ಹುಳಿಯಾರು ಹೋಬಳಿಯ ಯಳನಡು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಗುರು ಸಿದ್ದರಾಮೇಶ್ವರ ಸ್ವಾಮಿ ಸನ್ನಿದಾನದಲ್ಲಿ ತಾ.03ರ ಆಯುಧಪೂಜೆಯ ದಿನದಿಂದ ತಾ.16ರ ವರೆಗೆ ಒಟ್ಟು 11 ದಿನಗಳಕಾಲ ವೈಭಯುತ ದಸರಾ ಮಹೋತ್ಸವ ಜರುಗಲಿದೆ.
ತಾ.3ರ ಶುಕ್ರವಾರದಂದು ಆಯುಧಪೂಜೆ,ರುದ್ರಾಭಿಷೇಕ,ತಾ.4ರ ಶನಿವಾರ ವಿಜಯದಶಮಿ,ಅಂಬಿನಸೇವೆ ಹಾಗೂ ಸ್ವಾಮಿಯನ್ನು ಮೂಲಸ್ಥಾನದಿಂದ ಗ್ರಾಮಕ್ಕೆ ಬಂಗಾರದ ಪಲ್ಲಕ್ಕಿಯಲ್ಲಿ ಕರೆದೊಯ್ಯುವುದು, ತಾ.5ರ ಭಾನುವಾರ ಗಂಗಮ್ಮನ ಕೆರೆಸೇವೆ, ರಾತ್ರಿ ಆರತಿ ಸೇವೆ ನಡೆಯಲಿದೆ. ತಾ.6ರ ಸೋಮವಾರ ರಾತ್ರಿ ಸರ್ಪವಾಹನೋತ್ಸವ ಮತ್ತು ಬಂಗಾರದ ಅಡ್ಡಪಲ್ಲಕ್ಕಿ ಉತ್ಸವ, ತಾ.7ರ ಮಂಗಳವಾರ ರಾತ್ರಿ ಬೆಳ್ಳಿ ಬಸವನೋತ್ಸವ, ತಾ.8ರ ಬುಧವಾರ ಸಂಜೆ ಚಂದ್ರಮಂಡಲೋತ್ಸವ, ತಾ.9ರ ಗುರುವಾರ ಬಿಲ್ವವೃಕ್ಷವಾಹನೋತ್ಸವ, ತಾ.10ರ ಶುಕ್ರವಾರ ಉಯ್ಯಾಲೋತ್ಸವ, ತಾ.11 ರ ಶನಿವಾರ ತೇರು ಮಂಟಪದ ಕೈಲಾಸೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳ ಜೊತೆಗೆ ಅನ್ನಸಂತರ್ಪಣೆ ನಡೆಯಲಿದೆ.
ಹೋಬಳಿಯ ಭಟ್ಟರಹಳ್ಳಿ,ತಮ್ಮಡಿಹಳ್ಳಿಯ ದೇವಾಲವಲ್ಲದೆ, ಗಡಿಭಾಗದ ಮೈಲಾರಪುರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ದಸರ ಹಬ್ಬದ ಆಚರಣೆ ಬಲು ಜೋರಾಗಿದ್ದು , ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಆಚರಣೆ ನಡೆಯಲಿದೆ. ಮೈಲಾರಪುರದಲ್ಲಿ ಅ.2 ಆಯುಧಪೂಜೆ,ಅ.3 ವಿಜಯದಶಮಿ,ಅ.4 ಶಮಿಪೂಜೆ,ಅಂಬುಹೊಡೆಯುವುದು, ಶಸ್ತ್ರಪವಾಡ,ಸರಪಳಿಪವಾಡ, ಬಗಣಿಗೂಟ ಪವಾಡ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ