ಗ್ರಾಮದ ಸ್ವಚ್ಚತೆ ಗ್ರಾಮದ ಪ್ರತಿಯೊಬ್ಬರ ಸಾಮಾಜಿಕ ಕರ್ತವ್ಯವಾಗಿದ್ದು , ಇದಕ್ಕೆ ಪ್ರತೊಯೊಬ್ಬರು ಸಹಕಾರ ನೀಡಬೇಕು ಹಾಗೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಕೆಂಕೆರೆ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾ.ಪಂ.ವತಿಯಿಂದ ಸ್ವಚ್ಚಭಾರತ ಅಭಿಯಾನದಡಿ ತೇರುಬೀದಿಯಲ್ಲಿ ಸ್ವಚತಾಕಾರ್ಯ ಮಾಡುತ್ತಿರುವುದು.
|
ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯಲ್ಲಿ ಗಾಂಧಿಜಯಂತಿಯ ಆಚರಣೆ ಹಾಗೂ ಸ್ವಚ್ಚ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ಅವರು ಪಿಡಿಓ ಹಾಗೂ ಸದಸ್ಯರೊಂದಿಗೆ ಒಟ್ಟಾಗಿ ಸೇರಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಶ್ರಮದಾನ ನಡೆಸಿದರು.
ಗ್ರಾಮದ ತೇರುಬೀದಿಯ ಗಣೇಶ ದೇವಾಲಯದ ಅಕ್ಕಪಕ್ಕ ಹಾಗೂ ಪಂಚಾಯ್ತಿ ಆವರಣ ಸೇರಿದಂತೆ ಇತರೆಡೆ ಬಿದಿದ್ದ ತ್ಯಾಜ್ಯವಸ್ತುಗಳನ್ನು ಒಂದೆಡೆ ಶೇಖರಿಸಿ ನಂತರ ತೆರವು ಮಾಡಿದರು.
ಕಾಂಗ್ರೆಸ್ ಗಿಡ ಕಿತ್ತು ಒಂದೆಡೆ ಹಾಕುತ್ತಿದ್ದರಲ್ಲದೆ, ಚರಂಡಿಗಳಲ್ಲಿ ತುಂಬಿದ್ದ ಕಸಕಡ್ಡಿಗಳನ್ನು ತೆಗೆದು ಸ್ವಚ್ಚತೆ ಮಾಡಿದರು. ಇದೇ ಸಮಯದಲ್ಲಿ ಸ್ವಚ್ಚ ಭಾರತದ ಪರಿಕಲ್ಪನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುತ್ತಾ ಜಾಗೃತಿ ಮೂಡಿಸಲಾಯಿತು. ಉಪಾಧ್ಯಕ್ಷೆ ರೇಣುಕಮ್ಮ,ಪಿಡಿಒ ಮಹ್ಮದ್ ಮಾಬುಸಾಬ,ಸದಸ್ಯರುಗಳಾದ ಕುಮಾರಣ್ಣ, ಬೆಂಕಿ ಬಸವರಾಜು, ಚಂದ್ರಕಲಾ ಮುಂತಾದವರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ