ಹುಳಿಯಾರು ಪಟ್ಟಣದ ಗಾಂಧಿಪೇಟೆಯ ಶನೇಶ್ಚರಸ್ವಾಮಿ ಕಾರ್ತಿಕೋತ್ಸವ ಅಮವಾಸ್ಯೆಯ ಗುರುವಾರದಂದು ಪ್ರಾರಂಭವಾದರೆ ,ರಂಗನಾಥಸ್ವಾಮಿ ಹಾಗೂ ವಾಸವಿ ದೇವಾಲಯದ ಶ್ರೀಕನ್ನಿಪರಮೇಶ್ವರಿ ಅಮ್ಮನವರ ಕಾರ್ತೀಕೋತ್ಸವ ಪಾಡ್ಯದ ಶುಕ್ರವಾರದಿಂದ ಪ್ರಾರಂಭವಾಗಿದೆ.
ಹುಳಿಯಾರಿನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿದ ಭಕ್ತರು. |
ಕಾರ್ತೀಕೋತ್ಸವದ ಅಂಗವಾಗಿ ಜ್ಯೋತಿಪಣ ಗಾಣಿಗರ ಸಂಘದಿಂದ ಶನೇಶ್ಚರ ದೇವಾಲಯದಲ್ಲಿ ಹೋಮ,ಹವನಾದಿಗಳನ್ನು ನೆರವೇರಿಸಿ ಸಂಜೆ ಸಮಿತಿಯ ಸದಸ್ಯರ ಸಮುಖ್ಖದಲ್ಲಿ ದೀಪ ಏರಿಸಲಾಯಿತು.
ಆರ್ಯವೈಶ್ಯ ಮಂಡಳಿವತಿಯಿಂದ ಶ್ರೀಕನ್ನಿಪರಮೇಶ್ವರಿ ಅಮ್ಮನವರಿಗೆ ಶುಕ್ರವಾರದಂದು ಅಭಿಷೇಕ,ಅರ್ಚನೆ ,ಅಲಂಕಾರ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ವೇಳೆಗೆ ದೇವಾಲಯದ ಆವರಣದಲ್ಲಿ ಹಣತೆಗಳನ್ನು ಹಚ್ಚಿಟ್ಟಿದ್ದಲ್ಲದೆ, ದೇವಾಲಯದ ಮುಭಾಗದಲ್ಲಿ ದೀಪವನ್ನೇರಿಸುವ ಮೂಲಕ ದೀಪಾವಳಿ ಆಚರಣೆ ನಡೆಸಿದರು.
ರಂಗನಾಥಸ್ವಾಮಿ ದೇವಾಲಯದಲ್ಲಿ ಇತಿಹಾಸ ಪ್ರಸಿದ್ದ ಶ್ರೀಅನಂತಶಯನ ರಂಗನಾಥಸ್ವಾಮಿಯ 54ನೇ ವರ್ಷದ ಕಾರ್ತಿಕೋತ್ಸವಕ್ಕೆ ಪಟ್ಟಣದ ಸೀತಾರಾಮಪ್ರತಿಷ್ಠಾನದಿಂದ ಚಾಲನೆ ನೀಡಲಾಯಿತು. ಸ್ವಾಮಿಗೆ ಅಭಿಷೇಕ,ಅರ್ಚನೆ ,ಅಲಂಕಾರ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು. ಆನಂದಾದ್ರಿ ಹಾಗೂ ಶಂಕರ ಸೇವಾ ಭಜನಾ ಮಂಡಳಿಯಿಂದ ಭಜನಾಕಾರ್ಯ ನಡೆದು ಮಹಾಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಸೀತಾರಾಮಪ್ರತಿಷ್ಠಾನದಿಂದ ಮುಂದಿನ ಒಂದು ತಿಂಗಳಕಾಲ ಸಂಜೆ ಮಹಿಳಾ ಮಂಡಳಿಯಿಂದ ಭಜನೆ ಹಾಗೂ ನಿತ್ಯ ಸ್ವಾಮಿಗೆ ವಿವಿಧ ರೀತಿಯ ಅಲಂಕಾರ ಸೇವೆ ನಡೆಯಲಿದ್ದು ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರಲಾಯಿತು. ವಿಪ್ರ ಸಂಘದ ಲಕ್ಷ್ಮಿನರಸಿಂಹಯ್ಯ, ಹು.ಕೃ.ವಿಶ್ವನಾಥ್, ಲೋಕೇಶಣ್ಣ,ಸುಭ್ರಮಣ್ಯ, ಮೋಹನ್, ಪರಮೇಶ್ವರಯ್ಯ ಮುಂತಾದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ