ವಿಜಯದಶಮಿ ಅಂಗವಾಗಿ ಪಟ್ಟಣದ ಬನಶಂಕರಿ ಅಮ್ಮನವರ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ದೇವಾಂಗ ಮಂಡಳಿ,ದೇವಾಂಗ ಯುವಕ ಸಂಘ,ಬನದ ಹುಣ್ಣಿಮೆ ದಾಸಿಮಯ್ಯ ಮಂಡಳಿ ಇವರುಗಳ ಸಹಯೋಗದೊಂದಿಗೆ ದೇವಾಲಯ ಸಮಿತಿ ಅಧ್ಯಕ್ಷ ಅನಂತಕುಮಾರ್, ಈಶ್ವರ್,ಲಕ್ಷ್ಮೀಕಾಂತ್,ದಾಸಪ್ಪ ಇವರುಗಳ ನೇತೃತ್ವದಲ್ಲಿ ಶನಿವಾರ ಸಂಜೆ ವಾದ್ಯ ಮೇಳದೊಂದಿಗೆ ಊರಿನ ರಾಜಬೀದಿಗಳಲ್ಲಿ ಅಮ್ಮನವರ ಉತ್ಸವ ನಡೆಯಿತು.ಉತ್ಸವದುದ್ದಕ್ಕೂ ಭಜನಾ ಮಂಡಳಿಯಿಂದ ದೇವಿ ಕುರಿತು ಭಜನೆ ನಡೆಯಿತು.
ಅಮ್ಮನವರಿಗೆ ಮಾಡಿದ್ದ ಸರ್ವಾಲಂಕೃತೆ ಬನಶಂಕರಿ ದೇವಿಯ ಅಲಂಕಾರ ಗಮನ ಸೆಳೆಯಿತು.ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಅಮ್ಮನವರ ಉಯ್ಯಾಲೋತ್ಸವ ನಡೆಯಿತು.ಅರ್ಚಕ ಶ್ರೀಧರ್, ದೇವಾಲಯ ಸಮಿತಿ ಕೇಶವಮೂರ್ತಿ,ಕಲಾವಿದ ಗೌಡಿ,ನಾಗರಾಜು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
![]() |
| ಹುಳಿಯಾರಿನ ಬನಶಂಕರಿ ಅಮ್ಮನವರ ಉಯ್ಯಾಲೋತ್ಸವ |

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ