ಹುಳಿಯಾರು ಪಟ್ಟಣದ ರಾಮಗೋಪಾಲ್ ಸರ್ಕಲ್ ನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ಘಟಿಸಿದೆ.
ಮುಖಾಮುಖಿ ಡಿಕ್ಕಿ ಹೊಡೆದ ಲಾರಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ . |
ಶಿರಾಳಕೊಪ್ಪದಿಂದ ಹುಳಿಯಾರು ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಬಸ್ ಹಾಗೂ ಚಿ.ನಾ.ಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ್ದು, ಬಸ್ ಹಾಗೂ ಲಾರಿಯ ಬಲಭಾಗದಲ್ಲಿ ನಜ್ಜುಗುಜ್ಜಾಗಿ, ಗ್ಲಾಸ್ ಎಲ್ಲಾ ಪುಡಿಯಾಗಿದೆ. ಅದೃಷ್ಟವಶಾತ್ ಬಸ್‍ನ ಪ್ರಯಾಣಿಕರಿಗಾಗಲಿ, ಲಾರಿಯವರಿಗಾಗಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕರಿಗೆ ಅಲ್ಪಸ್ವಲ್ಪ್ಪ ಗಾಯಗಳಾಗಿದ್ದು, ಎರಡೂ ವಾಹನಗಳನ್ನು ಠಾಣೆಯಲ್ಲಿಗೆ ತಂದು ನಿಲ್ಲಿಸಲಾಗಿದೆ. ಪಿಎಸೈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಂಡಿ ಕಾರಣ : ರಸ್ತೆಯಲ್ಲಾ ಗುಂಡಿಬಿದ್ದು ಹಾಳಾಗಿದ್ದು ಇವತ್ತಿನ ಅಪಘಾತಕ್ಕೆ ಹಾಳಾಗಿರುವ ರಸ್ತೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ದುರಸ್ಥಿ ಬಗ್ಗೆ ಅನೇಕಬಾರಿ ಗಮನ ಸೆಳೆದರೂ ಕೂಡ ಇಲಾಖೆ ಮುಂದಾಗದೆ ನಿರ್ಲಕ್ಷವಹಿಸುತ್ತಿದ್ದು ಇಂತಹ ಅಪಘಾತಗಳು ಇನ್ನೆಷ್ಟು ಸಂಭವಿಸಿ ಪ್ರಾಣಬಲಿ ತೆಗದುಕೊಳ್ಳಬೇಕಾಗಿದೆ ಎಂಬುದು ತಿಳಿಯದಾಗಿದೆ ಎಂದು ಅಕ್ರೋಶವ್ಯಕ್ತಪಡಿಸಿದರು. ಇನ್ನಾದರು ಇಲಾಖೆ ಎಚ್ಚೆತ್ತು ರಸ್ತೆ ದುರಸ್ಥಿ ಮಾಡಬೇಕಾಗಿ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ