ಪಟ್ಟಣದ ರಸ್ತೆ ಮಾರ್ಗ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಹದಗೆಟ್ಟಿರುವ ರಸ್ತೆಯಲ್ಲಿ ಸರಿ ದಾರಿ ಎಲ್ಲಿದೆ ಎಂದು ಹುಡುಕಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಈವರೆಗೂ ಗುಂಡಿ ಬಿದ್ದಿರುವ ರಸ್ತೆಗೆ ತೇಪೆ ಭಾಗ್ಯವೂ ದಕ್ಕಿಲ್ಲ. ಅಲಲ್ಲಿ ಗ್ರಾ.ಪಂ ನಿಂದ ಕಲ್ಲು ಜೆಲ್ಲಿ ಹಾಕಿರುವುದು ಬಿಟ್ಟರೆ ಸರಿಯಾಗಿ ಎಲ್ಲೂ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾತ್ರ ಆಗಿಲ್ಲ.
ಹುಳಿಯಾರಿನ ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಬಳಿ ತಿಪಟೂರು ಕಡೆ ಹೋಗುವ ರಸ್ತೆ ತುಂಬ ಬಿದ್ದಿರುವ ಗುಂಡಿಗಳು. |
ಹುಳಿಯಾರು ಮಾರ್ಗವಾಗಿ ಪ್ರಮುಖ ಎರಡು ಹೆದ್ದಾರಿಗಳು ಹಾದು ಹೋಗಲಿದ್ದು ಅವುಗಳ ಕಾಮಗಾರಿಗೆ ಚಾಲನೆ ಸಿಕ್ಕಿದ್ದರೂ ಸಹ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದೆ. ರಸ್ತೆ ಅಭಿವೃದ್ದಿ ಹೆಸರಲ್ಲಿ ಬಂದು ಪಟ್ಟಣದ ಕೆಲವೆಡೆ ಸೇತುವೆಗಳ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಕಾರ್ಯ ಕೈಗೊಂಡಿಲ್ಲ. ಪಟ್ಟಣದಲ್ಲಿನ ತಿಪಟೂರು ರಸ್ತೆಯ ಒಣಕಾಲುವೆ ಬಳಿ, ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಬಳಿ, ರಾಂಗೋಪಾಲ್ ಸರ್ಕಲ್ ಹತ್ತಿರ, ಎಪಿಎಂಸಿ ಹತ್ತಿರ, ಬಸ್ ನಿಲ್ದಾಣ ಬಳಿ, ಗಾಂಧೀಪೇಟೆ ತಿರುವಿನ ಬಳಿ ಆಳುದ್ದ ಗುಂಡಿಗಳು ಬಿದ್ದಿದ್ದು, ರಸ್ತೆಯಾವುದು ಎಂದು ತಿಳಿಯದಿದ್ದು, ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಸವಾಲಾಗಿದೆ. ಮಳೆ ಬಂದರಂತೂ ಈ ಸಮಸ್ಯೆ ಹೇಳತೀರದಾಗಿದ್ದು ನೀರು ನಿಂತು ರಸ್ತೆಯಾವುದು, ಗುಂಡಿ ಎಲ್ಲಿದೆ ಎಂಬುದೇ ತಿಳಿಯದಂತಾಗಿ ಕೆಲ ಅಪಘಾತಗಳು ಸಹ ಸಂಭವಿಸುತ್ತಿರುತ್ತವೆ..
ರಸ್ತೆಯಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದಿದ್ದು ವಾಹನಗಳು ಆ ಗುಂಡಿಗಳನ್ನು ಇಳಿದು ಹತ್ತಿ ಹೋಗಬೇಕಿದ್ದು, ಹಲವಾರು ಬಾರಿ ಗುಂಡಿಗಿಳಿದ ವಾಹನಗಳು ಆಕ್ಸೆಲ್ ಮುರಿದುಕೊಂಡರೆ ಮತ್ತೆ ಕೆಲ ವಾಹನಗಳ ಮುಂಭಾಗಕ್ಕೆ ಗುಂಡಿಯ ಅಂಚು ತಕುತ್ತದೆ. ಅಲ್ಲದೆ ಬೈಕ್, ಆಟೋದಂತಹ ವಾಹನದವರು ತಮ್ಮ ವಾಹನ ಚಲಾಯಿಸಲು ಪ್ರಯಾಸಪಡುವಂತಾಗಿದೆ.
ಗಮನಕೊಡದ ಪಿಡಬ್ಯೂಡಿ : ಹೆದ್ದಾರಿ ರಸ್ತೆಗಳ ದುರಸ್ತಿಕಾರ್ಯ ಕೈಗೊಳ್ಳಬೇಕಾದ ಪಿಡಬ್ಯೂಡಿ ಇಲಾಖೆಯವರು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ಮೌನವಹಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ತಿಳಿಸಿದರೆ ಈಗಾಗಲೇ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಅವರೇ ಅದನ್ನು ಸರಿ ಮಾಡುತ್ತಾರೆ ಎಂಬ ಹಾರಿಕೆ ಉತ್ತರ ನೀಡುತ್ತಾ ಜಾರಿಕೊಳ್ಳುತ್ತಿದ್ದಾರೆ. ಸದಾ ಇಲ್ಲೇ ಸಂಚರಿಸುವ ಸ್ಥಳೀಯ ಗ್ರಾ.ಪಂ.ನವರು ಸಹ ಈ ಬಗ್ಗೆ ಯಾವುದೇ ಕ್ರಮಕೆಗೊಳ್ಳುವವಲ್ಲಿ ವಿಫಲವಾಗಿದ್ದಾರೆ. ಅಲ್ಲದೆ ನೆಪಮಾತ್ರಕ್ಕೆ ಕೆಲ ಗುಂಡಿಗಳಿಗೆ ಕಲ್ಲು,ಮಣ್ಣು ಹಾಕಿಸಿರುವುದನ್ನು ಬಿಟ್ಟರೆ , ರಸ್ತೆ ಮತ್ತೆ ಹದಗೆಡದಂತೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು, ರಸ್ತೆಯಲ್ಲಿನ ಗುಂಡಿಗಳೆಲ್ಲಾ ತುಂಬಿಕೊಂಡಿದ್ದು ವಾಹನಸವಾರರು ರಸ್ತೆ ಬಿಟ್ಟು ಪಕ್ಕದಲ್ಲಿ ವಾಹನ ಚಲಾಯಿಸುವಂತಾಗಿದೆ. ಅಲ್ಲದೆ ರಸ್ತೆ ಬದಿ ಸಂಚರಿಸುವ ಪಾದಾಚಾರಿಗಳಿಗೆ ಇದರಿಂದ ತೊಂದರೆಯಾಗಿದ್ದು ಪಾದಾಚಾರಿಗಳು,ಪ್ರಯಾಣಿಕರು,ವಾಹನಚಾಲಕರು ಸೇರಿದಂತೆ ಸಾರ್ವಜನಿಕರು ರಸ್ತೆ ದುರಸ್ತಿ ಬಗ್ಗೆ ಗಮನಕೊಡದ ಅಧಿಕಾರಿಗಳ ಕಾರ್ಯವೈಖರಿಗೆ ಛೀಮಾರಿ ಹಾಕುತ್ತಿದ್ದಾರಲ್ಲದೆ , ಶೀಘ್ರವೇ ರಸ್ತೆಯಲ್ಲಿನ ಗುಂಡಿಗಳ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಒತ್ತಾಯದ ಹಿನ್ನಲೆಯಲ್ಲಿ ಗ್ರಾ.ಪಂ.ನವರು ರಾಂಗೋಪಾಲ್ ಸರ್ಕಲ್ ನ ಗುಂಡಿಗೆ ಮಾತ್ರ ಕಲ್ಲು.ಜೆಲ್ಲಿ ಹಾಕಿರುವುದನ್ನು ಬಿಟ್ಟರೆ ಉಳಿದ ಕಡೆ ಬಿದ್ದಿರುವ ಗುಂಡಿಗಳ ಬಗ್ಗೆ ಲಕ್ಷ್ಯ ತೋರದಿರುವುದು ಎಂದಿನಂತೆ ಆ ಗುಂಡಿಗಳು ಆಗೆಯೇ ಇದ್ದು ಸಂಚರಿಸುವವರ ಪಾಲಿಗೆ ಮುಳುವಾಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ