ಭಾನುವಾರ ರಾತ್ರಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ಗಾಳಿಸಹಿತ ಮಳೆಯಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿ ನಷ್ಟ ಉಂಟಾಗಿದೆ. ಸಿಡಿಲಿನ ಆಘಾತಕ್ಕೆ ಕೆಂಕೆರೆಯಲ್ಲಿ ವ್ಯಕ್ತಿಯೊಬ್ಬ ಬಲಿಯಾದರೆ, ದೊಡ್ಡಬಿದರೆಯಲ್ಲಿ ತೆಂಗಿನಮರ ಆಹುತಿಯಾಗಿವೆ. ಅಲ್ಲದೆ ಬೀಸಿದ ಬಾರಿಗಾಳಿಯ ರಭಸಕ್ಕೆ ಗೊನೆಭರಿತ ಸುಮಾರು 200ಕ್ಕೂ ಅಧಿಕ ಬಾಳೆಗಿಡಗಳು ಧರೆಗುರುಳಿರುವ ಘಟನೆ ಹೋಬಳಿಯ ಕೆಂಕೆರೆ ಸಮೀಪದ ಬಸವನಗುಡಿಯ ಚನ್ನಬಸವಯ್ಯ ಅವರ ತೋಟದಲ್ಲಿ ನಡೆದಿದೆ.
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಬಸವನಗುಡಿಯ ಮಎಚೆಂಟ್ ಚನ್ನಬಸವಯ್ಯ ಅವರ ತೋಟದಲ್ಲಿ ಮಳೆಗಾಳಿಯಿಂದ ನೆಲಕ್ಕುರುಳಿರುವ ಬಾಳೆಗಿಡಗಳು. |
ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಾಗಿದ್ದು ಗೊನೆಭರಿತ ಬಾಳೆಗಿಡಗಳು ಸೋಮವಾರ ಬೆಳಗಿನಜಾವ ಬೀಸಿದ ಮಳೆಗಾಳಿಯಿಂದಾಗಿ ಅರ್ಧಕ್ಕೆ ಮುರಿದುಕೊಂಡು ಬಿದ್ದಿವೆ. ಬೆಳಿಗ್ಗೆ ತೋಟಕ್ಕೆ ಬಂದಾಗ ಬಾಳೆಗಿಡಗಳೆಲ್ಲಾ ನೆಲಕ್ಕೆ ಬಿದ್ದು,ಗೊನೆಗಳೆಲ್ಲಾ ಮುರಿದುಹೋಗಿರುವುದು ಕಂಡಿದ್ದಾಗಿ ತೋಟದ ಮಾಲೀಕ ಚನ್ನಬಸವಯ್ಯ ಹೇಳಿದ್ದು, ಸಾಲಸೂಲ ಮಾಡಿ ಬಾಳೆಗಿಡನ್ನು ಆರೈಕೆ ಮಾಡಿದ್ದು, ಉತ್ತಮ ಬೆಳೆಬಂದಿತ್ತು, ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೆ ಬಾಳೆಗೊನೆಗಳನ್ನು ಕೊಂಡು ಕೊಳ್ಳಲು ವರ್ತಕರು ಬಂದು ಕೇಳಿ ಹೋಗಿದ್ದರು. ಆದರೆ ಈಗ ಆಗಿರುವ ಘಟನೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ. ಇದಕ್ಕೆ ಸರ್ಕಾರದವತಿಯಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ