ಕನ್ನಡರಾಜ್ಯೋತ್ಸವದ ಪ್ರಯುಕ್ತ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ (ತಾ.1) ಶನಿವಾರ ಬೆಳಿಗ್ಗೆ ರಾಜ್ಯೋತ್ಸವ ಆಚರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು ಕನ್ನಡ ನಾಡು-ನುಡಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಕಾವ್ಯ,ಕಥೆ,ಕವನ,ಚುಟುಕು ಕವನ ವಾಚನ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಪ್ರದರ್ಶಿಸಬಹುದಾಗಿದೆ. ಉಪನ್ಯಾಸಕರಾದ ಸಯ್ಯದ್ ಇಬ್ರಾಹಿಂ, ಅಶೋಕ್,ಹನುಮತಪ್ಪ, ಶ್ರೀನಿವಾಸ್,ಶಿವಣ್ಣ ಸೇರಿದಂತೆ ಇತರರು
ಉಪಸ್ಥಿತರಿರುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ