ಆಯುಧಪೂಜೆ ಹಾಗೂ ಬಕ್ರೀದ್ ಹಬ್ಬದಲ್ಲಿ ಯಾವುದೇ ಅಹಿತಕರಘಟನೆ ಜರುಗದಂತೆ , ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ಜಯಕುಮಾರ್ ನೇತೃತ್ವದಲ್ಲಿ ಶಾಂತಿಸಭೆ ನಡೆಸಲಾಯಿತು.
ಹುಳಿಯಾರು ಪೋಲಿಸ್ ಠಾಣೆಯಲ್ಲಿ ಆಯುಧಪೂಜೆ ಹಾಗೂ ಬಕ್ರೀದ್ ಹಬ್ಬದ ಅಂಗವಾಗಿ ಸಿಪಿಐ ಜಯಕುಮಾರ್ ನೇತೃತ್ವದಲ್ಲಿ ಸಾರ್ವಜನಿಕ ಶಾಂತಿಸಭೆ ನಡೆಸಲಾಯಿತು. |
ಈ ವೇಳೆ ಸಿಪಿಐ ಮಾತನಾಡಿ , ಹಬ್ಬಗಳ ಆಚರಣೆ ಸಮಾಜದ ಎಲ್ಲರಲ್ಲೂ ಸಾಮರಸ್ಯ ಮೂಡಿಸಬೇಕು. ಒಬ್ಬರಿಗೊಬ್ಬರು ಸಹಕಾರಯುತವಾಗಿ ನಡೆದುಕೊಂಡು ಆಚರಿಸಬೇಕು ಎಂದರಲ್ಲದೆ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದರೀತಿ ಹಬ್ಬದ ಆಚರಣೆ ಶಾಂತರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ಪಿಎಸೈ ಘೋರ್ಪಡೆ ಮಾತನಾಡಿ, ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಮರು ಅಣ್ಣ-ತಮ್ಮಂದಿರಂತಿರುವುದು ತಮಗೆ ತಿಳಿದಿದೆ. ಸಮುದಾಯದ ಮುಖಂಡರುಗಳು ತಮ್ಮ ಆಚರಣೆಗಳಲ್ಲಿ ಆಕಸ್ಮಿಕವಾಗಿ ಘಟಿಸಬಹುದಾದ ದುರ್ಘಟನೆಗಳ ಬಗ್ಗೆ ಎಚ್ಚರವಹಿಸಿ ಅವು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಬಡಗಿರಾಮಣ್ಣ, ಮೀಸೆರಂಗಪ್ಪ,ಜಹೀರ್ ಸಾಬ್,ಪುಟ್ಟಮ್ಮ, ಬೆಂಕಿಬಸವರಾಜು,ಬಡ್ಡಿಪಟ್ಟಣ್ಣ, ಬಳ್ಳೆಕಟ್ಟೆ ರಾಮಣ್ಣ,ಡಿಶ್ ಬಾಬು,ಮಲ್ಲೇಶ್,ಲೋಕೇಶ್,ಇಮ್ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ