ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಆಯುಧಪೂಜೆಯ ಅಂಗವಾಗಿ ಶುಕ್ರವಾರ ಸಂಜೆ ಕಾಳಮ್ಮದೇವಿಯ ಸಮ್ಮುಖದಲ್ಲಿ ನೂರೊಂದು ಎಡೆ ಸೇವೆ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಆಯುಧಪೂಜೆಯ ಅಂಗವಾಗಿ ನಡೆದ ನೂರೊಂದೆಡೆ ಸೇವೆ. |
ಕಳೆದ ಅಮವಾಸ್ಯೆಯ ದಿನ ಶ್ರೀರಂಗನಾಥಸ್ವಾಮಿಯನ್ನು ಪಟ್ಟಕ್ಕೆ ಕೂರಿಸುವ ಕಾರ್ಯ ನಡೆದು ಅಂದಿನಿಂದ ಆಯುಧಪೂಜೆಯ ದಿನದವರೆವಿಗೂ ನಿತ್ಯ ಭಕ್ತರಿಂದ ಸ್ವಾಮಿಗೆ ವಿಶೇಷ ಪೂಜೆ,ಎಡೆಸೇವೆ,ಪನಿವಾರ ಸೇವೆ ನಡೆಯಿತು.ಶುಕ್ರವಾರ ಸಂಜೆ ದೇವಾಲಯದ ಆವರಣದಲ್ಲಿ ದಾಸಪ್ಪಗಳ ಬವನಾಸಿ ತುಂಬುವ ಕಾರ್ಯದೊಂದಿಗೆ ನೂರೊಂದು ಎಡೆಗಳನ್ನು ಹಾಕಿ ಬಹುಪರಾಕ್ ಹಾಕುತ್ತಾ ವಾದ್ಯದೊಂದಿಗೆ ಮಹಾಮಂಗಳಾರತಿ ನಡೆಸಲಾಯಿತು. ಆಗಮಿಸಿದ್ದ ಭಕ್ತರಿಗೆ ಪನಿವಾರ ವಿತರಿಸಲಾಯಿತು. ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಉಪಸ್ಥಿತರಿದ್ದು ಸ್ವಾಮಿಯ ದರ್ಶನಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ