ಯಾವುದೇ ಸೌಲಭ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಸುಮಾರು ಮಳೆಗೂ ಮಳೆ ನೀರು ನಿಲ್ಲುವ ಮೂಲಕ ಕೆಸರು ಗದ್ದೆಯಾಗಿ ಮಾರ್ಪಟ್ಟು ಪ್ರಯಾಣಿಕರು ಓಡಾಡಲು,ಬಸ್ ಗೆ ಹತ್ತಲು ಪರಿಪಾಟಲು ಪಡುವಂತಾಗಿದೆ.
ಹುಳಿಯಾರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಸರುಂಟಾಗಿ ಅದರಲ್ಲಿಯೇ ನಡೆದಾಡುವ ದುಸ್ಥಿತಿ ಪ್ರಯಾಣಿಕರದ್ದಾಗಿದೆ. |
ಕಳೆದೆರಡು ವರ್ಷಗಳಿಂದಲೂ ಬಸ್ ಶೆಲ್ಟರ್ ನಿರ್ಮಾಣದ ಕಾಮಗಾರಿ ಆಗಾಗ್ಗೆ ಅಲ್ಪಸ್ವಲ್ಪ ನಡೆಯುವುದರ ಮುಖಾಂತರ ಕೂರಲು ಜಾಗವಿಲ್ಲದೆ ನಿಲ್ಲುವುದಕ್ಕು ಸ್ಥಳವಿಲ್ಲದೆ , ಮಳೆ ಬಂದರಂತೂ ರಕ್ಷಣೆಯೇ ಇಲ್ಲದೆ ಪೆಟ್ಟಿಗೆ ಅಂಗಡಿಗಳನ್ನು ಆಶ್ರಯಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ನೀರು ಹೊರಗೆ ಹರಿದು ಹೋಗದೆ ಅಲ್ಲೆ ನಿಂತು ಕೆಸರುಂಟಾಗುತ್ತದೆ . ಈ ಹಿಂದಿನ ಬಸ್ ಶೆಲ್ಟರ್ ಕಿತ್ತು ಹೊಸದಾಗಿ ಸಿಮೆಂಟ್ ಪ್ಲಾಟ್ ಪಾರಂ ನಿರ್ಮಿಸಿದಾಗ ಯಾವುದೇ ರೀತಿಯ ಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದರಿಂದ ನೀರು ಹರಿಯಲು ಎಲ್ಲೂ ಆಸ್ಪದವಿಲ್ಲದೆ ನಿಲ್ದಾಣದಲ್ಲೇ ನೀರು ನಿಲ್ಲುತ್ತದೆ.ನಿಲ್ದಾಣದ ಪ್ಲಾಟ್ ಫಾರಂನ ಎರಡು ಬದಿಗಳಲ್ಲೂ ಡಾಂಬಾರ್ ಅಥವಾ ಸಿಮೆಂಟ್ ಹಾಕದಿರುವುದರಿಂದ ಮಳೆ ಬಂದಾಗ ನಿಲ್ಲುವ ನೀರಿಗೆ ಕೆಸರಾಗಿ ಮಾರ್ಪಡುತ್ತದೆ. ಮಹಿಳೆಯರು,ಮಕ್ಕಳು, ವೃದ್ದರು, ಜಾರಿ ಬೀಳುವ ಭೀತಿಯಲ್ಲೇ ಬಸ್ ಹತ್ತಲು ಆ ಕೆಸರು,ನೀರಿನ ನಡುವೆ ನಡೆದು ಸಾಗಬೇಕಿದೆ. ವಯಸ್ಸಾದವರು ಬಸ್ ಹತ್ತಲು ಹೋಗಿ ಕೆಲ ಬಾರಿ ಬಿದ್ದಿರುವ ಸಂಗತಿಗಳು ನಡೆದಿವೆ.
ಇದು ಒಂದೆರಡು ದಿನದ ಸಮಸ್ಯೆಯಾಗದೆ ಮಳೆ ಬರುವ ಅಷ್ಟೂ ದಿನಗಳು ಈ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರು ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಗ್ರಾ.ಪಂಯವರಾಗಲಿ ಇತ್ತ ಕಡೆ ಗಮನ ಹರಿಸದಿರುವುದು ಪ್ರಯಾಣಿಕರ ಹಿಡಿಶಾಪಕ್ಕೆ ಕಾರಣವಾಗಿದೆ. ಬಸ್ ಶೆಲ್ಟರ್ ನಲ್ಲಿ ಆಸನ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವತ್ತ ಶಾಸಕರಾದರೂ ಗಮನಹರಿಸಬೇಕೆಂಬುದು ಸಾವಜನಿಕರ ಒತ್ತಾಸೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ