ದೀಪಾವಳಿ ಹಬ್ಬದ ಅಮವಾಸ್ಯೆ ಹಿನ್ನಲೆಯಲ್ಲಿ ಲಕ್ಷ್ಮಿ ಪೂಜೆ ಅಂಗವಾಗಿ ಪಟ್ಟಣದಲ್ಲಿ ಗುರುವಾರದಂದು ಹೂ, ಹಣ್ಣಿನ ವ್ಯಾಪಾರ ಭರಾಟೆಯಿಂದ ಕೂಡಿತ್ತು.
ದೀಪಾವಳಿ ಹಬ್ಬದ ಅಂಗವಾಗಿ ಹುಳಿಯಾರಿನ ರಾಜ್ ಕುಮಾರ್ ರಸ್ತೆಯಲ್ಲಿ ಶಾವಂತಿಗೆ ಹೂ ಮಾರಾಟ ಜೋರಾಗಿತ್ತು. |
ಲಕ್ಷ್ಮಿ ಪೂಜೆಗೆ ಬೇಕಾದ ಹೂ, ಹಣ್ಣು ಸೇರಿದಂತೆ ಮತ್ತಿತರ ವಸ್ತುಗಳನ್ನು ಕೊಂಡುಕೊಳ್ಳಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಜನ ಆಗಮಿಸಿದ್ದರು. 60-70ರ ಅಜುಬಾಜಿನಲ್ಲಿದ್ದ ಸೇಬು ಕೆ.ಜಿ 120ರೂ , ಮೊಸಂಜಿ ಕೆ.ಜಿ 60, ಹೆಚ್ಚು ಬೇಡಿಕೆಯಿದ್ದ ಬಾಳೆಹಣ್ಣು ಕೆ.ಜಿ 70-80 ಇದ್ದರೆ ಸೇವಂತಿಗೆ ಮಾರೊಂದಕ್ಕೆ 30 ರಿಂದ 40 ರೂ ಗೆ ಮಾರಾಟಲಾಗುತ್ತಿದ್ದವು. ಚೆಂಡು ಹೂ ಕೆ.ಜಿಗೆ 20-30ರೂ ಇತ್ತು. ಸಂತೆಯಲ್ಲಿ ಮಣ್ಣಿನ ಹಣತೆಗಳ ವ್ಯಾಪಾರ ಸಹ ಜೋರಾಗಿತ್ತು. ಆದರೆ ಆಗಾಗ್ಗೆ ಬರುತ್ತಿದ್ದ ಮಳೆಯಿಂದಾಗಿ ಪಟಾಕಿ ವ್ಯಾಪಾರ ಮಾತ್ರ ಕುಸಿದಿತ್ತು. ಅಕ್ಕಪಕ್ಕದ ಹಲ್ಳಿಗಳಿಂದ ಜನ ಮಕ್ಕಳಿಗೆ ಬಟ್ಟೆ ಕೊಳ್ಳು ಮುಂದಾಗಿದ್ದರಿಂದ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿಯಿತ್ತು. ಅಲ್ಲದೆ ಅಲಂಕಾರಿಕ ವಸ್ತುಗಳ ಮಾರಾಟವೂ ಸಹ ಜೋರಾಗಿದ್ದು ಒಟ್ಟಾರೆ ಎಲ್ಲೆಡೆ ದೀಪಾವಳಿ ಸಂಭ್ರಮ ತುಂಬಿ ತುಳುಕುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ