ಹುಳಿಯಾರು ಪಟ್ಟಣದ ಗ್ರಾಮದೇವತೆ ಹುಳಿಯಾರಮ್ಮನವರ ಕಾರ್ತಿಕೋತ್ಸವಕ್ಕೆ ಮಂಗಳವಾರ ಸಂಜೆ ಅಮ್ಮನವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಕಾರ್ತೀಕದ ಅಂಗವಾಗಿ ನಡೆದ ಹುಳಿಯಾರಮ್ಮನ ಕುಣಿತ. |
ಕಾರ್ತೀಕೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಅಮ್ಮನವರ ವಿಶೇಷ ಪೂಜೆ ನಡೆದು, ಸಂಜೆ ಅಲಂಕೃತ ಉತ್ಸವ ಮೂರ್ತಿಯನ್ನು ಹೊರಡಿಸಲಾಯಿತು. ಹುಳಿಯಾರಮ್ಮನ ಮೂಲ ದೇವಸ್ಥಾನ, ರಂಗನಾಥಸ್ವಾಮಿ ದೇವಸ್ಥಾನ, ಕೆಂಚಮ್ಮ ದೇವಾಲಯಕ್ಕೆ ಭೇಟಿಯಿತ್ತು ವಾದ್ಯಮೇಳ ಹಾಗೂ ಭಕ್ತಾಧಿಗಳ ಉದ್ಘೋಷದೊಂದಿಗೆ ದೀಪ ಏರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷರಾದ ನರೇಂದ್ರಬಾಬು,ಬಡಗಿರಾಮಣ್ಣ, ದುರ್ಗಪ್ಪ, ಬೀರಪ್ಪ, ಚಂದ್ರಣ್ಣ, ದುರ್ಗರಾಜ್ ಕೋಡಿಪಾಳ್ಯ ನಾಗರಾಜು ಸೇರಿದಂತೆ ಹುಳಿಯಾರು, ಕೇಶವಾಪುರ, ತಿಪಟೂರು ರಸ್ತೆ, ಕೋಡಿಪಾಳ್ಯ,ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯದ ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ