ಹುಳಿಯಾರು ಸಮೀಪದ ಮೋಟಿಹಳ್ಳಿ ಸಮೀಪದ ಎಂ.ವಿ.ಹಟ್ಟಿಯ ಬಸವೇಶ್ವರ ದೇವಾಲಯದ ಪ್ರಾರಂಭೋತ್ಸವ ವೈಭವಯುತವಾಗಿ ಜರುಗಿತು.
ಶನಿವಾರದಂದು ಮೋಟಿಹಳ್ಳಿ ಕರಿಯಮ್ಮದೇವಿ, ಬನಶಂಕರಿದೇವಿ, ಯಳನಡು ಕರಿಯಮ್ಮದೇವಿ ಸೇರಿದಂತೆ ವಿವಿಧ ದೇವರುಗಳ ಆಗಮನದೊಂದಿಗೆ ಗಂಗಾಪೂಜೆ,ಗೋಪೂಜೆ, ಮಹಾದ್ವಾರಪೂಜೆ, ಕಳಸ್ಥಾಪನೆ,ನವಗ್ರಹಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಯಿತು.
ಭಾನುವಾರ ಬೆಳಿಗ್ಗೆ ಶ್ರೀಸ್ವಾಮಿಯ ಪ್ರತಿಷ್ಠಾಪನೆ,ಕದಳಿಛೇದನ, ನೇತ್ರೋನ್ಮಿಲನ,ಪ್ರಾಣಪ್ರತಿಷ್ಠಾಪನೆ, ಶಕ್ತಿಹೋಮದೊಂದಿಗೆ ಮಹಾಕುಂಭಾಭಿಷೇಕ ನಡೆದು, ಹೋಮಕ್ಕೆ ಪೂರ್ಣಾಗುತಿ ಸಮರ್ಪಿಸಿ , ಮಹಾಮಂಳಾರತಿಯ ನಂತರ ಬಂದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಮುದ್ದಹನುಮೇಗೌಡ ಅವರು ಮಾತನಾಡಿ, ತಾಲ್ಲೂಕಿನಾದ್ಯಂತ ತಾವು ಪ್ರಾರಂಭಿಸಿರುವ "ಸಂಸದರ ನಡೆ ಹಳ್ಳಿಯಡೆಗೆ " ಕಾರ್ಯಕ್ರಮದ ಮೂಲಕ ಪ್ರತಿ ಹಳ್ಳಿಗಳಿಗೂ ಖುದ್ದಾಗಿ ತೆರಳಿ ಸಂಸ್ಯೆ ಅಲಿಸುತ್ತಿದ್ದು ಈ ಬಗ್ಗೆ ಕೆಲವರು ಅನಗತ್ಯ ಟೀಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.
ಹಳ್ಳಿಗಳ ಅಭಿವೃದ್ದಿಯಾದಲ್ಲಿ ದೇಶ ಅಭಿವೃದ್ದಿ ಎಂಬ ನಿಟ್ಟಿನಲ್ಲಿ ತಾವು ಕಾರ್ಯಕ್ರಮ ನಡೆಸುತ್ತಿದ್ದು ಸಂಸದನಾಗಿ ನನ್ನ ಕರ್ತವ್ಯ ಏನೆಂಬುದು, ಯಾವುದರ ಬಗ್ಗೆ ಧ್ವನಿ ಎತ್ತಬೇಕೆಂಬುದು ನನಗೆ ಅರಿವಿದ್ದು , ದೇಶದ ಸಮಸ್ಯೆ ಜೊತೆಗೆ ಕ್ಷೇತ್ರದ ,ಗ್ರಾಮಗಳ ಸಮಸ್ಯೆ ಪರಿಹರಿಸುವುದು ಕೂಡ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಸಲು ಸತೀಶ್, ಶೇಷಾನಾಯ್ಕ, ವೆಂಕಟೇಶ್,ವೈ.ಸಿ.ಸಿದ್ದರಾಮಯ್ಯ, ರುದ್ರೇಶ್, ಪ್ರಸನ್ನ ಸೇರಿದಂತೆ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ