ಮೈತ್ರೇಯ ಟ್ರಸ್ಟ್ ಹಾಗೂ ಹುಳಿಯಾರು ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಾಳೆ(ತಾ. 11) ಶನಿವಾರದಂದು ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ,ಜೌಷಧಿ ವಿತರಣೆ ಹಾಗೂ ಕಣ್ಣು ಪೂರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಮಧುಮೇಹ ರಕ್ತಪರೀಕ್ಷೆ,ಇಸಿಜಿ, ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆರಿದಂತೆ ಇನ್ನಿತರ ಸೌಲಭ್ಯಗಳಿದ್ದು ಡಾ||ಬಸವರಾಜು, ಹೃದ್ರೋಗ ತಜ್ಞ ಡಾ||ಮಧು,ಮಧುಮೇಹ ತಜ್ಞ ಸಂದೀಪ್, ಶಸ್ತ್ರಚಿಕಿತ್ಸಾ ತಜ್ಞ ಬಸವರಾಜು,ದಿವಾಕರ್, ಕೀಲು,ಮೂಳೆ ತಜ್ಞ ಕಿರಣ್,ಪವನ್, ಸ್ತ್ರೀ ಮತ್ತು ಪ್ರಸೂತಿ ತಜ್ಞ ರವಿಕುಮಾರ್,ವರದಕಿರಣ್, ಮಕ್ಕಳ ತಜ್ಞರಾದ ಧರ್ಮಕುಮಾರ್,ಉಮಾಪತಿ, ಚರ್ಮರೋಗ ತಜ್ಞ ಸತೀಶ್ ಸೇರಿದಂತೆ ತುಮಕೂರು ಸತ್ಯಸಾಯಿ ಆಸ್ಪತ್ರೆಯ ದಂತ ಹಾಗೂ ಕಣ್ಣು ಪರೀಕ್ಷಾ ವೈದ್ಯರು ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸೌಲಭ್ಯ ಪಡೆಯುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ|| ಕೆ.ಎಂ.ಬಸವರಾಜು(9900587275), ರವೀಶ್(9448533976), ಗಂಗಾಧರರಾವ್(9448628289) ಅವರನ್ನು ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ