ನಾಡ ಹಬ್ಬವಾದ ದಸರಾದಲ್ಲಿ ಆನೆಯ ಮೇಲೆ ಅಂಬಾರಿ ಕೂರಿಸಿ ಚಾಮುಂಡೇಶ್ವರಿಯ ಮೆರವಣಿಗೆ ಮಾಡುವುದು ಮೈಸೂರಿನ ಸಂಪ್ರದಾಯವಾದರೆ ಹೋಬಳಿಯ ದೊಡ್ಡಬಿದ್ದರೆಯಲ್ಲಿ ಕೂಡ ಅದಕ್ಕೇನು ಕಮ್ಮಿಯಿಲ್ಲದಂತೆ ಜಂಬೂಸವಾರಿ ನಡೆಯಿತು.ಆದರೆ ಇಲ್ಲಿ ಚಾಮುಂಡೇಶ್ವರಿ ಬದಲು ಬೆಳ್ಳಿಪಲ್ಲಕ್ಕಿಯಲ್ಲಿ ಪಾತಲಿಂಗೇಶ್ವರ ಸ್ವಾಮಿ ಮೆರವಣಿಗೆ ಮಾಡಲಾಯಿತು.
ಹುಳಿಯಾರು ಹೋಬಳಿ ದೊಡ್ಡಬಿದರೆಯಲ್ಲಿ ಪಾತಲಿಂಗೇಶ್ವರಸ್ವಾಮಿಯ ಅಂಬಾರಿ ಉತ್ಸವ ಅದ್ಧೂರಿಯಾಗಿ ಜರುಗಿತು. |
ಕಳೆದ ಹತ್ತುದಿನಗಳಿಂದ ನವರಾತ್ರಿ ಅಂಗವಾಗಿ ಪಾತಲಿಂಗೇಶ್ವರ ಸ್ವಾಮಿಯನ್ನು ಪಟ್ಟಕ್ಕೆ ಕೂರಿಸಿ ನಿತ್ಯ ಪೂಜೆ,ಅಭಿಷೇಕ ನಡೆಸಿದ್ದಲ್ಲದೆ, ಶನಿವಾರದಂದು ದಸರಾ ಪ್ರಯುಕ್ತ ಲಕ್ಕಮ್ಮದೇವಿ ಮಜ್ಜನಬಾವಿಯಲ್ಲಿ ಅಂಬು ನಡೆಸಲಾಯಿತು. ಬಸವಣ್ಣನಗುಡ್ಡೆಗೆ ತೆರಳಿ ಮಂಗಳಾರತಿ ಸಲ್ಲಿಸಿ ಪ್ರಸಾದವಿನಿಯೋಗ ಮಾಡಲಾಗಿತ್ತು.
ಸೋಮವಾರಂದು ಪಾತಲಿಂಗೇಶ್ವರ ಸ್ವಾಮಿಯ ಉತ್ಸವವನ್ನು ವೈಭವದಿಂದ ಜರುಗಿತು. ಸ್ವಾಮಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಅಂಬಾರಿಯಲ್ಲಿ ಏರಿಸಿ ರಾಜಬೀದಿ ಉತ್ಸವ ಮಾಡಲಾಯಿತು. ಉತ್ಸವದಲ್ಲಿ ಗ್ರಾಮದೇವತೆ ಕರಿಯಮ್ಮ,ಲಕ್ಕಮ್ಮ ಅಲ್ಲದೆ ಅವುಗಳ ಭಂಟರಾದ ವೀರಭದ್ರ,ಮಸಿಯಪ್ಪ,ದೂತರಾಯಗಳನ್ನು ಸಹ ಮೆರವಣಿಗೆ ಮಾಡಲಾಯಿತು. ಇದೇ ಗ್ರಾಮದ ರಾಜ್ಯ ಪ್ರಶಸ್ತಿ ಪಡೆದ ವೀರಗಾಸೆ ತಂಡದವರಿಂದ ವೀರಗಾಸೆ ನಡೆಯಿತು.
ಪಾತಲಿಂಗೇಶ್ವರ ದೇವಸ್ಥಾನದ ಅಣ್ಣತಮ್ಮಂದಿರು ,ಗ್ರಾಮಸ್ಥರ ಉಸ್ತುವಾರಿಯಲ್ಲಿ ನಡೆದ ಉತ್ಸವದಲ್ಲಿ ಸಣ್ಣಿಂಗಣ್ಣ,ಶಿವಲಣ್ಣ,ಹು.ಕರಿಯಪ್ಪ,ಕಾ.ಕರಿಯಪ್ಪ,ಲಕ್ಷ್ಮಯ್ಯ ಜಾನಿಕುಮಾರ,ಚಿಕ್ಕಣ್ಣ,ಶೇಖರ,ರಾಜ,ಗಿರೀಶ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡು ಉತ್ಸವ ಸುಸೂತ್ರವಾಗಿ ನಡೆಯಲು ಶ್ರಮಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ