ಮನೆಯೊಂದಕ್ಕೆ ಸಿಡಿಲು ಅಪ್ಪಳಿಸಿದ ಪರಿಣಾಮ ಬೆಂಕಿ ಆವರಿಸಿಕೊಂಡು ಮನೆಯಲ್ಲಿದ್ದ ಮೂವರಲ್ಲಿ ಇಬ್ಬರು ಪಾರಾಗಿ ನತದೃಷ್ಟ ಯುವಕನೊಬ್ಬ ಬೆಂಕಿಯಲ್ಲಿ ಸಿಲುಕಿ ಸಾವನಪ್ಪಿರುವ ದುರ್ಘಟನೆ ಹೋಬಳಿಯ ಕೆಂಕೆರೆ ಗ್ರಾಮದ ಪುರದಮಠ ಗೇಟ್ ನಲ್ಲಿ ಸೋಮವಾರ ನಸುಕಿನಲ್ಲಿ ಘಟಿಸಿದೆ.
ಹುಳಿಯಾರು ಹೋಬಳಿ ಕೆಂಕೆರೆ ಪುರದಮಠ ಗೇಟ್ ನಲ್ಲಿ ಸೋಮವಾರ ಮುಂಜಾನೆ ಸಿಡಿಲು ತಾಕಿದ ಮನೆ. |
ಕಾಯಿತಿಮ್ಮನಹಳ್ಳಿಯ ನರಸಿಂಹಯ್ಯ(22) ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು ಈತ ತನ್ನ ಸಂಬಂಧಿಕರ ಮನೆಯಾದ ಪುರದಮಠ ಗೇಟ್ ನಲ್ಲಿರುವ ರಾಜಣ್ಣ ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದನು.
ಭಾನುವಾರ ರಾತ್ರಿಯಿಂದಲ್ಲೂ ಮಳೆಯಾಗುತ್ತಿದ್ದು ಸೋಮವಾರ ಬೆಳಗಿನಜಾವ ಸುಮಾರು 2 ರಿಂದ 3ರ ಸಮಯದಲ್ಲಿ ಆಗಸದಲ್ಲಿ ಮೂಡಿದ ಸಿಡಿಲು ರಾಜಣ್ಣ ಅವರ ಮನೆಯ ಪಡಸಾಲೆಯ ಭಾಗಕ್ಕೆ ಅಪ್ಪಳಿಸಿದ್ದು ಆ ಸಮಯದಲ್ಲಿ ಉಂಟಾದ ಬೆಂಕಿಯ ಕಿಡಿಗೆ ಪಡಸಾಲೆಯಲಿದ್ದ ಬೈಕ್ ಗಳೂ ಹತ್ತಿಕೊಂಡಿವೆ. ಅಲ್ಲದೆ ಮತ್ತೊಮ್ಮೆ ಎರಡೆ ನಿಮಿಷದ ಅಂತರದಲ್ಲಿ ಮನೆಯ ಮಧ್ಯ ಭಾಗಕ್ಕೂ ಮತ್ತೊಮ್ಮೆ ಸಿಡಲು ತಗುಲಿದ್ದು ಮನೆಯ ತೀರು,ಜವೆ, ಅಟ್ಟದ ಹಲಗೆಗಳೆಲ್ಲಾ ಸುಟ್ಟು ಕರಕಲಾಗಿವೆ.ಅಲ್ಲಿಯೇ ಮಲಗಿದ್ದ ನರಸಿಂಹ ಸಿಡಲಿನ ಅಘಾತಕ್ಕೆ ಬಲಿಯಾಗಿದ್ದಾನೆ.ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಸುಟ್ಟುಕರಕಲಾಗಿದ್ದಾನೆ. ಅಷ್ಟರಲ್ಲಾಗಲೆ ಮನೆಯಲ್ಲಿ ಮಲಗಿದ್ದ ರಾಜಣ್ಣ , ಪತ್ನಿ ಮಂಗಳಮ್ಮ, ಮಕ್ಕಳಾದ ಪುನೀತ್ , ಮನೋಜ್ ಮನೆಯ ಹಿಂಬದಿಯ ಬಾಗಿಲಿನಿಂದ ಹೊರಬಂದಿದ್ದಾರೆ.ಬೆಂಕಿ ಬಲುಬೇಗ ಪಸರಿಸಿ , ಮನೆಯನ್ನೆಲ್ಲಾ ಆಕ್ರಮಿಸಿಕೊಂಡಿದೆ. ಆ ಸಮಯದಲ್ಲೂ ಕೂಡ ನರಸಿಂಹನನ್ನು ರಕ್ಷಿಸಲು ಹೋದ ರಾಜಣ್ಣನಿಗೂ ಬೆಂಕಿ ತಗುಲಿದ್ದು ಕೈ,ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅಕ್ಕಪಕ್ಕದ ಮನೆಯವರು ಬೆಂಕಿನಂದಿಸಲು ಮುಂದಾದಿದ್ದಲ್ಲದೆ, ಕೂಡಲೇ ಅಗ್ನಿಶಾಮಕದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಒಟ್ಟಾರೆ ಸಿಡಿಲಿನಿಂದಾಗಿ ವ್ಯಕ್ತಿಯೊಬ್ಬ ಬಲಿಯಾಗಿದ್ದಲ್ಲದೆ, ಎರಡು ಬೈಕ್, ಗೃಹೋಪಯೋಗಿ ವಸ್ತುಗಳು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿವೆ. ತೀವ್ರಗಾಯಗಳಾಗಿದ್ದ ರಾಜಣ್ಣನನ್ನು ತಿಪಟೂರು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಸಿಪಿಐ ಜಯಕುಮಾರ್, ಪಿಎಸೈ ಘೋರ್ಪಡೆ ಭೇಟಿ ನೀಡಿದ್ದು, ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ತಹಶೀಲ್ದಾರ್ ಕಾಮಾಕ್ಷಮ್ಮ ಒಂದೂವರೆಲಕ್ಷ ಪರಿಹಾರ ಘೋಷಿಸಿದರು. |
ತಹಶೀಲ್ದಾರರಿಂದ ಪರಿಶೀಲನೆ: ಘಟನಾ ಸ್ಥಳ ಪರಿಶೀಲಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ ಮೃತ ಕುಟುಂಬದವರಿಗೆ ಸಾಂತ್ವಾನ ಹೇಳಿದರಲ್ಲದೆ ಮೃತ ವ್ಯಕ್ತಿಗೆ ಸರ್ಕಾದರದಿಂದ ಒಂದೂವರೆ ಲಕ್ಷ ರೂ ನ ಪರಿಹಾರ ಘೋಷಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ