ಹುಳಿಯಾರು ಪಟ್ಟಣದ ವಿವಿಧ ದೇವಾಲಯಗಳಲ್ಲಿ ಕಳೆದ ಹತ್ತುದಿನಗಳಿಂದ ಶರನ್ನವರಾತ್ರಿ ಪೂಜಾ ಮಹೋತ್ಸವ ವೈಭಯುತವಾಗಿ ಜರುಗಿತು.
ನವರಾತ್ರಿ ಅಂಗವಾಗಿ ಒಂಭತ್ತು ದಿನಗಳ ಕಾಲ ಎಲ್ಲಾ ದೇವರುಗಳಿಗೂ ನಿತ್ಯ ಕುಂಕುಮಾರ್ಚನೆ , ಪಂಚಾಮೃತಾಭಿಷೇಕ , ದುರ್ಗಿಪಾರಾಯಣ ಹಾಗೂ ವಿಶೇಷ ಅಲಂಕಾರ ನೆರವೇರಿತು. ನಿತ್ಯ ರಾತ್ರಿ ಭಕ್ತಾಧಿಗಳ ಸಮ್ಮುಖದಲ್ಲಿ ಭಜನೆ ಹಾಗೂ ಅಷ್ಟಾವಧಾನ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಗಿತ್ತು.
ಹುಳಿಯಾರಿನಲ್ಲಿ ನವರಾಟ್ರಿ ಪ್ರಯುಕ್ತ ಕಾಳಮ್ಮ,ಬನಶಂಕರಿ ಹಾಗೂ ದುರ್ಗಾಪರಮೇಶ್ವರಿ ದೇವರುಗಳಿಗೆ ಮಾಡಿರುವ ಅಲಂಕಾರ. |
ಬನಶಂಕರಿ ದೇವಾಲಯದಲ್ಲಿ ದೇವಾಂಗಮಂಡಳಿಯಿಂದ ಬನಶಂಕರಿ ಅಮ್ಮನವರ 17 ನೇ ವರ್ಷದ ಪೂಜಾಮಹೋತ್ಸವ ನಡೆದು ಅಮ್ಮನವರಿಗೆ ದುರ್ಗೆಯ ನಾನಾ ಅವತಾರಗಳಾದ ಅರಿಶಿನ ಕುಂಕುಮ,ಬ್ರಹ್ಮಚಾರಿಣಿ, ಗಜಲಕ್ಷ್ಮಿ,ಕಾತ್ಯಾಯನಿ,ಸ್ಕಂದಮಾತಾ, ಮಹಾಗೌರಿ,ಹಂಸವಾಹಿನಿ ಸರಸ್ವತಿ,ವನದುರ್ಗಿ,ಕಾಳರಾತ್ರಿ,ಸರ್ವಾವಂಕೃತ ಬನಶಂಕರಿ ಅಲಂಕಾರ ಮಾಡಲಾಗಿತ್ತು.
ವಿಶ್ವಕರ್ಮ ಸಮಾಜದಿಂದ ಕಾಳಿಕಾಂಭ ದೇವಾಲಯದಲ್ಲಿ ಕಾಳಿಮಾತೆಯನ್ನು ಗಜಲಕ್ಷ್ಮಿ,ಬ್ರಹ್ಮಚಾರಿಣಿ,ಹಿಮಕಾಳಿ,ಲಲಿತಾಪರಮೇಶ್ವರಿ, ಕಾಮಾಕ್ಷ್ಮಿ,ಸ್ಕಂದಮಾತಾ, ಸರಸ್ವತಿ,ವನದುರ್ಗಿ, ರಾಜರಾಜೇಶ್ವರಿಯಾಗಿ ಅಲಂಕಾರಿಸಲಾಗಿತ್ತು.
ಗ್ರಾಮದೇವತೆ ದುರ್ಗಮ್ಮ ದೇವಾಲಯದಲ್ಲಿ ಅಮ್ಮನವರನ್ನು ಒಂಭತ್ತು ದಿನಗಳಕಾಲ ಪಟ್ಟಕ್ಕೆ ಕೂರಿಸಿ ನಿತ್ಯ ನಾನಾ ಅಲಂಕಾರ ಹಾಗೂ ದುರ್ಗಿಪಾರಾಯಣ ಮಾಡುವ ಮೂಲಕ ಸರ್ವಾಲಂಕಾರ ಸೇವೆ ಸಲ್ಲಿಸಲಾಯಿತು.
ಗ್ರಾಮದೇವತೆ ಹುಳಿಯಾರಮ್ಮ,ಅನಂತಶಯನ ರಂಗನಾಥಸ್ವಾಮಿ,ಆರ್ಯವೈಶ್ಯಸಮಾಜದ ಕನ್ನಿಕಾ ಪರಮೇಶ್ವರಿ ಹಾಗೂ ಲಕ್ಷ್ಮಿ ದೇವಾಲಯದಲ್ಲೂ ಕೂಡ ಒಂಭತ್ತು ದಿನಗಳ ಕಾಲ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿತು.ಎಲ್ಲಾ ದೇವಾಲಯಗಳಲ್ಲು ಮಾಡಿದ ಅಲಂಕಾರಗಳು ಭಕ್ತರ ಕಣ್ಮನ ಸೆಳೆಯಿತು. ನಿತ್ಯ ಎಲ್ಲಾ ದೇವಾಲಯಗಳಲ್ಲೂ ಅಪಾರ ಸಂಖ್ಯೆಯ ಭಕ್ತಾಧಿಗಳು ಹಾಜರಿದ್ದು ದೇವಿಯ ದರ್ಶನ ಪಡೆದು ಕೃತಾರ್ಥರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ