೆ ತುಂಬುವ ಸ್ಥಿತಿಯಲ್ಲಿದೆ . ಇಂತಹ ಸಂದರ್ಭದಲ್ಲಿ ಕೆರೆ ತೂಬೂ ಸರಿಯಾಗಿ ನಿರ್ವಹಿಸದ ಪರಿಣಾಮ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ತೊಡಕಾಗಿ ಪರಿಣಮಿಸಿದೆ. ಹೋಬಳಿಯಲ್ಲಿ ಉತ್ತಮ ಮಳೆಯಾದಲ್ಲಿ ಗೋಪಾಲಪುರದ ನಂತರ ಮೊದಲಿಗೆ ತುಂಬುತ್ತಿದ್ದ ಕೆರೆ ಇದಾಗಿದ್ದು ಈ ಹಿಂದೆ ವರ್ಷ ವರ್ಷವೂ ತುಂಬುತ್ತಿದ್ದ ಕೆರೆಯಿಂದಾಗಿ ಈ ಭಾಗ ಭತ್ತದ ಬೆಳೆಗೆ ಹೆಸರುವಾಸಿಯಾಗಿತ್ತು. ಕಳೆದ ನಾಲ್ಕುವರ್ಷಗಳ ಹಿಂದೆ ತುಂಬಿದ ಕೆರೆ ಇತ್ತೀಚೆಗೆ ಒಣಗಿ ನಿಂತಿತ್ತು. ಕೆರೆಯಲ್ಲಿ 5 ತೂಬುಗಳಿದ್ದು, ಕೆರೆ ಉಸ್ತು

ಕೆಎಸ್‍ಆರ್‍ಟಿಸಿ ಬಸ್ - ಲಾರಿ ಮುಖಾಮುಖಿ

ಹುಳಿಯಾರು ಪಟ್ಟಣದ ರಾಮಗೋಪಾಲ್ ಸರ್ಕಲ್ ನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ಘಟಿಸಿದೆ.  ಮುಖಾಮುಖಿ ಡಿಕ್ಕಿ ಹೊಡೆದ ಲಾರಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ . ಶಿರಾಳಕೊಪ್ಪದಿಂದ ಹುಳಿಯಾರು ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಬಸ್ ಹಾಗೂ ಚಿ.ನಾ.ಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ್ದು, ಬಸ್ ಹಾಗೂ ಲಾರಿಯ ಬಲಭಾಗದಲ್ಲಿ ನಜ್ಜುಗುಜ್ಜಾಗಿ, ಗ್ಲಾಸ್ ಎಲ್ಲಾ ಪುಡಿಯಾಗಿದೆ. ಅದೃಷ್ಟವಶಾತ್ ಬಸ್‍ನ ಪ್ರಯಾಣಿಕರಿಗಾಗಲಿ, ಲಾರಿಯವರಿಗಾಗಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕರಿಗೆ ಅಲ್ಪಸ್ವಲ್ಪ್ಪ ಗಾಯಗಳಾಗಿದ್ದು, ಎರಡೂ ವಾಹನಗಳನ್ನು ಠಾಣೆಯಲ್ಲಿಗೆ ತಂದು ನಿಲ್ಲಿಸಲಾಗಿದೆ. ಪಿಎಸೈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುಂಡಿ ಕಾರಣ : ರಸ್ತೆಯಲ್ಲಾ ಗುಂಡಿಬಿದ್ದು ಹಾಳಾಗಿದ್ದು ಇವತ್ತಿನ ಅಪಘಾತಕ್ಕೆ ಹಾಳಾಗಿರುವ ರಸ್ತೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ದುರಸ್ಥಿ ಬಗ್ಗೆ ಅನೇಕಬಾರಿ ಗಮನ ಸೆಳೆದರೂ ಕೂಡ ಇಲಾಖೆ ಮುಂದಾಗದೆ ನಿರ್ಲಕ್ಷವಹಿಸುತ್ತಿದ್ದು ಇಂತಹ ಅಪಘಾತಗಳು ಇನ್ನೆಷ್ಟು ಸಂಭವಿಸಿ ಪ್ರಾಣಬಲಿ ತೆಗದುಕೊಳ್ಳಬೇಕಾಗಿದೆ ಎಂಬುದು ತಿಳಿಯದಾಗಿದೆ ಎಂದು ಅಕ್ರೋಶವ್ಯಕ್ತಪಡಿಸಿದರು. ಇನ್ನಾದರು ಇಲಾಖೆ ಎಚ್ಚೆತ್ತು ರಸ್ತೆ ದುರಸ್ಥಿ ಮಾಡಬೇಕಾಗಿ ಒತ್ತಾಯಿಸಿದ್ದಾರೆ.

ಸಮಸ್ಯೆಗಳ ಬಗ್ಗೆ ಅರಿವಿದೆ : ಸಂಸದ

        ಹುಳಿಯಾರು ಸಮೀಪದ ಮೋಟಿಹಳ್ಳಿ ಸಮೀಪದ ಎಂ.ವಿ.ಹಟ್ಟಿಯ ಬಸವೇಶ್ವರ ದೇವಾಲಯದ ಪ್ರಾರಂಭೋತ್ಸವ ವೈಭವಯುತವಾಗಿ ಜರುಗಿತು. ಶನಿವಾರದಂದು ಮೋಟಿಹಳ್ಳಿ ಕರಿಯಮ್ಮದೇವಿ, ಬನಶಂಕರಿದೇವಿ, ಯಳನಡು ಕರಿಯಮ್ಮದೇವಿ ಸೇರಿದಂತೆ ವಿವಿಧ ದೇವರುಗಳ ಆಗಮನದೊಂದಿಗೆ ಗಂಗಾಪೂಜೆ,ಗೋಪೂಜೆ, ಮಹಾದ್ವಾರಪೂಜೆ, ಕಳಸ್ಥಾಪನೆ,ನವಗ್ರಹಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಯಿತು. ಭಾನುವಾರ ಬೆಳಿಗ್ಗೆ ಶ್ರೀಸ್ವಾಮಿಯ ಪ್ರತಿಷ್ಠಾಪನೆ,ಕದಳಿಛೇದನ, ನೇತ್ರೋನ್ಮಿಲನ,ಪ್ರಾಣಪ್ರತಿಷ್ಠಾಪನೆ, ಶಕ್ತಿಹೋಮದೊಂದಿಗೆ ಮಹಾಕುಂಭಾಭಿಷೇಕ ನಡೆದು, ಹೋಮಕ್ಕೆ ಪೂರ್ಣಾಗುತಿ ಸಮರ್ಪಿಸಿ , ಮಹಾಮಂಳಾರತಿಯ ನಂತರ ಬಂದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಮುದ್ದಹನುಮೇಗೌಡ ಅವರು ಮಾತನಾಡಿ, ತಾಲ್ಲೂಕಿನಾದ್ಯಂತ ತಾವು ಪ್ರಾರಂಭಿಸಿರುವ "ಸಂಸದರ ನಡೆ ಹಳ್ಳಿಯಡೆಗೆ " ಕಾರ್ಯಕ್ರಮದ ಮೂಲಕ ಪ್ರತಿ ಹಳ್ಳಿಗಳಿಗೂ ಖುದ್ದಾಗಿ ತೆರಳಿ ಸಂಸ್ಯೆ ಅಲಿಸುತ್ತಿದ್ದು ಈ ಬಗ್ಗೆ ಕೆಲವರು ಅನಗತ್ಯ ಟೀಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು. ಹಳ್ಳಿಗಳ ಅಭಿವೃದ್ದಿಯಾದಲ್ಲಿ ದೇಶ ಅಭಿವೃದ್ದಿ ಎಂಬ ನಿಟ್ಟಿನಲ್ಲಿ ತಾವು ಕಾರ್ಯಕ್ರಮ ನಡೆಸುತ್ತಿದ್ದು ಸಂಸದನಾಗಿ ನನ್ನ ಕರ್ತವ್ಯ ಏನೆಂಬುದು, ಯಾವುದರ ಬಗ್ಗೆ ಧ್ವನಿ ಎತ್ತಬೇಕೆಂಬುದು ನನಗೆ ಅರಿವಿದ್ದು , ದೇಶದ ಸಮಸ್ಯೆ ಜೊತೆಗೆ ಕ್ಷೇತ್ರದ ,ಗ್ರ

ಹುಳಿಯಾರು ವ್ಯಾಪ್ತಿಯಲ್ಲಿ ಭಾರಿ ಮಳೆ ತುಂಬಿ ಹರಿದ ಕೆರೆ,ಕಟ್ಟೆ,ತೋಟಗಳು

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಬಿಟ್ಟುಬಿಡದೆ ಬರುತ್ತಿದ್ದ ಮಳೆ ಹಾಗೂ ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ತುಂಬಿರದ ಕೆರೆ, ಕಟ್ಟೆ, ಪಿಕಫ್ ಗಳು, ತೋಟ-ತುಡಿಕೆಗಳೆಲ್ಲಾ ತುಂಬಿ ಹರಿದಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. ಬಳ್ಳೆಕಟ್ಟೆ ಸೇತುವೆ ಬಳಿ ಬೋರನಕಣಿವೆ ಜಲಾಶಯಕ್ಕೆ ಹರಿದು ಹೋಗುತ್ತಿರುವ ನೀರು. ಸ್ವಾತಿ ಮಳೆ ಕಳೆದ ಎರಡು ಮೂರದಿನದಿಂದ ಬರುತ್ತಲೇ ಇತ್ತು ಆದರೆ ಭಾನುವಾರ ಸಂಜೆಯಿಂದ ಪ್ರಾರಂಭವಾದ ಮಳೆ ಎಡಬಿಡದೆ ರಾತ್ರಿ ಪೂರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ನೆರವಾಗಿದೆ. ಹುಳಿಯಾರಿನ ಅಪ್ಪಸಾಬಿ ಅಣೆ ಕೋಡಿ ಬಿದ್ದು ಹರಿಯುತ್ತಿರುವುದು ಅಪ್ಪಸಾಬಿ ಅಣೆ : ಪಟ್ಟಣಕ್ಕೆ ಹೊಂದಿಕೊಂಡಿರುವ ಅಪ್ಪಸಾಬಿ ಅಣೆ ನಾಲ್ಕು ವರ್ಷದ ನಂತರ ಭಾನುವಾರ ರಾತ್ರಿ ಮಳೆಗೆ ಕೋಡಿಬಿದಿದ್ದು ಮುಂಜಾನೆಯಿಂದ ಇದನ್ನು ನೋಡಲು ಜನಜಾತ್ರಯೇ ಉಂಟಾಗಿದೆ. ಈ ಅಣೆ ತುಂಬ ಬೇಕೆಂದರೆ ಸಮೀಪದ ತಿರುಮಲಾಪುರ ಕೆರೆ ಕೋಡಿಬಿದ್ದು ಅಲ್ಲಿಂದ ಹರಿಯುವ ನೀರಿನಿಂದ ಈ ಅಣೆಗೆ ನೀರು ಶೇಖರಣೆಯಾಗುತ್ತಿತ್ತು. ಈಗ ತಿರುಮಲಾಪುರ ಕೆರೆ ಕೋಡಿ ಬೀಳದಿದ್ದರೂ ಸಹ ಸುತ್ತಮುತ್ತಲ ಹೊಲಗಳ ಭಾಗದ ಹರಿವಿನಿಂದಾಗಿ ಈಅಣೆ ಕೋಡಿ ಬಿದ್ದಿದೆ. ಕೋಡಿ ನೀರಿನಲ್ಲಿ ಮಹಿಳೆಯರು, ಯುವಕರೆನ್ನದೆ ಆಟವಾಡುತ್ತಿದ್ದು . ಈ

ಈರಬೊಮ್ಮಕ್ಕನ ಈಚಲು ಸೇವೆ

         ಹುಳಿಯಾರು  ಹೋಬಳಿಯ ದಮ್ಮಡಿಹಟ್ಟಿಯಲ್ಲಿ ಈರಬೊಮ್ಮಕ್ಕ ದೇವಿಯ ಕಾರ್ತಿಕದ ಅಂಗವಾಗಿ ಪೂಜಾರಿಯಿಂದ ಈಚಲು ಸೇವೆ ನೆರವೇರಿತು. ಈರಬೊಮ್ಮಕ್ಕನ ಈಚಲು ಸೇವೆಗೆ ಮರ ಹತ್ತುವ ಮುನ್ನಾ ನಡೆದ ಮಣೇವು ಸೇವೆ. ಕಾರ್ತೀಕದ ಮೊದಲ ದಿನವಾದ ಪಾಡ್ಯ ದಮ್ಮಡಿಹಟ್ಟಿಯಲ್ಲಿ ವಿಶೇಷ ದಿನವಾಗಿದ್ದು , ಈರಬೊಮ್ಮಕ್ಕನ ಕೊಂಡ ಸೇವೆ ನಡೆಯುವುದಲ್ಲದೆ, ದೇವಿಯ ಅವಾಹನೆಗೆ ಒಳಗಾದ ಭಕ್ತನೊಬ್ಬ ಈಚಲು ಮರ ಏರುವ ಸೇವೆ ಸಹ ನಡೆಯುತ್ತದೆ. ಈರಬೊಮ್ಮಕ್ಕ ರಾಂಪುರ ಬಳಿಯ ಶಶಿವಾಳದ ದೇವತೆಯಾಗಿದ್ದು ಅನಾದಿಕಾಲದಿಂದಲೂ ದಮ್ಮಡಿಹಟ್ಟಿಯಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬಂದು ನೆಲೆಸಿರುವ ಅಮ್ಮನವರಿಗಾಗಿ ಭಕ್ತಾಧಿಗಳೆಲ್ಲಾ ಸೇರಿ ಗ್ರಾಮದಲ್ಲಿ ದೇವಾಲಯಕಟ್ಟಿಸಿದ್ದು , ಅಮ್ಮನವರು ಹೇಳುವ ಹೇಳಿಕೆಗಳು ಸತ್ಯವಾದವೆಂದು ನಂಬಿರುವ ಅನೇಕ ಮಂದಿ ಇಲ್ಲಿಗೆ ನಡೆದುಕೊಳ್ಳುತ್ತಾರೆ. ಕಾರ್ತೀಕದ ಸಮಯದಲ್ಲಿ ಕಳೆದ ಮೂರುವರ್ಷದಿಂದ ಈ ಆಚರಣೆ ನಡೆಸಿಕೊಂಡು ಬರುತ್ತಿದ್ದು, ಅಂತಯೇ ಈಬಾರಿಯೂ ಸಹ ಇದಕ್ಕೆ ಸಿದ್ದತೆ ನಡೆದಿದ್ದು , ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ ಹಾಗೂ ಮಲ್ಲಮ್ಮ ದೇವತೆಗಳ ಸಮ್ಮುಖದಲ್ಲಿ ಅಮ್ಮನವರ ಆಹಾವನೆಯಾದ ಪೂಜಾರಿಗಳಿಬ್ಬರು ಈಚಲು ಮರವನ್ನೇರುತ್ತಾರೆ. ದೇವಿ ಆವಾಹನೆಯಾದ ಪೂಜಾರಿಗಳು ಈಚಲು ಮರ ಏರುತ್ತಾರೆ. ಅಂತಯೇ ಅದಕ್ಕೆ ಬೇಕಾದ ಪೂರಕ ಸಿದ್ದತೆಯನ್ನು ಗ್ರಾಮದವರು ಮಾಡಿಕೊಳ್ಳುತ್ತಾರೆ

ದಿನ ಪೂರ್ತಿ ಸುರಿದ ಸ್ವಾತಿ ಮಳೆ

       ಕಾರ್ತೀಕ ಮಾಸದ ದೀಪಾವಳಿಯಂದು ಪ್ರಾರಂಭವಾದ ಸ್ವಾತಿ ಮಳೆ ಶನಿವಾರದಂದು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ದಿನಪೂರ್ತಿ ಎಡಬಿಡದೆ ತುಂತುರು ತುಂತುರಾಗಿ ಸುರಿಯಿತು. ಸ್ವಾತಿ ಮಳೆ ಶುಕ್ರವಾರ ಸಂಜೆ ಸೊನೆಯಂತೆ ಪ್ರಾರಂಭವಾಗಿ ಶನಿವಾರ ಬೆಳಿಗ್ಗಿನಿಂದಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ವೇಳೆಯಷ್ಟರಲ್ಲಿ ಗುಡುಗು ಸಹಿತ ಜೋರು ಮಳೆ ಸುರಿಯಲಾರಂಭಿಸಿ ಸಂಜೆವರೆವಿಗೂ ಜಿನುಗುಡುತ್ತಲೇ ಸಂಪೂರ್ಣ ಮೋಡದಿಂದ ಆವೃತವಾಗಿತ್ತು.   ಶನಿವಾರ ಸುರಿದ ಮಳೆಯಿಂದಾಗಿ ಹುಳಿಯಾರು ಬಸ್ ನಿಲ್ದಾಣದಲ್ಲಿ ಕೆರೆಯಂತೆ ನೀರು ನಿಂತಿರುವುದು. ಒಂದೇ ಸಮನೆ ಸುರಿದ ಮಳೆಯಿಂದಾಗಿ ಪಟ್ಟಣದ ರಸ್ತೆ, ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯುಂಟಾಗಿತ್ತು. ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆ ಹರಿಯುತ್ತಿದ್ದು ಕಂಡುಬಂತು. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಳೆ ನೀರು ಹರಿದು ಹೋಗಲು ತಾವಿಲ್ಲದೆ ಅಲ್ಲೇ ಸುತ್ತುಗಟ್ಟಿ ಕರೆಯೋಪಾದಿಯಲ್ಲಿ ನಿಂತಿದ್ದು, ಅದರಲ್ಲೇ ಜನ ಓಡಾಡುವಂತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ನಿಲ್ದಾಣಕ್ಕೆ ಬಸ್ ಬಂದರೆ ಸಾಕು ಅಲ್ಲಿ ನಿಂತಿದ್ದ ನೀರು ಪಕ್ಕದ ಅಂಗಡಿ ಒಳಗೆ ನುಗ್ಗುತ್ತಿತ್ತು. ಬಸ್ ನಿಲ್ದಾಣದಲ್ಲಿ ಈ ಸಮಸ್ಯೆ ಇಂದು ನೆನ್ನೆಯದಲ್ಲಾ ಮಳೆಬಂದರೆ ಸಾಕು ಸಮಸ್ಯೆ ತನ್ನಷ್ಟಕ್ಕೆ ತಾನೇ ಬಿಗಡಾಯಿಸುತ್ತದೆ. ಕೆಲವೆ

ಶನೇಶ್ಚರ, ರಂಗನಾಥಸ್ವಾಮಿ ಕಾರ್ತಿಕೋತ್ಸವ

        ಹುಳಿಯಾರು ಪಟ್ಟಣದ ಗಾಂಧಿಪೇಟೆಯ ಶನೇಶ್ಚರಸ್ವಾಮಿ ಕಾರ್ತಿಕೋತ್ಸವ ಅಮವಾಸ್ಯೆಯ ಗುರುವಾರದಂದು ಪ್ರಾರಂಭವಾದರೆ ,ರಂಗನಾಥಸ್ವಾಮಿ ಹಾಗೂ ವಾಸವಿ ದೇವಾಲಯದ ಶ್ರೀಕನ್ನಿಪರಮೇಶ್ವರಿ ಅಮ್ಮನವರ ಕಾರ್ತೀಕೋತ್ಸವ ಪಾಡ್ಯದ ಶುಕ್ರವಾರದಿಂದ ಪ್ರಾರಂಭವಾಗಿದೆ. ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿದ ಭಕ್ತರು.         ಕಾರ್ತೀಕೋತ್ಸವದ ಅಂಗವಾಗಿ ಜ್ಯೋತಿಪಣ ಗಾಣಿಗರ ಸಂಘದಿಂದ ಶನೇಶ್ಚರ ದೇವಾಲಯದಲ್ಲಿ ಹೋಮ,ಹವನಾದಿಗಳನ್ನು ನೆರವೇರಿಸಿ ಸಂಜೆ ಸಮಿತಿಯ ಸದಸ್ಯರ ಸಮುಖ್ಖದಲ್ಲಿ ದೀಪ ಏರಿಸಲಾಯಿತು. ಆರ್ಯವೈಶ್ಯ ಮಂಡಳಿವತಿಯಿಂದ ಶ್ರೀಕನ್ನಿಪರಮೇಶ್ವರಿ ಅಮ್ಮನವರಿಗೆ ಶುಕ್ರವಾರದಂದು ಅಭಿಷೇಕ,ಅರ್ಚನೆ ,ಅಲಂಕಾರ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ವೇಳೆಗೆ ದೇವಾಲಯದ ಆವರಣದಲ್ಲಿ ಹಣತೆಗಳನ್ನು ಹಚ್ಚಿಟ್ಟಿದ್ದಲ್ಲದೆ, ದೇವಾಲಯದ ಮುಭಾಗದಲ್ಲಿ ದೀಪವನ್ನೇರಿಸುವ ಮೂಲಕ ದೀಪಾವಳಿ ಆಚರಣೆ ನಡೆಸಿದರು.          ರಂಗನಾಥಸ್ವಾಮಿ ದೇವಾಲಯದಲ್ಲಿ ಇತಿಹಾಸ ಪ್ರಸಿದ್ದ ಶ್ರೀಅನಂತಶಯನ ರಂಗನಾಥಸ್ವಾಮಿಯ 54ನೇ ವರ್ಷದ ಕಾರ್ತಿಕೋತ್ಸವಕ್ಕೆ ಪಟ್ಟಣದ ಸೀತಾರಾಮಪ್ರತಿಷ್ಠಾನದಿಂದ ಚಾಲನೆ ನೀಡಲಾಯಿತು. ಸ್ವಾಮಿಗೆ ಅಭಿಷೇಕ,ಅರ್ಚನೆ ,ಅಲಂಕಾರ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು. ಆನಂದಾದ್ರಿ ಹಾಗೂ ಶಂಕರ ಸೇವಾ ಭಜನಾ ಮಂಡಳಿಯಿಂದ ಭಜನಾಕಾರ್ಯ ನಡೆದು ಮಹಾಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಸೀತಾರಾಮ

ದೀಪಾವಳಿಗೆ ಹೂ,ಹಣ್ಣು ವ್ಯಾಪಾರ ಬಲು ಜೋರು

         ದೀಪಾವಳಿ ಹಬ್ಬದ ಅಮವಾಸ್ಯೆ ಹಿನ್ನಲೆಯಲ್ಲಿ ಲಕ್ಷ್ಮಿ ಪೂಜೆ ಅಂಗವಾಗಿ ಪಟ್ಟಣದಲ್ಲಿ ಗುರುವಾರದಂದು ಹೂ, ಹಣ್ಣಿನ ವ್ಯಾಪಾರ ಭರಾಟೆಯಿಂದ ಕೂಡಿತ್ತು. ದೀಪಾವಳಿ ಹಬ್ಬದ ಅಂಗವಾಗಿ ಹುಳಿಯಾರಿನ ರಾಜ್ ಕುಮಾರ್ ರಸ್ತೆಯಲ್ಲಿ ಶಾವಂತಿಗೆ ಹೂ ಮಾರಾಟ ಜೋರಾಗಿತ್ತು.  ಲಕ್ಷ್ಮಿ ಪೂಜೆಗೆ ಬೇಕಾದ ಹೂ, ಹಣ್ಣು ಸೇರಿದಂತೆ ಮತ್ತಿತರ ವಸ್ತುಗಳನ್ನು ಕೊಂಡುಕೊಳ್ಳಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಜನ ಆಗಮಿಸಿದ್ದರು. 60-70ರ ಅಜುಬಾಜಿನಲ್ಲಿದ್ದ ಸೇಬು ಕೆ.ಜಿ 120ರೂ , ಮೊಸಂಜಿ ಕೆ.ಜಿ 60, ಹೆಚ್ಚು ಬೇಡಿಕೆಯಿದ್ದ ಬಾಳೆಹಣ್ಣು ಕೆ.ಜಿ 70-80 ಇದ್ದರೆ ಸೇವಂತಿಗೆ ಮಾರೊಂದಕ್ಕೆ 30 ರಿಂದ 40 ರೂ ಗೆ ಮಾರಾಟಲಾಗುತ್ತಿದ್ದವು. ಚೆಂಡು ಹೂ ಕೆ.ಜಿಗೆ 20-30ರೂ ಇತ್ತು. ಸಂತೆಯಲ್ಲಿ ಮಣ್ಣಿನ ಹಣತೆಗಳ ವ್ಯಾಪಾರ ಸಹ ಜೋರಾಗಿತ್ತು. ಆದರೆ ಆಗಾಗ್ಗೆ ಬರುತ್ತಿದ್ದ ಮಳೆಯಿಂದಾಗಿ ಪಟಾಕಿ ವ್ಯಾಪಾರ ಮಾತ್ರ ಕುಸಿದಿತ್ತು. ಅಕ್ಕಪಕ್ಕದ ಹಲ್ಳಿಗಳಿಂದ ಜನ ಮಕ್ಕಳಿಗೆ ಬಟ್ಟೆ ಕೊಳ್ಳು ಮುಂದಾಗಿದ್ದರಿಂದ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿಯಿತ್ತು. ಅಲ್ಲದೆ ಅಲಂಕಾರಿಕ ವಸ್ತುಗಳ ಮಾರಾಟವೂ ಸಹ ಜೋರಾಗಿದ್ದು ಒಟ್ಟಾರೆ ಎಲ್ಲೆಡೆ  ದೀಪಾವಳಿ ಸಂಭ್ರಮ ತುಂಬಿ ತುಳುಕುತ್ತಿತ್ತು.

ಜೀವನ ಜೆಂಜಾಟದಲ್ಲಿ ಮನಸ್ಸಿನ ಸ್ವಾಸ್ಥ್ಯ ಹದಗೆಡುತ್ತಿದೆ : ವೈದ್ಯ ಸಿದ್ದರಾಮಯ್ಯ

         ಆಧುನಿಕ ಜಗತ್ತಿನಲ್ಲಿ ನಾವುಗಳು ಸದಾಕಾಲ ಒತ್ತಡದ ಜೀವನ ಸಾಗಿಸುತ್ತಾ ನಮ್ಮ ಮನಸ್ಸಿನ ಸ್ವಾಸ್ಥ್ಯ ವನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿದ್ದು, ಮನಸ್ಸಿನ ಸ್ವಾಸ್ಥ್ಯ ವನ್ನು ಹದಗೆಡಿಸಿಕೊಳ್ಳುತ್ತಿದ್ದೇವೆಂದು ಸಿದ್ಧಶ್ರೀ ಕ್ಲಿನಿಕ್ ನ ವೈದ್ಯ ಸಿದ್ಧರಾಮಯ್ಯ ವಿಷಾಧಿಸಿದರು. ಪಟ್ಟಣದ ಗ್ರಾ.ಪಂ.ಕಛೇರಿಯಲ್ಲಿ ನಡೆದ ಮಾನಸಿಕ ಸ್ವಾಸ್ಥ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನಸಿಕ ಸ್ವಾಸ್ಥ್ಯ ಕುರಿತು ಅವರು ಉಪನ್ಯಾಸನೀಡಿದರು. ಹುಳಿಯಾರಿನಲ್ಲಿ ನಡೆದ ಮಾನಸಿಕ ಸ್ವಾಸ್ಥ್ಯ ದಿನಾಚರಣೆಯಲ್ಲಿ ವೈದ್ಯ ಸಿದ್ದರಾಮಯ್ಯ ಉಪನ್ಯಾಸ ನೀಡಿದರು.        ವ್ಯಕ್ತಿಯ ಮನಸ್ಸು ಸೂಕ್ಷ್ಮವಾಗಿದ್ದು , ಸ್ವಲ್ಪ ಘಾಸಿಯಾದರೂ ಸಾಕು ಆತನ ವರ್ತನೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ ಇದರಿಂದ ಅನೇಕ ತೊಂದರೆಗಳು ಸಹ ಉಂಟಾಗಿ ವ್ಯಕ್ತಿ ಮಾನಸಿಕ ರೋಗಿಯಾಗುವ ಸಂಭವಗಳು ಹೆಚ್ಚಾಗಿರುತ್ತವೆ ಎಂದರು.          ದೈಹಿಕವಾಗಿ ತೊಂದರೆಯಾದರೆ ಶೀಘ್ರವೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಆದರೆ ಮಾನಸಿಕವಾಗಿ ತೊಂದರೆಗೊಳಗಾದರೆ ಅದರಿಂದ ಹೊರಬರುವುದು ಸುಲಭದ ಮಾತಲ್ಲ, ಇದರಿಂದ ವ್ಯಕ್ತಿಯ ಸಂಪೂರ್ಣ ಜೀವನವೇ ಅಸ್ಥವ್ಯಸ್ಥವಾಗುವ ಸಂಭವವಿರುತ್ತದೆ ಎಂದರು. ಮಾನಸಿಕ ಅಸ್ವಾಸ್ಥ್ಯ ಕ್ಕೆ ಕಾರಣ: ಮಾನಸಿಕ ರೋಗಮೆದುಳಿಗೆ ಸಂಬಂಧಿಸಿದ್ದಾಗಿದ್ದು , ಹೆಚ್ಚು ಧೂಮಪಾನ,ಮದ್ಯಪಾನ, ಮಾದಕ ವ್ಯಸನಿಗಳಾಗುವುದರಿಂದ ಮನಸ್ಸಿನ ಸ್ಥಿಮಿತತೆಯನ್ನ

ನೆಲಸಮವಾಯ್ತು ಶತಮಾನದ ಮುಸಾಫಿರ್ ಖಾನೆ ಕಟ್ಟಡ

         ಹುಳಿಯಾರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿಗಿದ್ದ ಸುಮಾರು ಒಂದು ಶತಮಾನದಷ್ಟು ಹಳೆಯದಾದ ಮುಸಾಫಿರ್ ಖಾನೆ ಕಟ್ಟಡ ಅನ್ಯ ಉದ್ದೇಶಕ್ಕಾಗಿ ನೆಲಸಮವಾಗುವುದರ ಮುಖಾಂತರ ಪಟ್ಟಣದ ಇತಿಹಾಸಕ್ಕೆ ತಳುಕು ಹಾಕಿಕೊಂಡು ಸಾಕ್ಷಿಯಾಗಿದ್ದ ಕಟ್ಟಡವೊಂದು ನೆನಪಿನ ಪುಟ ಸೇರಿತು. ಹುಳಿಯಾರಿನಲ್ಲಿದ್ದ ಶತಮಾನ ದಾಟಿದ್ದ ಮುಸಾಫಿರ್ ಖಾನೆ ನೆಲಸಮವಾಗಿರುವುದು.                ಆ ಕಾಲದಲ್ಲಿ ಮುಸಾಫಿರ್ ಖಾನೆ ಎಂದರೆ ಪರಸ್ಥಳದವರು ಊರಿಂದೂರಿಗೆ ಬಂದಾಗ ಉಳಿದು ಕೊಳ್ಳಲು ಮಾಡಿದ್ದ ತಂಗುದಾಣವಾಗಿದ್ದು, ಅದನ್ನು ಹೀಗಿನ ಪ್ರವಾಸಿ ಮಂದಿರಗಳಿಗೆ ಹೋಲಿಸಬಹುದಾಗಿದೆ. ಈ ಕಟ್ಟಡ 1910ರ ಅಜುಬಾಜಿನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ಇಂದಿಗೂ ಗಟ್ಟಿಮುಟ್ಟಾಗಿದ್ದ ಕಟ್ಟಡ ಊರಿನ ಅನೇಕ ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿತ್ತು.              ಪರಸ್ಥಳದವರಿಗೆ ಛತ್ರವಾಗಿ ಉಪಯೋಗವಾಗಿದ್ದ ಕಟ್ಟಡ 45-46 ನೇ ಸಾಲಿನಲ್ಲಿ ಈ ಊರಿನ ಮೊಟ್ಟಮೊದಲ ಹೈಸ್ಕೂಲ್ ಪ್ರಾರಂಭಕ್ಕೆ ಕಾರಣವಾಯಿತು. ಈ ಹೈಸ್ಕೂಲ್ ಮೊದಲು ಜಿಲ್ಲಾಡಳಿತದ ವಶದಲ್ಲಿದ್ದರಿಂದ ಡಿಸ್ಟಿಕ್ ಬೋರ್ಡ್ ಹೈಸ್ಕೂಲ್ ಎಂದು ನಂತರ ತಾಲ್ಲೂಕು ಆಡಳಿತಕ್ಕೆ ಕೊಟ್ಟ ಮೇಲೆ ತಾಲ್ಲೂಕ್ ಬೋರ್ಡ್ ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು.             ಈ ಕಟ್ಟಡ ನೋಡಲು ಛತ್ರದಂತೆ ಇದ್ದು ,ಇದನ್ನು ನಿಂಗಣ್ಣ ಎಂಬಾತ ನೋಡಿಕೊಳ್ಳುತ್ತದ್ದರಿಂದ ನಿಂಗಣ್ಣನ ಛತ್ರ ಎಂದು ಸಹ ಕರೆಯುತ್ತಿದ್ದರು. ಇ

ರಂಗನಾಥಸ್ವಾಮಿಗೆ ವಿಶೇಷ ಅಲಂಕಾರ

ಹುಳಿಯಾರಿನ ಅನಂತಶಯನ ರಂಗನಾಥಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಭಕ್ತರ ಗಮನ ಸೆಳೆಯಿತು.

ವಾಲ್ಮೀಕಿ ಜಯಂತಿ

ಹುಳಿಯಾರಿನ ಜ್ಯೋತಿ ಸ್ಟುಡಿಯೋದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಪೋಟೊಗ್ರಾಫರ್ ರವಿ ಹಾಗೂ ಸಂಗಡಿಗರು ಪಾನಕ ವಿತರಿಸಿದರು.

ನಾಳೆ (ಅ.11 ) ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈತ್ರೇಯ ಟ್ರಸ್ಟ್ ಹಾಗೂ ಹುಳಿಯಾರು ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಾಳೆ(ತಾ. 11) ಶನಿವಾರದಂದು ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ,ಜೌಷಧಿ ವಿತರಣೆ ಹಾಗೂ ಕಣ್ಣು ಪೂರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮಧುಮೇಹ ರಕ್ತಪರೀಕ್ಷೆ,ಇಸಿಜಿ, ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆರಿದಂತೆ ಇನ್ನಿತರ ಸೌಲಭ್ಯಗಳಿದ್ದು ಡಾ||ಬಸವರಾಜು, ಹೃದ್ರೋಗ ತಜ್ಞ ಡಾ||ಮಧು,ಮಧುಮೇಹ ತಜ್ಞ ಸಂದೀಪ್, ಶಸ್ತ್ರಚಿಕಿತ್ಸಾ ತಜ್ಞ ಬಸವರಾಜು,ದಿವಾಕರ್, ಕೀಲು,ಮೂಳೆ ತಜ್ಞ ಕಿರಣ್,ಪವನ್, ಸ್ತ್ರೀ ಮತ್ತು ಪ್ರಸೂತಿ ತಜ್ಞ ರವಿಕುಮಾರ್,ವರದಕಿರಣ್, ಮಕ್ಕಳ ತಜ್ಞರಾದ ಧರ್ಮಕುಮಾರ್,ಉಮಾಪತಿ, ಚರ್ಮರೋಗ ತಜ್ಞ ಸತೀಶ್ ಸೇರಿದಂತೆ ತುಮಕೂರು ಸತ್ಯಸಾಯಿ ಆಸ್ಪತ್ರೆಯ ದಂತ ಹಾಗೂ ಕಣ್ಣು ಪರೀಕ್ಷಾ ವೈದ್ಯರು ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸೌಲಭ್ಯ ಪಡೆಯುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ|| ಕೆ.ಎಂ.ಬಸವರಾಜು(9900587275), ರವೀಶ್(9448533976), ಗಂಗಾಧರರಾವ್(9448628289) ಅವರನ್ನು ಸಂಪರ್ಕಿಸಬಹುದಾಗಿದೆ.

ಹೋಬಳಿಯಾದ್ಯಂತ ಉತ್ತಮ ಮಳೆ

ಕಳದೊಂದು ವಾರದಿಂದ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಬಹುದಿನಗಳಿಂದ ಮಳೆ ನಿರೀಕ್ಷೆಯಲ್ಲಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದಾರೆ. ಹುಳಿಯಾರು ಪಟ್ಟಣದ ಅಸುಪಾಸಿನಲ್ಲಂತೂ ಕಳೆದ ಐದಾರು ವರ್ಷಗಳಿಂದ ಮಳೆ ಕಾಣದೆ ಕಂಗಾಲಾಗಿದ್ದ ಈ ಭಾಗದ ರೈತರಿಗೆ ಸದ್ಯ ಸುರಿಯುತ್ತಿರುವ ಮಳೆ ಜೀವಸೆಲೆ ತಂದಂತಾಗಿದೆ. ಹುಳಿಯಾರು ಹೋಬಳಿ ಚಿಕ್ಕಬಿದರೆ ಭಾಗದಲ್ಲಿ ಮಳೆಗೆ ಕಟ್ಟೆಗಳಲೆಲ್ಲಾ ನೀರು ತುಂಬಿದೆ . ಬೋರನಕಣಿವೆ ವ್ಯಾಪ್ತಿಯಲ್ಲಿ ಬುಧವಾರ 62.4 ಮೀ.ಮೀ ಹಾಗೂ ಗುರುವಾರ 55.4 ಮೀ.ಮೀ ಮಳೆ ಪ್ರಯಾಣ ದಾಖಲಾಗಿದ್ದರೆ. ಹುಳಿಯಾರು ಭಾಗದಲ್ಲಿ ಬುಧವಾರದಂದು 24.3 ಮೀಮೀ ಹಾಗೂ ಗುರುವಾರದಂದು 45.1 ಮೀಮೀ ಮಳೆ ದಾಖಲಾಗಿದೆ. ಭಾರಿ ಮಳೆಯಾಗದಿದ್ದರು ರಾತ್ರಿ ಸಮಯ ಬರುತ್ತಿರುವ ಮಳೆಯಿಂದಾಗಿ ತೋಟತುಡಿಕೆಗಳು ನೀರು ತುಂಬಿ ಕೆರೆಕಟ್ಟೆಗಳಿಗೆ ನೀರಿನ ಹರಿವು ಬರುತ್ತಿದೆ. ಆವಳಗೆರೆ,ಚಿಕ್ಕಬಿದರೆ,ದೊಡ್ಡಬಿದರೆ,ಪೋಚಕಟ್ಟೆ ಕೆರೆಗಳಿಗೆ ಎರಡು ದಿನಗಳಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರುತ್ತಿದ್ದು, ಇದೇ ರೀತಿ ಇನ್ನೆರಡು ದಿನ ಮಳೆ ಬಂದಲ್ಲಿ ಕೋಡಿಬೀಳುವ ಸಾಧ್ಯತೆಗಳಿವೆ. ಗಾಣಧಾಳು, ಹೊಯ್ಸಳಕಟ್ಟೆ, ದಸೂಡಿ, ದಬ್ಬಗುಂಟೆ, ಬೆಳ್ಳಾರ, ಕೆಂಕೆರೆ, ಯಳನಡು, ಕೋರಗೆರೆ, ಸೀಗೇಬಾಗಿ, ಶಿಡ್ಲಕಟ್ಟೆ,ಬರಕನಹಾಲ್ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು ರಾಗಿ ಬೆಳೆಗೆ ಅನುಕೂಲವಾಗಲಿದ್ದು, ಜೊತೆಗೆ ನೀರಿ ಕೊರತೆಯಿಂದ

ಇದು ಕೆಸರು ಗದ್ದೆಯಲ್ಲ , ಬಸ್ ನಿಲ್ದಾಣ

ಯಾವುದೇ ಸೌಲಭ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಸುಮಾರು ಮಳೆಗೂ ಮಳೆ ನೀರು ನಿಲ್ಲುವ ಮೂಲಕ ಕೆಸರು ಗದ್ದೆಯಾಗಿ ಮಾರ್ಪಟ್ಟು ಪ್ರಯಾಣಿಕರು ಓಡಾಡಲು,ಬಸ್ ಗೆ ಹತ್ತಲು ಪರಿಪಾಟಲು ಪಡುವಂತಾಗಿದೆ. ಹುಳಿಯಾರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಸರುಂಟಾಗಿ ಅದರಲ್ಲಿಯೇ ನಡೆದಾಡುವ ದುಸ್ಥಿತಿ ಪ್ರಯಾಣಿಕರದ್ದಾಗಿದೆ.  ಕಳೆದೆರಡು ವರ್ಷಗಳಿಂದಲೂ ಬಸ್ ಶೆಲ್ಟರ್ ನಿರ್ಮಾಣದ ಕಾಮಗಾರಿ ಆಗಾಗ್ಗೆ ಅಲ್ಪಸ್ವಲ್ಪ ನಡೆಯುವುದರ ಮುಖಾಂತರ ಕೂರಲು ಜಾಗವಿಲ್ಲದೆ ನಿಲ್ಲುವುದಕ್ಕು ಸ್ಥಳವಿಲ್ಲದೆ , ಮಳೆ ಬಂದರಂತೂ ರಕ್ಷಣೆಯೇ ಇಲ್ಲದೆ ಪೆಟ್ಟಿಗೆ ಅಂಗಡಿಗಳನ್ನು ಆಶ್ರಯಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ನೀರು ಹೊರಗೆ ಹರಿದು ಹೋಗದೆ ಅಲ್ಲೆ ನಿಂತು ಕೆಸರುಂಟಾಗುತ್ತದೆ . ಈ ಹಿಂದಿನ ಬಸ್ ಶೆಲ್ಟರ್ ಕಿತ್ತು ಹೊಸದಾಗಿ ಸಿಮೆಂಟ್ ಪ್ಲಾಟ್ ಪಾರಂ ನಿರ್ಮಿಸಿದಾಗ ಯಾವುದೇ ರೀತಿಯ ಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದರಿಂದ ನೀರು ಹರಿಯಲು ಎಲ್ಲೂ ಆಸ್ಪದವಿಲ್ಲದೆ ನಿಲ್ದಾಣದಲ್ಲೇ ನೀರು ನಿಲ್ಲುತ್ತದೆ.ನಿಲ್ದಾಣದ ಪ್ಲಾಟ್ ಫಾರಂನ ಎರಡು ಬದಿಗಳಲ್ಲೂ ಡಾಂಬಾರ್ ಅಥವಾ ಸಿಮೆಂಟ್ ಹಾಕದಿರುವುದರಿಂದ ಮಳೆ ಬಂದಾಗ ನಿಲ್ಲುವ ನೀರಿಗೆ ಕೆಸರಾಗಿ ಮಾರ್ಪಡುತ್ತದೆ. ಮಹಿಳೆಯರು,ಮಕ್ಕಳು, ವೃದ್ದರು, ಜಾರಿ ಬೀಳುವ ಭೀತಿಯಲ್ಲೇ ಬಸ್ ಹತ್ತಲು ಆ ಕೆಸರು,ನೀರಿನ ನಡುವೆ ನಡೆದು

ದುರ್ಗಿ ಅಲಂಕಾರ

ಹುಳಿಯಾರು ಗ್ರಾಮದೇವತೆ ದುರ್ಗಾಪರಮೇಶ್ವರಿಗೆ ಮಾಡಿದ್ದ ದುರ್ಗಿ ಅಲಂಕಾರ ಆಕರ್ಷಣೀಯವಾಗಿತ್ತು.

ಅಂಬಿನೋತ್ಸವ

ಹುಳಿಯಾರು ಹೋಬಳಿ ಕೆಂಕೆರೆ ಶ್ರೀರಂಗನಾಥಸ್ವಾಮಿಯ ದಸರಾದ ಅಂಗವಾಗಿ ನಡೆದ ಅಂಬಿನೋತ್ಸವದಲ್ಲಿ ಹಿರಿಯ ಅಜ್ಜೇಗೌಡರು ಬಾಳೆಕಂದನ್ನು ಕತ್ತರಿಸಿದರು.

ವಾಲ್ಮೀಕಿ ಜಯಂತಿ ಆಚರಣೆ

ಹುಳಿಯಾರು  ಹೋಬಳಿ ವಾಲ್ಮೀಕಿ ನಾಯಕ ಸಂಘದವತಿಯಿಂದ ಸಂಘದ ಕಛೇರಿಯಲ್ಲಿ ಬುಧವಾರದಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಹುಳಿಯಾರು ಹೋಬಳಿ ವಾಲ್ಮೀಕಿ ನಾಯಕ ಸಂಘದವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ದುರ್ಗರಾಜ್ ಮಾತನಾಡಿ, ಅಹಿಂಸಾತತ್ವದ ಮಹತ್ವವನ್ನು ಸಮಾಜಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿಯಾಗಿದ್ದು, ಆ ಸಮುದಾಯದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮಹಾನ್ ಗ್ರಂಥ ರಾಮಾಯಣ ರಚಿಸಿದ ಮಹಾನ್ ವ್ಯಕ್ತಿ ವಾಲ್ಮೀಕಿಯ ಆದರ್ಶ ಗುಣಗಳ ಪಾಲನೆ ಮಾಡಬೇಕಿದೆ. ಅಲ್ಲದೆ ನಾಯಕ ಸಮುದಾಯದವರು ಒಗ್ಗಟ್ಟಾಗಿ ಸೇರುವ ಮೂಲಕ ಇನ್ನೂ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವಲ್ಲಿ ಮುಂದಾಗಬೇಕಿದೆ ಎಂದರು. ಸಂಘದ ಗೌರವಾಧ್ಯಕ್ಷ ಲಕ್ಷ್ಮಿನರಸಿಂಹಯ್ಯ,ಕಾರ್ಯದರ್ಶಿ ರೇಣುಕಪ್ರಸಾದ್,ಖಜಾಂಜಿ ಶಿವಲಿಂಗಯ್ಯ, ಪದಾಧಿಕಾರಿಗಳಾದ ಟ್ಯ್ರಾಕ್ಟರ್ ಮಂಜು,ದಿವಾಕರ್, ಶಿವಪ್ಪನಾಯಕ,ಶ್ರೀರಂಗಯ್ಯ, ರಂಗಸ್ವಾಮಿ,ನಾಗರಾಜು, ತಮ್ಮಯ್ಯ,ಭೈರೇಶ್ ,ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹುಳಿಯಾರು ರಸ್ತೆ ಅವ್ಯವಸ್ಥೆ: ಅನಾಹುತಕ್ಕೆ ರಹದಾರಿ

ಪಟ್ಟಣದ ರಸ್ತೆ ಮಾರ್ಗ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಹದಗೆಟ್ಟಿರುವ ರಸ್ತೆಯಲ್ಲಿ ಸರಿ ದಾರಿ ಎಲ್ಲಿದೆ ಎಂದು ಹುಡುಕಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಈವರೆಗೂ ಗುಂಡಿ ಬಿದ್ದಿರುವ ರಸ್ತೆಗೆ ತೇಪೆ ಭಾಗ್ಯವೂ ದಕ್ಕಿಲ್ಲ. ಅಲಲ್ಲಿ ಗ್ರಾ.ಪಂ ನಿಂದ ಕಲ್ಲು ಜೆಲ್ಲಿ ಹಾಕಿರುವುದು ಬಿಟ್ಟರೆ ಸರಿಯಾಗಿ ಎಲ್ಲೂ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾತ್ರ ಆಗಿಲ್ಲ. ಹುಳಿಯಾರಿನ ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಬಳಿ ತಿಪಟೂರು ಕಡೆ ಹೋಗುವ ರಸ್ತೆ ತುಂಬ ಬಿದ್ದಿರುವ ಗುಂಡಿಗಳು. ಹುಳಿಯಾರು ಮಾರ್ಗವಾಗಿ ಪ್ರಮುಖ ಎರಡು ಹೆದ್ದಾರಿಗಳು ಹಾದು ಹೋಗಲಿದ್ದು ಅವುಗಳ ಕಾಮಗಾರಿಗೆ ಚಾಲನೆ ಸಿಕ್ಕಿದ್ದರೂ ಸಹ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದೆ. ರಸ್ತೆ ಅಭಿವೃದ್ದಿ ಹೆಸರಲ್ಲಿ ಬಂದು ಪಟ್ಟಣದ ಕೆಲವೆಡೆ ಸೇತುವೆಗಳ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಕಾರ್ಯ ಕೈಗೊಂಡಿಲ್ಲ. ಪಟ್ಟಣದಲ್ಲಿನ ತಿಪಟೂರು ರಸ್ತೆಯ ಒಣಕಾಲುವೆ ಬಳಿ, ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಬಳಿ, ರಾಂಗೋಪಾಲ್ ಸರ್ಕಲ್ ಹತ್ತಿರ, ಎಪಿಎಂಸಿ ಹತ್ತಿರ, ಬಸ್ ನಿಲ್ದಾಣ ಬಳಿ, ಗಾಂಧೀಪೇಟೆ ತಿರುವಿನ ಬಳಿ ಆಳುದ್ದ ಗುಂಡಿಗಳು ಬಿದ್ದಿದ್ದು, ರಸ್ತೆಯಾವುದು ಎಂದು ತಿಳಿಯದಿದ್ದು, ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಸವಾಲಾಗಿದೆ. ಮಳೆ ಬಂದರಂತೂ ಈ ಸಮಸ್ಯೆ ಹೇಳತೀರದಾಗಿದ್ದು ನೀರು ನಿಂತು ರಸ್ತೆಯಾವುದು, ಗುಂಡಿ ಎಲ್ಲಿದೆ ಎಂಬುದೇ ತಿಳಿಯದಂತಾಗಿ ಕೆಲ

ರಾಜಬೀದಿ ಮೆರವಣಿಗೆ

ಹುಳಿಯಾರಿನಲ್ಲಿ ಬನಶಂಕರಿ ಅಮ್ಮನವರ ರಾಜಬೀದಿ ಮೆರವಣಿಗೆಯಲ್ಲಿ ಮಹಿಳೆಯರಿಂದ ಭಜನೆ ಹಾಗೂ ಕೋಲಾಟ ನಡೆಯಿತು.

ಮೆರವಣಿಗೆ

ಹುಳಿಯಾರಿನಲ್ಲಿ ದಸರಾ ಪ್ರಯುಕ್ತ ನಡೆದ ಅಂಬಿನೋತ್ಸವದ ನಂತರ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮದೇವಿ , ಶ್ರೀರಂಗನಾಥಸ್ವಾಮಿ,ಬೀರಲಿಂಗೇಶ್ವರಸ್ವಾಮಿಯ ಮೆರವಣಿಗೆ ನಡೆಯಿತು.

ಭೂಕೈಲಾಸೋತ್ಸವ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಶ್ರೀರಂಗನಾಥಸ್ವಾಮಿ ಹಾಗೂ ಕಾಳಮ್ಮದೇವಿಯ ಭೂಕೈಲಾಸೋತ್ಸವ ವಿಜೃಂಭಣೆಯಿಂದ ನಡೆಯಿತು.