ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಕೆ.ವೈ.ಶಿವಮೂರ್ತಿ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಳಿಯಾರಿನ ಗಾಣಾಧಾಳು ಗ್ರಾ.ಪಂ.ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೆ.ವೈ.ಶಿವಮೂರ್ತಿ ಅಭಿನಂದಿಸುತ್ತಿರುವುದು. |
ಜಿ.ಎಸ್.ಶ್ರೀನಿವಾಸ್ ಅವರ ರಾಜಿನಾಮೆಯಿಂದ ತೆರನಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆದಿದ್ದು, ಶಿವಮೂರ್ತಿ ಅವರನ್ನು ಬಿಟ್ಟರೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕಾಮಾಕ್ಷಮ್ಮ ಶಿವಮೂರ್ತಿಅವರನ್ನೇ ಅಧ್ಯಕ್ಷರನ್ನಾಗಿ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಮೂರ್ತಿ ಮಾತನಾಡಿ ಗ್ರಾಮೀಣ ಭಾಗವಾಗಿರುವ ಹಾಗೂ ಜಿಲ್ಲೆಯ ಗಡಿಭಾಗವೂ ಸಹ ಆದ ಗಾಣಧಾಳು ಗ್ರಾಮಕ್ಕೆ ಸರ್ಕಾರದಿಂದ ದೊರೆಯಬೇಕಾದ ಹತ್ತಾರು ಸೌಲಭ್ಯಗಳು ಸಮರ್ಪಕರೀತಿಯಲ್ಲಿ ಸಿಗುತ್ತಿಲ್ಲ, ಈ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯೊಂದನ್ನು ತೆರೆಯುವಂತೆ ಹತ್ತಾರು ಬಾರಿ ಆರೋಗ್ಯ ಇಲಾಖೆಗೆ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ತನ್ನ ಅಧಿಕಾರದ ಅವಧಿಯೊಳಗಾಗಿ ಗಾಣಾಧಾಳಿಗೆ ಆಸ್ಪತ್ರೆ ತರುವುದಾಗಿ ದೃಢವಾಗಿ ತಿಳಿಸಿದರು. ಈವೇಳೆ ಗ್ರಾ.ಪಂ.ಸದಸ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ