ಸಾಲುಸಾಲು ಹಬ್ಬದ ಹಿನ್ನಲೆಯಲ್ಲಿ ತಮ್ಮತಮ್ಮ ಊರುಗಳಿಗೆ ಬಂದಿದ್ದವರು ವಾಪಸ್ಸ್ ತೆರಳಲು ಪರದಾಡುವಂತಾಯಿತು. ಬೆಂಗಳೂರಿಗೆ ತೆರಳುವವರು ಹೆಚ್ಚಿದ್ದರಿಂದ ಹಾಗೂ ಖಾಸಗಿ ಬಸ್ ಗಳ ಸಂಚಾರ ಕೊರತೆಯಿಂದಾಗಿ ಬಸ್ ನಲ್ಲಿ ಸ್ಥಳ ಹಿಡಿಯಲು ಹರಸಾಹಸಪಡುವಂತಾಗಿತ್ತು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು. |
ದಸರಾ,ಆಯುಧಪೂಜೆ ಹಾಗೂ ಬಕ್ರೀದ್ ಹಬ್ಬಗಳ ಸಾಲು ರಜೆಗಳು ಮುಗಿದ ಹಿನ್ನಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಮುಂಜಾನೆ ಬೆಂಗಳೂರಿಗೆ ತೆರಳುವವರು ಅಪಾರ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ದಟ್ಟಣೆ ಹೆಚ್ಚಾಗಿ ಬರುವ ಬಸ್ ಗಳು ಹೊಸದುರ್ಗದಿಂದಲೇ ಭರ್ತಿಯಾಗಿ ಬರುತ್ತಿದ್ದರಿಂದ ಬಸ್ ನಲ್ಲಿ ನಿಲ್ಲಲೂ ಸಹ ಸ್ಥಳಾವಕಾಶ ಇರಲಿಲ್ಲ. ಹೇಗೋ ಸ್ವಲ್ಪ ಜಾಗ ಸಿಕ್ಕರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದ ಪ್ರಯಾಣಿಕರು ಹಬ್ಬಗಳ ಸಾಲಿನಲ್ಲಿ ಸಾರಿಗೆ ಇಲಾಖೆಯವರು ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಖಾಸಗಿ ಬಸ್ ಗಳು ಅಷ್ಟಾಗಿ ಕಂಡುಬಾರದ್ದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಮಾತ್ರವಿದ್ದು ಬಸ್ ಗಳ ಕೊರತೆ ಎದುರಾಗಿತ್ತು.
ಒಟ್ಟಾರೆ ಪ್ರತಿ ವರ್ಷ ಆಯುಧ ಪೂಜೆ ಸಮಯದಲ್ಲಿ ಪ್ರಯಾಣಿಕರ ಈ ಸಮಸ್ಯೆ ಬಗ್ಗೆ ಸಾರಿಗೆ ಇಲಾಖೆಯವರಿಗೆ ಅರಿವಿದ್ದರು ಸಹ ಗಮನ ಕೊಡದ ಇಲಾಖೆಯ ಕಾರ್ಯವೈಖರಿ ಬಗ್ಗೆ ಹರಿಹಾಯುತ್ತಿದ್ದರು .ಇನ್ನಾದರೂ ಸಾರಿಗೆ ಇಲಾಖೆ ಹಬ್ಬದ ಸಮಯದಲ್ಲಾದರೂ ಬೆಂಗಳೂರು - ಹುಳಿಯಾರು ವಿಶೇಷ ಬಸ್ ಗಳನ್ನು ಬಿಟ್ಟರೆ ಈ ಭಾಗದಕ್ಕೆ ಜನಕ್ಕೆ ಹೆಚ್ಚು ಅನುಕೂಲಕರವಾಗಲಿದೆ ಎನ್ನುವ ಒತ್ತಾಯ ಕೇಳಿಬಂತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ