ಪಟ್ಟಣದಲ್ಲಿ ಆಯುಧಪೂಜೆಯ ಹಿನ್ನಲ್ಲೆಯಲ್ಲಿ ಗುರುವಾರದಂದು ಹಬ್ಬದಸಂತೆ ನಡೆಯಿತು. ಸಂತೆಗೆ ಆಗಮಿಸಿದ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಬ್ಬಕ್ಕೆ ಬೇಕಾದ ಹೂ,ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುತ್ತಿದುದ್ದು ಸಾಮಾನ್ಯವಾಗಿತ್ತು. ಆಯುಧಪೂಜೆ ಪ್ರಯುಕ್ತ ಎಲ್ಲೆಡೆ ರಾಶಿರಾಶಿ ಬೂದುಗುಂಬಳ ಕಂಡುಬಂತು.
ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಆಯುಧಪೂಜೆ ಅಂಗವಾಗಿ ಬಂದಿದ್ದ ಕುಂಬಳಕಾಯಿ ಕೊಂಡುಕೊಳ್ಳುತ್ತಿರುವ ಗ್ರಾಹಕರು. |
ಹುಳಿಯಾರು ಬಸ್ ನಿಲ್ದಾಣದ ಅಂಗಡಿಯೊಂದರಲ್ಲಿ ವಾಹನ ಅಲಂಕಾರಕ್ಕೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿರುವ ಗ್ರಾಹಕರು. |
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶಾವಂತಿಗೆ,ಬಟನ್ಸ್,ಕುಂಬಳಕಾಯಿ ಬೆಲೆ ತುಸು ಕಡಿಮೆಯಾಗಿತ್ತು, ಶಾವಂತಿಗೆ ಮಾರೊಂದಕ್ಕೆ 50-60 ಇದ್ದರೆ, ಕುಂಬಳಕಾಯಿಬೆಲೆ ಕಳೆದ ಬಾರಿಗಿಂತ ಕಡಿಮೆಯಾಗಿದ್ದು ಸಣ್ಣ ಗಾತ್ರದವಕ್ಕೆ 20 ರಿಂದ 30 ಇದ್ದರೆ, ಭಾರಿ ಗಾತ್ರದವಕ್ಕೆ 50-80 ರೂ ಇತ್ತು. ಈ ಹಿಂದಿನ ವರ್ಷದಂತೆ ಈ ಸಲವೂ ಉತ್ತಮ ಬೆಲೆ ಇರುತ್ತದೆಂದು ಹಬ್ಬಕ್ಕೆ ಎರಡುದಿನ ಮುಂಚಿತವಾಗಿಯೇ ರೈತರು ಕುಂಬಳಕಾಯಿಯನ್ನು ಮಾರಲು ತಂದಿದ್ದರು. ಪಟ್ಟಣದ ಅನೇಕ ಕಡೆ ಕುಂಬಳಕಾಯಿಯ ರಾಶಿರಾಶಿಯೇ ಇದ್ದು ಗ್ರಾಹಕರಿಗಾಗಿ ಕಾದುಕೂರುವಂತೆ ಪರಿಸ್ಥಿತಿ ಮಾರಾಟಗಾರನದಾಗಿತ್ತು. ಬಾಳೆಕಂದು ಜೊತೆಒಂದಕ್ಕೆ 10-30ರೂ, ಚೆಂಡು ಹೂ ಕೆ.ಜಿ 30ರೂಗೆ ಮಾರಾಟವಾಗುತ್ತಿದ್ದವು. ಪುಟ್ಟಬಾಳೆಹಣ್ಣನ್ನು ಹೊರತುಪಡಿಸಿದರೆ ಸೇಬು,ದ್ರಾಕ್ಷಿ,ಮೊಸುಂಬೆ ಸೇರಿದಂತೆ ಇತರೆ ಹಣ್ಣುಗಳ ಬೆಲೆ ಎಂದಿನಂತೆ ಇದ್ದು ಪುಟ್ಟಬಾಳೆಹಣ್ಣು ಮಾತ್ರ ಕೆ.ಜಿ 60 ರೂಗೆ ಬಿಕರಿಯಾಗುತ್ತಿತ್ತು.
ಮೂರ್ನಾಲ್ಕು ದಿನ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ಇನ್ನಿತರ ಊರುಗಳಲ್ಲಿ ಕೆಲಸ ಮಾಡಿಕೊಂಡಿದ್ದ ಜನ ತಮ್ಮ ತಮ್ಮ ಊರುಗಳಿಗೆ ಬರುತ್ತಿದ್ದು ಬಸ್ ಗಳೆಲ್ಲಾ ರಷಾಗಿದ್ದವಲ್ಲದೆ, ಪಟ್ಟಣದ ಬಸ್ ನಿಲ್ದಾಣ ಜನಜಂಗುಳಿಯಿಂದ ಕೂಡಿತ್ತು.
ಹುಳಿಯಾರಿನ ಮ್ಯಾಕಾನಿಕ್ ಅಂಗಡಿಯೊಂದರಲ್ಲಿ ಹಳೆಯವಸ್ತುಗಳನ್ನು ಹೊರಹಾಕಿ ಆಯುಧಪೂಜೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದು. |
ಮಕ್ಕಳು ಹಾಗೂ ವಾಹನ ಮಾಲೀಕರು ತಮ್ಮ ವಾಹನವನ್ನು ಅಲಂಕರಿಸಲು ಬೇಕಾದ ಮಿಂಚಿನ ಹಾರ, ಟೇಪ್,ಬಲೂನು ಸೇರಿದಂತೆ ಇತರ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿಳುತ್ತಿದ್ದರೆ, ಗ್ಯಾರೇಜ್, ಮ್ಯಾಕಾನಿಕ್ ಅಂಗಡಿಯವರು, ಲೇತ್ ನವರು, ವೆಲ್ಡಿಂಗ್ ಶಾಪ್ ನವರು ತಮ್ಮ ಅಂಗಡಿಯಲ್ಲಿನ ಹಳೆವಸ್ತುಗಳನ್ನು ಒಂದೆಡೆ ಹಾಕಿ ಅಂಗಡಿಗಳನ್ನು ಸ್ವಚ್ಚ ಮಾಡಿಕೊಳ್ಳುತ್ತಿರುವುದರಲ್ಲಿ ಮಗ್ನರಾಗಿದ್ದರು. ಒಟ್ಟಾರೆ ಪಟ್ಟಣದೆಲ್ಲೆಡೆ ಆಯುಧಪೂಜೆಯ ಸಂಭ್ರಮ ತುಂಬಿತುಳುಕುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ