ಹುಳಿಯಾರು ಹೋಬಳಿಯ ಯಳನಡು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಗುರು ಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಶುಕ್ರವಾರದಂದು ಆಯುಧಪೂಜೆ ಮೂಲಕ ಚಾಲನೆಗೊಂಡಿದ್ದು,
ತಾ.16ರ ವರೆಗೆ ಒಟ್ಟು 11 ದಿನಗಳಕಾಲ ವೈಭಯುತ ದಸರಾ ಮಹೋತ್ಸವ ಜರುಗಲಿದೆ.
ವಿಜಯದಶಮಿ ಅಂಗವಾಗಿ ಯಳನಡು ಸಿದ್ದರಾಮೇಶ್ವರ ಸ್ವಾಮಿ ಮನೆಮನೆಗೆ ತೆರಳಿ ಹಣ್ಣುಕಾಯಿ ಸ್ವೀಕಾರ ಮಾಡಿತು. |
ವಿಜಯದಶಮಿ ಪ್ರಯುಕ್ತ ಸ್ವಾಮಿಯನ್ನು ಮೂಲಸ್ಥಾನದಿಂದ ಗ್ರಾಮಕ್ಕೆ ಬಂಗಾರದ ಪಲ್ಲಕ್ಕಿಯಲ್ಲಿ ಕರೆದೊಯ್ಯುಲಾಯಿತು. ಯಳನಡು ಗ್ರಾಮದೇವತೆ ಕರಿಯಮ್ಮ,ಭಟ್ಟರಹಳ್ಳಿಯ ಸಿದ್ದರಾಮೇಶ್ವರಸ್ವಾಮಿ ಹಾಗೂ ಅದೇ ಗ್ರಾಮದ ಬಂದಮ್ಮ ದೇವರೊಂದಿಗೆ ಮನೆಮನೆಗೆ ತೆರಳಿ ಹಣ್ಣುಕಾಯಿ ಸೇವೆ ಸ್ವೀಕರಿಸಲಾಯಿತು. ಸಂಜೆ ಗ್ರಾಮಸ್ಥರ ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಅಂಬಿನ ಸೇವೆ ನೆರವೇರಿತು. ಭಾನುವಾರದಂದು ಗಂಗಮ್ಮನ ಕೆರೆಸೇವೆ ಹಾಗೂ ಆರತಿ ಮಹೋತ್ಸವ ಜರುಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ