ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಪಾತಲಿಂಗೇಶ್ವರ ದೇವಾಲಯದ ಹಿಂಭಾಗದ ನಿಂಗಜ್ಜಪಾತಯ್ಯನ ಮನೆಮುಂದೆ ವಿದ್ಯುತ್ ವೈರ್ ಕೈಗೆಟಕುವಂತೆ ಜಗ್ಗಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.
ದೊಡ್ಡಬಿದರೆಯಲ್ಲಿ ಕೈಗೆಟಕುವಂತೆ ಜಗ್ಗಿರುವ ವಿದ್ಯುತ್ ಲೈನ್. |
ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ವಿದ್ಯುತ್ ವೈರ್‍ಗಳು ಜಗ್ಗಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹಾಗೂ ಲೈನ್‍ಮೆನ್ ಗಳಿಗೆ ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ತಿಂಗಳು ಬಿಲ್ ಗೆ ಬರುವ ಬಿಲ್‍ಕಲೆಕ್ಟರ್ ಗೆ ವೈರ್ ಜಗ್ಗಿರುವುದನ್ನು ತೋರಿಸಿದರೆ ಲೈನ್ ಮೆನ್ ಬಂದು ಸರಿ ಮಾಡುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಾರೆ ಹೊರತು ಯಾವುದೇ ಕೆಲಸ ಮಾಡಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.
ವಿದ್ಯುತ್ ಸಂಪರ್ಕ ಕಲ್ಪಿಸಿರುವ ಎರಡು ಕಂಬಗಳು ದೂರವಿರುವುದರಿಂದ ವೈರ್‍ಗಳು ಜಗ್ಗಿದ್ದು ಕೈಗೆಟಕುವಂತಿದೆ ಈ ಲೈನ್ ಓಡಾಡುವ ದಾರಿಯಲ್ಲಿ ಹಾದುಹೋಗಿದ್ದು ನಿತ್ಯ ಹತ್ತಾರೂ ಜನ,ಎತ್ತಿನಗಾಡಿ, ಟ್ರ್ಯಾಕ್ಟರ್ ತಿರುಗಾಡುತ್ತಿರುತ್ತವೆ. ಅಲ್ಲದೆ ಮಕ್ಕಳುಮರಿ ಆಟವಾಡುತ್ತಿರುತ್ತಾರೆ. ಗಾಡಿಮೇಲೆ ಹೋಗುವಾಗ ತಾಕಿದರೆ ಅಥವಾ ಏನಾದರೂ ತುಂಡಾಗಿ ಯಾರ ಮೇಲಾದರೂ ಬಿದ್ದರೆ ಪ್ರಾಣಾಪಾಯ ಸಂಭವಿಸುತ್ತದೆ . ಇಂತಹ ಯಾವುದೇ ಅವಘಡ ಸಂಭವಿಸುವ ಮೊದಲೇ ಬೆಸ್ಕಾಂನವರು ಎಚ್ಚೆತ್ತು ವೈರ್ ಜಗ್ಗಿರುವುದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ