ಪ್ರಚಂಚದ ಇನ್ನಿತರ ರಾಷ್ಟ್ರಗಳಿಗೆ ಹೋಲಿಸಿದರೆ ಹಿಂದೂ ಸಂಸ್ಕೃತಿಯ ಆಚಾರ, ವಿಚಾರಗಳು ವೈಭವಯುತವಾಗಿದ್ದು ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತವೆ. ಆ ನಿಟ್ಟಿನಲ್ಲಿ ನಮ್ಮ ಭಾರತ ದೇಶ ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಹುಳಿಯಾರಿನ ಹಿಂದೂ ಜಾಗೃತ ಛಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ಬುಧವಾರ ಪ್ರಾರಂಭವಾದ ಸಂಗೀತ ಶಾಲೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹುಳಿಯಾರಿನ ಹಿಂದೂ ಜಾಗೃತ ಛಾರಿಟಬಲ್ ಟ್ರಸ್ಟ್ ವತಿಯಿಂದ ಬನಶಂಕರಿ ದೇವಾಲಯದಲ್ಲಿ ಪ್ರಾರಂಭವಾದ ಸಂಗೀತ ಶಾಲೆಯನ್ನು ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. |
ಹುಳಿಯಾರು ಭಾಗಕ್ಕೆ ಇಂತಹ ಸಂಗೀತ ಶಾಲೆಯ ಅವಶ್ಯಕತೆಯಿದ್ದು ಅದೀಗ ಈಡೇರಿರುವುದು ಹರ್ಷದಾಯಕವಾಗಿದ್ದು,ಸಂಗೀತ ಶಾಲೆಗೆ ನನ್ನಿಂದ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದೆಂದ ಅವರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸಂಗೀತಾಭ್ಯಾಸದಲ್ಲಿ ತೊಡಗುವಂತೆ ತಿಳಿಸಿದರು. ಸಂಗೀತ ಎಂಬುದು ಮನಸ್ಸಿಗೆ ಮುದುನೀಡುವಂತದ್ದಾಗಿದ್ದು, ನಿರಾಶಾದಾಯಕರಾದವರನ್ನು ಜಾಗೃತ ಮಾಡುವಂತಹ ಗುಣ ಸಂಗೀತಕ್ಕಿದ್ದು, ಇದರ ಆಸ್ವಾದನೆಗೆ ಯಾವುದೇ ವಯಸ್ಸಿನ ಅಂತರವಿರುವುದಿಲ್ಲ, ಎಲ್ಲಾ ವಯೋಮಾನದವರು ಸಂಗೀತ ಕಲಿಯಬಹುದಾಗಿದೆ ಎಂದರು.
ಹಿಂದೂಗಳೇ ಜಾಗೃತರಾಗಿ : ಹಿಂದೂ ಧರ್ಮದಲ್ಲಿ ಅನೇಕ ಸಮುದಾಯದವರಿದ್ದು ಇಂದು ತಂತಮ್ಮ ಸಮುದಾಯದಲ್ಲೇ ಗೊಂದಲಗಳನ್ನು ಸೃಷ್ಠಿಸಿಕೊಂಡು ಹಿಂದೂಧರ್ಮದ ಒಗ್ಗಟ್ಟು ಕ್ಷೀಣಿಸುವಂತಾಗುತ್ತಿದೆ. ಇದೇ ರೀತಿ ಮುಂದುವರೆದರೆ ಇತರ ಧರ್ಮದವರಿಂದ ನಾವು ತುಳಿತಕ್ಕೊಳಗಾಗಬೇಕಾಗುತ್ತದೆ. ಹಿಂದೂ ಧರ್ಮದ ಅಭಿವೃದ್ದಿಯ ನಿಟ್ಟಿನಲ್ಲಿ ಹಿಂದುಗಳಲ್ಲಿ ಜಾಗೃತಿಯನ್ನುಂಟುಮಾಡುವ ಕಾರ್ಯವಾಗಬೇಕಿದೆ. ಇಂತಹ ಕಾರ್ಯ ಮಾಡಲು ಪಟ್ಟಣದಲ್ಲಿ ಹಿಂದೂ ಜಾಗೃತ ಛಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಿರುವುದು ಸಂಗತಸದ ಸಂಗತಿಯಾಗಿದೆ ಎಂದರು. ಅಮೇರಿಕಾದಲ್ಲೂ ನಮ್ಮ ಸಂಸ್ಕೃತಿಯನ್ನು ಪ್ರತಿಪಾದಿಸಿದ ಪ್ರಧಾನಿ ಮೋದಿಯವರಿಂದಾಗಿ ಇಡಿ ಪ್ರಚಂಚವೇ ಭಾರತದತ್ತ ತಿರುಗಿನೋಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ಅಭಿವೃದ್ದಿಯಾಗಲು ಸಹಕಾರಿಯಾಗಿದೆ ಎಂದರು.
ಹುಳಿಯಾರಿನ ಶ್ರೀಬನಶಂಕರಿ ದೇವಾಲಯದಲ್ಲಿ ನೂತನವಾಗಿ ಪ್ರಾರಂಭವಾದ ಸಂಗೀತ ಶಾಲೆಗೆ ಸಂಗೀತ ಶಿಕ್ಷಕ ಸುಭಾಷ್ ಪಾಟೀಮ್ ಹಾಡೊಂದನ್ನು ಗಾಯನ ಮಾಡುವ ಚಾಲನೆ ನೀಡಿದರು. |
ಪಿಎಸೈ ಘೋರ್ಪಡೆ ಮಾತನಾಡಿ, ಪ್ರಸ್ತುತದಲ್ಲಿ ಅರ್ಕೇಸ್ಟ್ರಾ, ನಂಗನಾಚ್,ಡಿಸ್ಕೋ, ಬ್ರೇಕ್ ಡ್ಯಾನ್ಸ್ ನಿಂದಾಗಿ ನಾಟಕ,ಸಂಗೀತ,ಜಾನಪದ ನೃತ್ಯದಂತಹ ಕಲೆಗಳು ಕಣ್ಮರೆಯಾಗುವಂತಾಗಿದೆ. ಪೋಷಕರು ಮಕ್ಕಳಿಗೆ ಶಿಕ್ಷಣಕೊಡಿಸುವುದರ ಜೊತೆಗೆ ಸಹಪಠ್ಯಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಕೊಳ್ಳುವಂತೆ ಮಾಡುವುದರಿಂದ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕೆಂದರು.
ಟ್ರಸ್ಟ್ ನ ಅಧ್ಯಕ್ಷ ಕೆ.ಎಂ.ರಾಮಯ್ಯ ಅಧ್ಯಕ್ಷತೆವಹಿಸಿದ್ದು, ಸಂಗೀತ ಶಿಕ್ಷಕರಾದ ಸುಭಾಷ್ ಪಾಟಿಲ್ ಹಾಗೂ ಶಂಕರ್,ಗ್ರಾಮಲೆಖ್ಖಿಗ ಶ್ರೀನಿವಾಸ್, ಎಸ್ಸಾರೆಸ್ ದಯಾನಂದ್, ಭವಾನಿರಮೇಶ್,ದಾಸಪ್ಪ , ಮೀಸೆರಂಗಪ್ಪ,ಅನಂತಕುಮಾರ್, ಹೆಚ್.ಕೆ.ವಿಶ್ವನಾಥ್,ಧನಂಜಯಮೂರ್ತಿ ಸೇರಿದಂತೆ ಸಾರ್ವಜನಿಕರು, ದೇವಾಲಯ ಸಮಿತಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ