ಆಧುನಿಕ ಜಗತ್ತಿನಲ್ಲಿ ನಾವುಗಳು ಸದಾಕಾಲ ಒತ್ತಡದ ಜೀವನ ಸಾಗಿಸುತ್ತಾ ನಮ್ಮ ಮನಸ್ಸಿನ ಸ್ವಾಸ್ಥ್ಯ ವನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿದ್ದು, ಮನಸ್ಸಿನ ಸ್ವಾಸ್ಥ್ಯ ವನ್ನು ಹದಗೆಡಿಸಿಕೊಳ್ಳುತ್ತಿದ್ದೇವೆಂದು ಸಿದ್ಧಶ್ರೀ ಕ್ಲಿನಿಕ್ ನ ವೈದ್ಯ ಸಿದ್ಧರಾಮಯ್ಯ ವಿಷಾಧಿಸಿದರು.
ಪಟ್ಟಣದ ಗ್ರಾ.ಪಂ.ಕಛೇರಿಯಲ್ಲಿ ನಡೆದ ಮಾನಸಿಕ ಸ್ವಾಸ್ಥ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನಸಿಕ ಸ್ವಾಸ್ಥ್ಯ ಕುರಿತು ಅವರು ಉಪನ್ಯಾಸನೀಡಿದರು.
ಹುಳಿಯಾರಿನಲ್ಲಿ ನಡೆದ ಮಾನಸಿಕ ಸ್ವಾಸ್ಥ್ಯ ದಿನಾಚರಣೆಯಲ್ಲಿ ವೈದ್ಯ ಸಿದ್ದರಾಮಯ್ಯ ಉಪನ್ಯಾಸ ನೀಡಿದರು. |
ವ್ಯಕ್ತಿಯ ಮನಸ್ಸು ಸೂಕ್ಷ್ಮವಾಗಿದ್ದು , ಸ್ವಲ್ಪ ಘಾಸಿಯಾದರೂ ಸಾಕು ಆತನ ವರ್ತನೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ ಇದರಿಂದ ಅನೇಕ ತೊಂದರೆಗಳು ಸಹ ಉಂಟಾಗಿ ವ್ಯಕ್ತಿ ಮಾನಸಿಕ ರೋಗಿಯಾಗುವ ಸಂಭವಗಳು ಹೆಚ್ಚಾಗಿರುತ್ತವೆ ಎಂದರು.
ದೈಹಿಕವಾಗಿ ತೊಂದರೆಯಾದರೆ ಶೀಘ್ರವೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಆದರೆ ಮಾನಸಿಕವಾಗಿ ತೊಂದರೆಗೊಳಗಾದರೆ ಅದರಿಂದ ಹೊರಬರುವುದು ಸುಲಭದ ಮಾತಲ್ಲ, ಇದರಿಂದ ವ್ಯಕ್ತಿಯ ಸಂಪೂರ್ಣ ಜೀವನವೇ ಅಸ್ಥವ್ಯಸ್ಥವಾಗುವ ಸಂಭವವಿರುತ್ತದೆ ಎಂದರು.
ಮಾನಸಿಕ ಅಸ್ವಾಸ್ಥ್ಯ ಕ್ಕೆ ಕಾರಣ: ಮಾನಸಿಕ ರೋಗಮೆದುಳಿಗೆ ಸಂಬಂಧಿಸಿದ್ದಾಗಿದ್ದು , ಹೆಚ್ಚು ಧೂಮಪಾನ,ಮದ್ಯಪಾನ, ಮಾದಕ ವ್ಯಸನಿಗಳಾಗುವುದರಿಂದ ಮನಸ್ಸಿನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತೇವೆ. ಕೆಲವರಿಗೆ ವಂಶಪಾರಂಪರ್ಯವಾಗಿಯೂ , ಸಾಂಸಾರಿಕ ತೊಂದರೆಯಿಂದ, ಸಮಾಜದಲ್ಲಿ ಒತ್ತಡದಿಂದಾಗಿ ಮಾನಸಿಕ ಅಸ್ವಸ್ಥರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದರು.
ಪರಿಹಾರ : ದಿನದಲ್ಲಿ ಕೆಲ ಗಂಟೆಗಳಾದರೂ ದೇಹ ದಂಡನೆ ಮಾಡುವುದರ ಜೊತೆಗೆ ವ್ಯಾಯಾಮ, ಧ್ಯಾನ ಮಾಡುವುದು ಹಾಗೂ ದುಶ್ಚಟಗಳಿಂದ ದೂರವಿರುವುದು, ಪ್ರಕೃತಿಯೊಂದಿಗೆ ಸಮರಸದಿಂದ ನಡೆಯುವುದು, ಶುದ್ಧಗಳಿಕೆಯ ಕಡೆ ಗಮನ ಕೊಡುವುದರಿಂದ ಮನಸ್ಸು ಸಹ ಶುಭ್ರವಾಗಿರುವುದರ ಜೊತೆಗೆ ಯಾವುದೇ ರೋಗಗಳು ಸುಳಿಯುವುದಿಲ್ಲ ಎಂದರು.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸಿದ್ದು, ಚಿ.ನಾ.ಹಳ್ಳಿ ನ್ಯಾಯಾಲಯದ ಎನ್.ವೀಣಾ, ಸರ್ಕಾರಿ ಅಭಿಯೋಜಕರಾದ ರವೀಂದ್ರ,ಸಂತೋಷ್, ವಕೀಲ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ವಕೀಲರಾದ ವಿಶ್ವನಾಥ್, ಹನುಮಂತಯ್ಯ,ಸದಾಶಿವು,ಚಿಕ್ಕಣ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ