ಹುಳಿಯಾರು ಹೋಬಳಿ ವಾಲ್ಮೀಕಿ ನಾಯಕ ಸಂಘದವತಿಯಿಂದ ಸಂಘದ ಕಛೇರಿಯಲ್ಲಿ ಬುಧವಾರದಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ದುರ್ಗರಾಜ್ ಮಾತನಾಡಿ, ಅಹಿಂಸಾತತ್ವದ ಮಹತ್ವವನ್ನು ಸಮಾಜಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿಯಾಗಿದ್ದು, ಆ ಸಮುದಾಯದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮಹಾನ್ ಗ್ರಂಥ ರಾಮಾಯಣ ರಚಿಸಿದ ಮಹಾನ್ ವ್ಯಕ್ತಿ ವಾಲ್ಮೀಕಿಯ ಆದರ್ಶ ಗುಣಗಳ ಪಾಲನೆ ಮಾಡಬೇಕಿದೆ. ಅಲ್ಲದೆ ನಾಯಕ ಸಮುದಾಯದವರು ಒಗ್ಗಟ್ಟಾಗಿ ಸೇರುವ ಮೂಲಕ ಇನ್ನೂ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವಲ್ಲಿ ಮುಂದಾಗಬೇಕಿದೆ ಎಂದರು.
ಸಂಘದ ಗೌರವಾಧ್ಯಕ್ಷ ಲಕ್ಷ್ಮಿನರಸಿಂಹಯ್ಯ,ಕಾರ್ಯದರ್ಶಿ ರೇಣುಕಪ್ರಸಾದ್,ಖಜಾಂಜಿ ಶಿವಲಿಂಗಯ್ಯ, ಪದಾಧಿಕಾರಿಗಳಾದ ಟ್ಯ್ರಾಕ್ಟರ್ ಮಂಜು,ದಿವಾಕರ್, ಶಿವಪ್ಪನಾಯಕ,ಶ್ರೀರಂಗಯ್ಯ, ರಂಗಸ್ವಾಮಿ,ನಾಗರಾಜು, ತಮ್ಮಯ್ಯ,ಭೈರೇಶ್ ,ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹುಳಿಯಾರು ಹೋಬಳಿ ವಾಲ್ಮೀಕಿ ನಾಯಕ ಸಂಘದವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. |
ಈ ವೇಳೆ ಸಂಘದ ಅಧ್ಯಕ್ಷ ದುರ್ಗರಾಜ್ ಮಾತನಾಡಿ, ಅಹಿಂಸಾತತ್ವದ ಮಹತ್ವವನ್ನು ಸಮಾಜಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿಯಾಗಿದ್ದು, ಆ ಸಮುದಾಯದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮಹಾನ್ ಗ್ರಂಥ ರಾಮಾಯಣ ರಚಿಸಿದ ಮಹಾನ್ ವ್ಯಕ್ತಿ ವಾಲ್ಮೀಕಿಯ ಆದರ್ಶ ಗುಣಗಳ ಪಾಲನೆ ಮಾಡಬೇಕಿದೆ. ಅಲ್ಲದೆ ನಾಯಕ ಸಮುದಾಯದವರು ಒಗ್ಗಟ್ಟಾಗಿ ಸೇರುವ ಮೂಲಕ ಇನ್ನೂ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವಲ್ಲಿ ಮುಂದಾಗಬೇಕಿದೆ ಎಂದರು.
ಸಂಘದ ಗೌರವಾಧ್ಯಕ್ಷ ಲಕ್ಷ್ಮಿನರಸಿಂಹಯ್ಯ,ಕಾರ್ಯದರ್ಶಿ ರೇಣುಕಪ್ರಸಾದ್,ಖಜಾಂಜಿ ಶಿವಲಿಂಗಯ್ಯ, ಪದಾಧಿಕಾರಿಗಳಾದ ಟ್ಯ್ರಾಕ್ಟರ್ ಮಂಜು,ದಿವಾಕರ್, ಶಿವಪ್ಪನಾಯಕ,ಶ್ರೀರಂಗಯ್ಯ, ರಂಗಸ್ವಾಮಿ,ನಾಗರಾಜು, ತಮ್ಮಯ್ಯ,ಭೈರೇಶ್ ,ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ