ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ವರ್ಷಾಚರಣೆಗೆ ಕೇಕ್‌ಗಳಿಗೆ ಫುಲ್ ಡಿಮ್ಯಾಂಡ್ :ತರಹೇವಾರಿ ಕೇಕ್ ರೆಡಿ

ಹುಳಿಯಾರು : ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.ಹೊಸ ವರ್ಷಾಚರಣೆಗೆ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು ದುಬಾರಿಯಾದರೂ ಪರವಾಗಿಲ್ಲ, ಹೊಸ ವರ್ಷಾಚರಣೆಗೆ ಕೇಕ್ ಬೇಕೆಬೇಕು ಎಂಬಂತಾಗಿದ್ದು ಈಗಾಗಲೇ ಬೇಕರಿಗಳಲ್ಲಿ ನೂರಾರು ಸಂಖ್ಯೆಯ ಕೇಕ್‌ಗಳು ತಯಾರಾಗಿ ಮಾರಾಟವಾಗುತ್ತಿದೆ. ಹುಳಿಯಾರಿನ ರಾಂಗೋಪಾಲ್ ಸರ್ಕಲ್ ಬಳಿಯಿರುವ ಬೆಂಗಳೂರು ಬೇಕರಿಯಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು.             ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಕಾಲು ಕೆಜಿ ಗಾತ್ರದ ಸಣ್ಣ ಕೇಕ್‌ನಿಂದ ೧೦ಕೆಜಿಯ ಬೃಹತ್ ಗಾತ್ರದ ಕೇಕ್‌ಗಳನ್ನು ಬೇಕರಿಗಳಲ್ಲಿ ಮಾರಾಟಕ್ಕೆ ಸಿದ್ಧಪಡಿಸಲಾಗಿದೆ. ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಭರದಿಂದ ವ್ಯಾಪಾರ ಸಾಗಿದ್ದು ಜ.1ರಂದೂ ಕೂಡ ಕೇಕ್ ಮಾರಾಟ ಮುಂದುವರಿಯುತ್ತದೆ.ಕೇಜಿ ಕೇಕ್ ಗೆ ರು. 250 ರೂನಿಂದ ೪೦೦ ರೂವರೆಗೆ ಮಾರಾಟವಾಗುತ್ತಿದೆ.             ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ರಾಂಗೋಪಾಲ್ ಸರ್ಕಲ್ ಬಳಿಯಿರುವ ಬೆಂಗಳೂರು ಬೇಕರಿ, ಎಸ್.ಎಲ್.ಆರ್.ಬೇಕರಿ,ಡಾ.ರಾಜ್ ಕುಮಾರ್ ರಸ್ತೆಯ ಬೆಂಗಳೂರು ಬೇಕರಿ,ಲಕ್ಷ್ಮಿಬೇಕರಿ, ವೆಂಕಟೇಶ್ವರ ಬೇಕರಿ, ಸಿದ್ದಲಿಂಗ

ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಹುಳಿಯಾರು  : ಪಟ್ಟಣದ ಬಸವೇಶ್ವರನಗರದ ಮಲ್ಲಿಗೆರೆ ಕೆ.ಜಗದೀಶ್ ಅವರನ್ನು ಭಾರತೀಯ ಜನತಾಪಾರ್ಟಿಯ ಚಿಕ್ಕನಾಯಕನಹಳ್ಳಿ ಮಂಡಲದ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಆಯ್ಕೆ ಮಾಡಿದ್ದಾರೆ.         ಜಗದೀಶ್ ಮಲ್ಲಿಗೆರೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾಗಿ ಹಾಗೂ ತಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಕ್ಕೆ ಆಯ್ಕೆ

ಹುಳಿಯಾರು-ಕೆಂಕೆರೆ ಬಿ.ಎಂ.ಎಸ್.ಸರಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿ ಎಂ.ಎಸ್.ಮಾನಸ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ನಡೆಯಲ್ಲಿರುವ ರಾಷ್ಟ್ರ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಕ್ಕೆ ತುಮಕೂರು ವಿಶ್ವವಿದ್ಯಾನಿಲಯದಿಂದ ಆಯ್ಕೆಯಾಗಿದ್ದು ಇವರನ್ನು ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ, ದೈಹಿಕ ಶಿಕ್ಷಕ ಆರ್.ಶಿವಣ್ಣ ಹಾಗೂ ಭೋದಕವೃಂದ ಅಭಿನಂದಿಸಿದ್ದಾರೆ.

ಇಂದಿನಿಂದ ಮೂರುದಿನಗಳ ಕಾಲ ಹುಳಿಯಾರಿನಲ್ಲಿ ಅಯ್ಯಪ್ಪ ಸ್ವಾಮಿಯ ರಜತ ಮಹೋತ್ಸವ ಸಮಾರಂಭ

ಹುಳಿಯಾರು :ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ೨೫ ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಡಿ.30 ರಿಂದ ಜ.1 ರವರೆಗೆ ಮೂರುದಿನಗಳ ಕಾಲ ಅದ್ದೂರಿ ಸಮಾರಂಭ,ವೈಭವಪೂರಿತ ಉತ್ಸವ ಆಯೋಜಿಸಲಾಗಿದೆ.           ಡಿ.30 ರ ಶುಕ್ರವಾರ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರು,ದುರ್ಗಪರಮೇಶ್ವರಿ ದೇವಿ ,ಆಂಜನೇಯ ಸ್ವಾಮಿಯವರ ಆಗಮನದೊಂದಿಗೆ ಬೆಲಗೂರು ಅವಧೂತರಾದ ಬಿಂಧುಮಾಧವ ಸ್ವಾಮಿಗಳ ಉಪಸ್ಥಿತಿಯಲ್ಲಿ ಗಂಗಾಪೂಜೆ ಹಮ್ಮಿಕೊಳ್ಳಲಾಗಿದೆ.ಮುಂಜಾನೆ 108 ಕಳಸ ಹೊತ್ತ ಮಹಿಳೆಯರೊಂದಿಗೆ ಕೆರೆಬಾವಿಯಿಂದ ಅಯ್ಯಪ್ಪನ ದೇವಸ್ಥಾನದವರೆಗೆ ನಡೆಮುಡಿ ಉತ್ಸವ ನಡೆಯಲಿದೆ. ಸಂಜೆ ಪುತ್ತೂರು ನರಸಿಂಹ ನಾಯಕ್ ತಂಡದಿಂದ ಅಯ್ಯಪ್ಪ ಸಂಗೀತ ಕಾರ್ಯಕ್ರಮವಿದೆ.        31 ರ ಶನಿವಾರದಂದು ಬೆ.7 ಗಂಟೆಗೆ ಮಹಾಗಣಪತಿ ಅಷ್ಟದ್ರವ್ಯ ಹವನ,ಸುಬ್ರಹ್ಮಣ್ಯ ಮೂಲ ಮಂತ್ರ ಹವನ,ಅಯ್ಯಪ್ಪಸ್ವಾಮಿ ಗಾಯತ್ರಿ ಹವನ ಹಮ್ಮಿಕೊಳ್ಳಲಾಗಿದೆ.          ಜ.1 ರ ಭಾನುವಾರದಂದು ಸಂಜೆ ವೈಭವದ ರಾಜಬೀದಿ ಉತ್ಸವ ನಡೆಯಲಿದ್ದು ಸ್ವಾಮಿಯನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಗುವುದು.ಚಂಡೆವಾದ್ಯ, ಚಿರುಕುನ್ನಯ್ಯ ಪೂಜಾ ಕುಣಿತ ಕಾರ್ಯಕ್ರಮ ,ವೀರಗಾಸೆ,ಕೇರಳದ ಹೂ ಕವಡೆ ಕಾರ್ಯಕ್ರಮ,ಚಿಟ್ಟಿಮೇಳ ಮುಂತಾದ ಕಲಾಪ್ರಕಾರಗಳ ಪ್ರದರ್ಶನವಿದೆ.          ಭಕ್ತಾಧಿಗಳು,ಸಾರ್ವಜನಿಕರು ರಜತೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ

ನೂಕುನುಗ್ಗಲಿನಲ್ಲಿ ಜೇಬಿಗೆ ಬಿತ್ತು ಕತ್ತರಿ

ಹುಳಿಯಾರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚಿಕ್ಕನಾಯ್ಕನಹಳ್ಳಿ ತಾಲೂಕಿನ ಬರ ವೀಕ್ಷಣೆಯ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರ ೧.೫ ಲಕ್ಷ ಸೇರಿದಂತೆ ಅನೇಕ ಮುಖಂಡರ ಹಣ ಪಿಕ್ ಪಾಕೇಟ್ ಆಗಿದೆ.            ಹುಳಿಯಾರು ಹೋಬಳಿಗೆ ಬರ ಸಮೀಕ್ಷೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದ ಸಮಯದಲ್ಲಿ ಜನಜಾತ್ರೆಯೇ ಸೇರಿ ನೂಕುನುಗ್ಗಲು ಉಂಟಾಗಿತ್ತು. ಕಾರೆಹಳ್ಳಿ ಗೋಶಾಲೆ, ಕಂಪನಹಳ್ಳಿ ತೆಂಗಿನ ತೋಟ, ಎಪಿಎಂಸಿ ರೈತರ ಧರಣಿ ಹೀಗೆ ಯಡಿಯೂರಪ್ಪ ಅವರು ಹೋದ ಕಡೆಯಲ್ಲೆಲ್ಲಾ ನೂಕನುಗ್ಗಲು ಏರ್ಪಟ್ಟಿತ್ತು.           ಇದೇ ಸಂದರ್ಬದಲ್ಲಿ ಜೇಬು ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದು ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರ ಪ್ಯಾಂಟ್ ಜೇಬಿನಲ್ಲಿದ್ದ ಕೊಬ್ಬರಿ ಕೊಟ್ಟಿದ್ದ ಬಾಬ್ತು ಹಣ ೧.೫ ಲಕ್ಷ ರೂ. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಅವರ ೨೪೦೦ ರೂಪಾಯಿ ಹಾಗೂ ಕಾರ್ಯಕರ್ತ ನಂದೀಶಣ್ಣ ಅವರ ೩ ಸಾವಿರ ರೂ ಕದ್ದಿದ್ದಾರೆ.            ಯಾರೊಬ್ಬರ ಜೇಬಿಗೂ ಕತ್ತರಿ ಹಾಕದಿದ್ದರೂ ಜೇಬಿನೊಳಗೆ ಕೈಯಿಟ್ಟು ಹಣ ಲಪಟಾಯಿಸಿ ತಮ್ಮ ಕರಾಮತ್ತು ಮೆರೆದಿದ್ದಾರೆ.

ಮಾಜಿ ಶಾಸಕದ್ವಯರಲ್ಲಿ ಚಿ.ನಾ.ಹಳ್ಳಿ ಬಿಜೆಪಿ ಅಭ್ಯರ್ಥಿ ಯಾರು?

ಯಡಿಯೂರಪ್ಪ ಎದುರಿಗೆ ಬಯಲಾಯ್ತು ಬಿಜೆಪಿ ಭಿನ್ನಮತ ವಿಶೇಷ ವರದಿ : ಹೆಚ್.ಬಿ.ಕಿರಣ್ ಕುಮಾರ್ ಹುಳಿಯಾರು: ಚಿಕ್ಕನಾಯಾಕನಹಳ್ಳಿ ತಾಲೂಕಿನಲ್ಲಿರುವ ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್ ಹಾಗೂ ಜೆ.ಸಿ.ಮಾಧುಸ್ವಾಮಿ ಅವರಿಬ್ಬರಲ್ಲಿ ೨೦೧೮ ರ ವಿಧಾನಸಭಾ ಚುನಾವಣಾ ಅಭ್ಯರ್ಥಿ ಯಾರೆಂದು ಘೋಷಿಸುವಂತೆ ಬರ ವೀಕ್ಷಣೆಗಾಗಿ ಹುಳಿಯಾರು ಸಮೀಪದ ಕಂಪನಹಳ್ಳಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಒತ್ತಾಯಿಸಿದ ಘಟನೆ ಬುಧವಾರ ಜರುಗಿತು. ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ತೆಂಗಿನ ತೋಟದ ವೀಕ್ಷಣೆಗೆ ಹೋದಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಚಿ.ನಾ.ಹಳ್ಳಿ ಬಿಜೆಪಿ ಅಭ್ಯರ್ಥಿ ಯಾರೆಂದು ಪ್ರಶ್ನಿಸುತ್ತಿರುವುದು.         ಯಡಿಯೂರಪ್ಪನವರ ಬರ ವೀಕ್ಷಣಾ ಪ್ರವಾಸದ ಪಟ್ಟಿಯಲ್ಲಿ ಹುಳಿಯಾರು ಹೋಬಳಿಯ ಕಾರೆಹಳ್ಳಿ ಗೋಶಾಲೆ ಹಾಗೂ ಎಪಿಎಂಸಿ ಕೊಬ್ಬರಿ ಧರಣಿ ಸ್ಥಳ ಪೂರ್ವ ನಿಗದಿಯಾಗಿತ್ತು. ಆದರೆ ನೂರಾರು ಕಾರ್ಯಕರ್ತರು ಕಂಪನಹಳ್ಳಿಯ ತೋಟದ ಮನೆಯ ಹೆಂಜಾರಪ್ಪ ಅವರ ತೆಂಗಿನ ತೋಟ ಸಂಪೂರ್ಣ ಒಣಗಿದ್ದು ವೀಕ್ಷಿಸುವಂತೆ ಮಾರ್ಗ ಮದ್ಯೆ ಒತ್ತಡ ತಂದು ಅಲ್ಲಿಗೆ ಯಡಿಯೂರಪ್ಪನವರನ್ನು ಬರಮಾಡಿಕೊಂಡು ಆಗಮಿಸಿದ ಸಂದರ್ಭದಲ್ಲಿ ಯಡಿಯೂರಪ್ಪನವರೆ, ಚಿಕ್ಕನಾಯ್ಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಮುಂದಿನ ಚುನಾವಣಾ ಅಭ್ಯರ್ಥಿ ಯಾರು ಎಂದು ತಾವು ಈಗಲೇ ಘೋಷಿಸಬಬೇಕೆಂದ

ಕೊಬ್ಬರಿ ಸಮಸ್ಯೆ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡುವೆ:ಯಡಿಯೂರಪ್ಪ

ಬೆಲೆ ಹೆಚ್ಚಳಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸುವೆ ಹುಳಿಯಾರು: ರಾಜ್ಯದ ತೆಂಗು ಬೆಳೆಗಾರರ ಹಿತಕಾಪಾಡುವ ನಿಟ್ಟಿನಲ್ಲಿ ಜನವರಿ ೪ ರಂದು ತಾನು ದೆಹಲಿಗೆ ತೆರಳುತ್ತಿದ್ದು,ಈ ವೇಳೆ ಕೇಂದ್ರ ಕೃಷಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ತೆಂಗು ಬೆಳೆಗಾರರ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ರೈತರ ಕೊಬ್ಬರಿಗೆ ಸದ್ಯ ನೀಡಿರುವ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಪ್ರಧಾನ ಮಂತ್ರಿಗಳನ್ನು ಒಪ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧುವಾರದಂದು ಭೇಟಿಯಿತ್ತ ಯಡಿಯೂರಪ್ಪನವರು ರೈತರೊಂದಿಗೆ ಚರ್ಚಿಸಿ ಮಾತನಾಡಿದರು.           ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೪೮ನೇ ದಿನವಾದ ಬುಧವಾರದಂದು ಭೇಟಿಯಿತ್ತ ಅವರು ರೈತರೊಂದಿಗೆ ಚರ್ಚಿಸಿ ಮಾತನಾಡಿದರು.             ಸರಕಾರ ಈಗ ನೀಡುತ್ತಿರುವ ಬೆಲೆಯಿಂದ ರೈತ ಬದುಕಲು ಸಾಧ್ಯವಿಲ್ಲ.ಬರಗಾಲ ಸಮಸ್ಯೆಯಿಂದ ರೈತ ಕೃಷಿ ಬಿಟ್ಟು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.ಬರದಿಂದ ತೆಂಗಿನ ಮರ ಒಣಗಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮೇ ತಿಂಗಳಿನೊಳಗೆ ತೆಂಗ

ಮೇವು ಬ್ಯಾಂಕ್ ತೆರೆಯಲು ಸರ್ಕಾರದೊಂದಿಗೆ ಚರ್ಚಿಸುವೆ:ಯಡಿಯೂರಪ್ಪ

ಕಾರೇಹಳ್ಳಿ ಗೋಶಾಲೆಗೆ ಭೇಟಿ:ರೈತರ ಸಮಸ್ಯೆಗೆ ಸ್ಪಂದಿಸುವ ಭರವಸೆ ಹುಳಿಯಾರು : ಹೋಬಳಿಯ ಕಾರಹಳ್ಳಿಯಲ್ಲಿನ ಗೋಶಾಲೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗೋಶಾಲೆಯಲ್ಲಿನ ಮೇವಿನ ಸಮಸ್ಯೆಗಳ ಬಗ್ಗೆ ನೇರವಾಗಿ ರೈತರನ್ನೆ ಪ್ರಶ್ನಿಸಿದಲ್ಲದೆ ಹಾಗೂ ನನ್ನಿಂದ ಏನಾಗಬೇಕು ಎಂದು ಕೇಳಿದರಲ್ಲದೆ ಅಲ್ಲಿನ ಸಮಸ್ಯೆಯನ್ನು ಖುದ್ದು ವೀಕ್ಷಿಸಿ ಮೇವು ಬ್ಯಾಂಕ್ ತೆರೆಯಲು ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದರು. ಹುಳಿಯಾರು ಹೋಬಳಿಯ ಕಾರಹಳ್ಳಿಯಲ್ಲಿನ ಗೋಶಾಲೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಗೋಶಾಲೆಯ ಸಮಸ್ಯೆ ಬಗ್ಗೆ ಆಲಿಸಿದರು.ಮಾಜಿ ಸಚಿವೆ ಶೋಭಾಕರಂದ್ಲಾಜೆ,ಮಾಜಿ ಶಾಸಕರಾದ ಜೆ.ಸಿ,ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್,ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ಚನ್ನಬಸಪ್ಪ ಮತ್ತಿತರರಿದ್ದರು.                ಬರಪೀಡೀತ ಪ್ರದೇಶದ ಪ್ರವಾಸದ ಅಂಗವಾಗಿ  ಹುಳಿಯಾರು  ಹೋಬಳಿಯ ಕಾರೇಹಳ್ಳಿಯ ಗೋಶಾಲೆಗೆ ಭೇಟಿಯಿತ್ತ ಯಡಿಯೂರಪ್ಪನವರಿಗೆ ರೈತರು ಗೋಶಾಲೆಯ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಗೋಶಾಲೆತೆರೆದಿರುವುದು ಈಗಾಗಲೇ ತಡವಾಗಿದೆ.ಇಲ್ಲಿ ವ್ಯವಸ್ಥೆಯಿದ್ದರೂ ಸಹ ೧೦, ೧೫ಕಿಮೀ ದೂರದಿಂದ ದನ ಕರುಗಳು ಮತ್ತು ಹಸುಗಳನ್ನು ಈ ಗೋಶಾಲೆಗೆ ಹೊಡೆದುಕೊಂಡು ಪುನ: ವಾಪಸ್ ಹಿಂದುರುಗಿ ಹೋಗಲು ತುಂಬಾ ಕಷ್ಟಕರವಾಗಿದೆ. ಅಲ್ಲದೆ ೮ ರಿಂದ ೧೦ಲೀಟರ್ ಹಾಲು ಕೊಡುವ ಹಸುಗಳು ಇಲ್

ಪ್ರಧಾನಿಮೋದಿ ಜೊತೆ ಕೊಬ್ಬರಿ ಸಮಸ್ಯೆ ಚರ್ಚಿಸುವೆ :ಮಾಜಿ ಪ್ರಧಾನಿ ದೇವೇಗೌಡ

ಹುಳಿಯಾರು :ರೈತರು ಬೆಳೆದ ಯಾವ ಬೆಳೆಗೂ ಉತ್ತಮ ಬೆಲೆ ಸಿಗ್ಗುತ್ತಿಲ್ಲ.ರಾಜ್ಯದ ತೆಂಗು ಸೇರಿದಂತೆ ಅಡಿಕೆ ಬೆಳೆಗಾರರು ಸಹ ತೀವ್ರ ಸಂಕಷ್ಟದಲ್ಲಿದ್ದು ಈ ಬಗ್ಗೆ ಪ್ರಧಾನಮಂತ್ರಿ ಮೋದಿಯನ್ನು ಭೇಟಿಯಾಗಿ ರೈತರ ಸಮಸ್ಯೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕೊಬ್ಬರಿಗೆ ಸೂಕ್ತ ಬೆಲೆ ಕೊಡಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಭರವಸೆಯಿತ್ತರು. ಮಾಜಿ ಪ್ರಧಾನ ಮಂತ್ರಿ ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಶಾಸಕರುಗಳ ಹಾಗೂ ಸಂಸದರ ನಿಯೋಗ.              ಮಾಜಿ ಪ್ರಾಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಕರೆದೊಯ್ಯುವ ಮೂಲಕ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಾನಾ ತಾಲ್ಲೂಕಿನ ಶಾಸಕರುಗಳು ಹಾಗೂ ಸಂಸದ ಮುದ್ಧಹನುಮೇಗೌಡರು ಮತ್ತು ಹುಳಿಯಾರಿನ ರೈತ ಮುಖಂಡರ ನಿಯೋಗ ಶನಿವಾರದಂದು ಮಾಜಿ ಪ್ರಧಾನ ಮಂತ್ರಿ ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಮೇಲ್ಕಂಡಂತೆ ನುಡಿದರು.           ರೈತರ ಸಮಸ್ಯೆ ಸಂಕಷ್ಟಗಳ ಬಗ್ಗೆ ನನಗೆ ಅರಿವಿದ್ದು ಕೊಬ್ಬರಿಗೆ ಸಧ್ಯ ನೀಡಲಾಗುತ್ತಿರುವ ೬೨೪೦ರೂ ಗಳು ಕೊಬ್ಬರಿಯ ಕನಿಷ್ಟ ಬೆಲೆಯೂ ಅಲ್ಲವಾಗಿದ್ದು ಕೇಂದ್ರ ಬೆಂಬಲ ಬೆಲೆಯಾಗಿ ೧೫ ಸಾವಿರ ರೂಪಾಯಿಯಾದರೂ ನೀಡಿದಲ್ಲಿ ರೈತರು ನಿರಾಳರಾಗಬಹುದಾಗಿದೆ.           ತೆಂಗು,ಅಡಿಕೆ ಸೇರಿದಂತೆ ರಬ್ಬರ್ ಬೆಳೆಗಾರರಿಗೂ ಬೆಲೆ ಕುಸಿತದ ಸಮಸ

ರೈತರ ೪೩ ನೇ ದಿನದ ಧರಣಿಗೆ ಭಾರತೀಯ ಕೃಷಿಕ ಸಮಾಜದ ಸಾಥ್

ಕೊಬ್ಬರಿಗೆ ಕನಿಷ್ಟ ೧೫ಸಾವಿರ ಬೆಲೆ ಘೋಷಿಸುವಂತೆ ಒತ್ತಾಯ ಹುಳಿಯಾರು: ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತಸಂಘದವರು ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಶುಕ್ರವಾರದಂದು ೪೩ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಯನ್ನು ಬೆಂಬಲಿಸಿ ನವದೆಹಲಿಯ ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಯಿಸಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹುಳಿಯಾರಿನ ರೈತರ ಧರಣಿ ಬೆಂಬಲಿಸಿ ನವದೆಹಲಿ ಭಾರತೀಯ ಕೃಷಿ ಸಮಾಜದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಶಿವರತ್ನ ಮತ್ತು ಪದಾಧಿಕಾರಿಗಳು ಭಾಗವಹಿಸಿ ಕೃಷಿ ಉತ್ಪನ್ನಮಾರುಕಟ್ಟೆಯ ಅಧ್ಯಕ್ಷ ಬರಗೂರು ಬಸವರಾಜುಗೆ ಮನವಿ ಪತ್ರ ಸಲ್ಲಿಸಿದರು.                   ಕೃಷಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷೆ ಶಿವರತ್ನ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸಾಕಷ್ಟು ವರ್ಷಗಳಾದರು ಸಹಾ ರೈತರಿಗೆ ಸಿಗಬಹುದಾದ ಸೌಲಭ್ಯಗಳು ಸಿಗದೆ ಪ್ರತಿಯೊಂದಕ್ಕೂ ಸಹಾ ಪ್ರತಿಭಟನೆ ನಡೆಸಿ ಪಡೆಯುವಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಟೀಕಿಸಿದರು.        ರೈತರು ನಮ್ಮ ದೇಶದ ಬೆನ್ನೆಲುಬು ಎನ್ನುವ ಸರಕಾರಗಳು ರೈತರ ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ನೀಡದೆ ರೈತರ ಬೆನ್ನು ಮುರಿಯುವಂತೆ ಮಾಡುತ್ತಿವೆ ಎಂದು ಆರೋಪಿಸಿದರು.       ಸರಕಾರಗಳ ದುರಾಡಳಿತದಿಂದ ಕಂಗೆಟ್ಟಿರುವ ರೈತರು ಕೃಷಿಯನ್ನು ತೊರೆದು ಉದ್ಯೋಗ ಅರಸಿ ನಗರಪ

೧೩೩.೭೭ ಲಕ್ಷ ವೆಚ್ಚದ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಸುರೇಶ್ ಬಾಬು ಚಾಲನೆ

ಹುಳಿಯಾರು: ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಹರಿಜನ–ಗಿರಿಜನ ಕಲ್ಯಾಣ ಉಪ ಯೋಜನೆಯಡಿ ೧೩೩.೭೭ ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಶುಕ್ರವಾರದಂದು ಚಾಲನೆ ನೀಡಿದರು. ಹುಳಿಯಾರು ಹೋಬಳಿಯ ಗುರುವಾಪುರದಲ್ಲಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಸುರೇಶ್ ಬಾಬು ಭೂಮಿ ಪೂಜೆ ನೆರವೇರಿಸಿದರು.          ಎಸ್.ಸಿ.ಪಿ ಯೋಜನೆಯಡಿ ಹೋಬಳಿಯ ಮೇಲನಹಳ್ಳಿ ,ಗುರುವಾಪುರ,ಮರೆನಾಡು ಲಂಬಾಣಿ ತಾಂಡ್ಯ,ಅಂಬಾರಪುರ ಲಂಬಾಣಿ ತಾಂಡ್ಯ,ಮಾರುಹೊಳೆ ಮತ್ತು ದಸೂಡಿ ಗ್ರಾಮಪಂಚಾಯ್ತಿಯ ಗಿಲ್ಯಾನಾಯಕನ ತಾಂಡ್ಯದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಒಟ್ಟು ೬೮.೭೭ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.          ಟಿ.ಎಸ್.ಪಿ ಯೋಜನೆಯಡಿ ಗಾಣಧಾಳು ಗ್ರಾಮಪಂಚಾಯ್ತಿಯ ಹನುಮದಾಸನ ಪಾಳ್ಯ , ಹೆಚ್.ಮೇಲನಹಳ್ಳಿ,ದಸೂಡಿ ಎಸ್.ಟಿ ಕಾಲೋನಿ, ಹೊಯ್ಸಳಕಟ್ಟೆಯ ಎಸ್.ಟಿ ಕಾಲೋನಿ,ಬೆಳ್ಳಾರ ಎಸ್.ಟಿ ಕಾಲೋನಿಗಳಿಗೆ ಒಟ್ಟು ೬೫ ಲಕ್ಷ ರೂಗಳ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.         ಗುರುವಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸುರೇಶ್ ಬಾಬು ತಾವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆಧ್ಯತೆ ನೀಡಿದ್ದು ಹಳ್ಳಿಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಥಮವಾಗಿ ಅಗತ್ಯ ಕುಡಿಯುವ ನೀರು, ರಸ್ತೆ, ವಿದ್ಯುತ್ ಮತ್ತಿತರ ಅಗತ್ಯ ಮೂಲಸೌಲಭ್ಯ ಒದ

ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ :ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ

ಬರ ನಿರ್ವಹಣೆ ಬಗ್ಗೆ ಕೇಂದ್ರ ಸರಕಾರದ ಸ್ಪಂದನೆಯಿಲ್ಲ ಹುಳಿಯಾರು: ಸರ್ಕಾರ ೧೩೯ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರೈತರ ನೆರವಿಗೆ ಸೂಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು ,ಇದರ ನಿರ್ವಹಣೆ ಬಗ್ಗೆ ಗಮನಹರಿಸಲು ಎಲ್ಲಾ ತಾಲ್ಲೂಕುಗಳ ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ತೆರಳಿ ರೈತರನ್ನು ಸಂಪರ್ಕಿಸಿ ನೈಜ ಮಾಹಿತಿಯನ್ನು ಸಂಗ್ರಹಿಸಿ ಎಂದು ಕೆಪಿಸಿಸಿ ತಿಳಿಸಿರುವ ಮೇರೆಗೆ ನಾವುಗಳು ಬರಪೀಡೀತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.          ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಪೀಡೀತ ಪ್ರದೇಶ ಹಾಗೂ ತೆರೆದಿರುವ ಗೋಶಾಲೆಗಳನ್ನು ಭೇಟಿ ನೀಡಿ ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.ಸರ್ಕಾರ ಬರ ಎದುರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗೋಶಾಲೆಗಳನ್ನು ತೆರೆಯುವುದರ ಮೂಲಕ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯಲ್ಲಿ ನಡೆಸಿದ ಬರ ಅಧ್ಯಯನದ ವೇಳೆ ಕಂಡುಬಂದಿರುವ ಹಾಗೂ ರೈತರು ಹೇಳಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.           ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಸುಮಾರು ೭೨ ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿತ್ತು.ಆದರೆ ಈಗಿನ ಕೇಂದ್ರಸರ್ಕಾರ ರೈತರ ಬಗ್ಗೆ ಸ್ವಲ್ಪ

ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿ:ಎಲ್ಲಾ ರೈತರಿಗೂ ನೀರಾ ಇಳಿಸಲು ಅನುಮತಿಸಿ

ಹುಳಿಯಾರು: ಕೊಬ್ಬರಿಯ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತಸಂಘದವರು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆಸುತ್ತಿರುವ ಧರಣಿಯನ್ನ ಬೆಂಬಲಿಸಿ ತುಮಕೂರು ಜಿಲ್ಲಾ ರೈತಸಂಘದ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಸೋಮವಾರದಂದು ಪ್ರತಿಭಟನಾ ಮೆರವಣಿಗೆ ಹಾಗೂ ಕೆಲ ಕಾಲ ರಸ್ತೆತಡೆ ನಡೆಸಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ತುಮಕೂರು ಜಿಲ್ಲಾ ರೈತಸಂಘದವರು ಉಪತಹಸೀಲ್ದಾರ್ ಸತ್ಯನಾರಾಯಣ್‌ ಅವರಿಗೆ ಮನವಿ ಸಲ್ಲಿಸಿದರು.           ಹುಳಿಯಾರಿನ ರಾಂಗೋಪಾಲ್ ಸಮೀಪದ ಸಂಘದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ, ಡಾ:ರಾಜ್‌ಕುಮಾರ್‌ರಸ್ತೆ, ಬಸ್ ನಿಲ್ದಾಣ, ಗಾಂಧಿಪೇಟೆ ಮೂಲಕ ಸಾಗಿ ರಾಷ್ಟೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲವು ಸಮಯ ರಸ್ತೆ ತಡೆ ನಡೆಸಿ ನಂತರ ಮೆರವಣಿಗೆಯು ಮಾರುಕಟ್ಟೆಯ ಆವರಣದ ಧರಣಿ ಸ್ಥಳಕ್ಕೆ ತೆರಳಿತು.             ಈ ವೇಳೆ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ರೈತರು ಬೆಳೆಯುಬ ಕೊಬ್ಬರಿ ,ದ್ವಿದಳ ಧಾನ್ಯಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಬೆಲೆಸಿಗದೆ ,ಬೆಲೆಗಾಗಿ ಹೋರಾಡುವ ಪರಿಸ್ಥಿರಿ ಒದಗಿರುವುದು ದುರದೃಷ್ಟ.ರೈತರು ಸಂಕಷ್ಟದಲ್ಲಿ ಸಿಲುಕಿದಾಗ ಸರಕಾರಗಳು ಎಚ್ಚೆತ್ತುಕೊಂಡು ಪರಿಹಾರ ನೀಡುವಂತಹ ಕ್ರಮಗಳನ್ನು ತ್ವರಿತಗತಿಯಲ್ಲಿ ಕಾರ್ಯಾರೂಪಕ್ಕೆ ತರುವಂತೆ ಒತ್ತಾಯಿಸಿದರು.          ಕೊಬ್ಬರಿ ಬೆಳೆ ಬೆಳೆಯಲು    ಸ

ಸಂಕಷ್ಟದಲ್ಲಿರುವ ಕೃಷಿಕರ ನೆರವು ನೀಡಿ

ಹುಳಿಯಾರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಸದಾ ಬರಪೀಡಿತವಾಗಿದ್ದು ತೆಂಗ-ಕೊಬ್ಬರಿಯನ್ನೆ ಅವಲಂಬಿಸಿ ಜೀವನ ಮಾಡುತ್ತಿರುವ ಕೃಷಿಕರ ಬದುಕು ಮೂರಾಬಟ್ಟೆಯಾಗಿದ್ದು , ಸಾಲ ಸೋಲ ಮಾಡಿ ಉಸಿರು ಹಿಡಿದುಕೊಂಡಿರುವ ರೈತರ ನೆರವಿಗೆ ಸರಕಾರ ಬರಬೇಕೆಂದು ಬಡಕೇಗುಡ್ಲು ನರಸಿಂಹಯ್ಯ ಒತ್ತಾಯಿಸಿದರು. ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೩೯ ನೇ ದಿನದಂದು ಬಡಕೆಗುಡ್ಲು ಗ್ರಾಮಸ್ಥರು ಪಾಲ್ಗೊಂಡಿದ್ದರು.        ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೩೯ ನೇ ದಿನದಂದು ಪಾಲ್ಗೊಂಡು ಮಾತನಾಡಿದ ಅವರು ರೈತರ ಬೆಳೆಯುವ ಯಾವುದೇ ಕೊಬ್ಬರಿ,ಅಡಿಕೆ,ರಾಗಿ,ಟೊಮ್ಯಾಟೊ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದಿರುವುದು ರೈತರ ಕೃಷಿ ಬದುಕನ್ನೆ ಅಣಕಮಾಡುವಂತಿದೆ ಎಂದರು         ಭೂಮಿಯಿದ್ದರೆ ಹಸಿರು,ಹಸಿರಿದ್ದರೆ ರೈತರು,ರೈತರಿದ್ದರೆ ಜೀವಸಂಕುಲಕ್ಕೆ ಉಳಿಗಾಲವಿದ್ದು ಕೃಷಿ ಬಗ್ಗೆ ತಾತ್ಸಾರ ಹೀಗೆ ಮುಂದುವರಿದಲ್ಲಿ  ಮುಂದಿನ ದಿನಗಳಲ್ಲಿ ಕೃಷಿಯನ್ನೆ ನಂಬಿ ಜೀವನ ಮಾಡುವ ರೈತರುಗಳೇ ಇಲ್ಲದಂತಾಗುತ್ತಾರೆಂದು ಎಚ್ಚರಿಸಿದರು.         ಬಡಕೆಗುಡ್ಲುವಿನಿಂದ ಸುಮಾರು ಐವತ್ತಕ್ಕೂ ಹೆಚ್ಚು ರೈತರು ಟ್ರಾಕ್ಟರ್ ನಲ್ಲಿ ದಿನಸಿ ಸಮೇತ

ಹುಳಿಯಾರು ಧರಣಿ ಸ್ಥಳಕ್ಕೆ ಸಂಸದ ಮುದ್ದಹನುಮೇಗೌಡ ಸೇರಿದಂತೆ ೬ ಶಾಸಕರುಗಳ ಭೇಟಿ

ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಅನಂತಕುಮಾರ್ ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆರಳಲು ತೀರ್ಮಾನ ಪ್ರಧಾನಿ ಭೇಟಿ ಮಾಡಿ ಬೆಲೆ ಪುನರ್ ಪರಿಶೀಲಿಸಲು ಮನವಿಗೆ ನಿರ್ಧಾರ ಹುಳಿಯಾರು: ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಪಕ್ಷಾತೀತವಾಗಿ ರಾಜ್ಯದಲ್ಲಿ ತೆಂಗುಬೆಳೆಯುವ ತಾಲ್ಲೂಕಿನ ಎಲ್ಲಾ ಶಾಸಕರು ಹಾಗೂ ರೈತಮುಖಂಡರನ್ನು ಒಳಗೊಂಡ ನಿಯೋಗವು ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಭೇಟಿಯಾಗಿ ಕೊಬ್ಬರಿ ಬೆಲೆಗೆ ಹಾಲಿ ನಿಗದಿಪಡಿಸಿರುವ ಬೆಂಬಲ ಬೆಲೆಯನ್ನ ಪುರ್ನಪರಿಶೀಲಿಸುವಂತೆ ಒತ್ತಾಯಿಸಲು ಇಂದಿನ ಧರಣಿಗೆ ಆಗಮಿಸಿದ್ದ ಸಂಸದರು ೬ ತಾಲ್ಲೂಕಿನ ಶಾಸಕರು ತೀರ್ಮಾನಿಸಿದರು.           ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ಭಾನುವಾರದಂದು ೩೮ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಅಕ್ಕಪಕ್ಕದ ೬ ತಾಲ್ಲೂಕಿನ ಶಾಸಕರು ಆಗಮಿಸಿ ತುಮಕೂರು ಸಂಸದ ಮುದ್ಧ ಹನುಮೇಗೌಡ ಅಧ್ಯಕ್ಷತೆಯಲ್ಲಿ ಧರಣಿ ಸ್ಥಳದಲ್ಲಿ ಸಭೆ ನಡೆಸಿದರು. ಹುಳಿಯಾರಿನಲ್ಲಿ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿದರು             ಈ ಸಭೆಯಲ್ಲಿ ಮೊದಲಿಗೆ ಅರಸೀಕೆರೆ ಶ

ಇಂದು ಹೊಸಹಳ್ಳಿ ಚಂದ್ರಣ್ಣನ ಬಣದಿಂದ ರಸ್ತೆ ತಡೆ

ಹುಳಿಯಾರು:ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ,ಜೈ ಕರ್ನಾಟಕ ಸಂಘ,ದಲಿತ ಸಂಘ,ಸೃಜನಾ ಮಹಿಳಮಂಡಳಿ,ವಿಶ್ವ ಮಾನವ ಹಕ್ಕು ಆಯೋಗ ಮತ್ತು ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಜಿಲ್ಲಾ ರೈತಸಂಘದ ಹೊಸಳ್ಳಿ ಚಂದ್ರಣ್ಣನ ಬಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ರಾಂಗೋಲಾಲ್ ಸರ್ಕಲ್ ಬಳಿ ರಸ್ತೆ ತಡೆಯನ್ನು ಡಿ. ೧೯ ರ ಸೋಮವಾರದಂದು ಬೆಳಿಗ್ಗೆ ೧೧ ಕ್ಕೆ ಹಮ್ಮಿಕೊಳ್ಳಲಾಗಿದೆ.       ಜಿಲ್ಲಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ,ಸೃಜನಾ ಮಹಿಳಾ ಘಟಕದ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ,ವಿ.ಮಾ.ಹ ಆಯೋಗದ ಅಧ್ಯಕ್ಷ ಪ್ರಭುದೇವ್,ಕರವೇ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್,ಜಯಕರ್ನಾಟಕ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ,ದಲಿತ ಸಂಘದ ಅಧ್ಯಕ್ಷ ನಂದಿಹಳ್ಳಿ ಗಿರೀಶ್,ಯಗಚೀಹಳ್ಳಿ ರಾಮಕೃಷ್ಣಪ್ಪ,ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಂದಿರಾ ರಾಜಶೇಖರ್,ತಾಲ್ಲೂಕ್ ರೈತ ಸಂಘದ ಅಧ್ಯಕ್ಷ ಕೆ.ಈಶ್ವರಪ್ಪ.ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕುಮಾರ್,ಉಪಾಧ್ಯಕ್ಷ ಶಂಕರಪ್ಪ,ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಗೋವಿಂದಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಗುಡ್ಡದ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಅನ್ನಸಂತರ್ಪಣೆ ಇಂದು

ಹುಳಿಯಾರು ಹೋಬಳಿಯ ರಂಗನಕೆರೆ ಬೆಟ್ಟದಲ್ಲಿನ ಶ್ರೀಗುಡ್ಡದರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವವು ಡಿಸೆಂಬರ್ ೧೮ ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ.          ಇದರ ಅಂಗವಾಗಿ ಬೆಳಿಗ್ಗೆ ೮ ಗಂಟೆಯಿಂದ ಮಹಾಗಣಪತಿ ಪೂಜೆ, ಗಂಗಾಪೂಜೆ, ಸ್ವಸ್ತಿವಾಚನ, ದೇವನಾಂದಿ, ಋತ್ವಿಗ್‌ವರುಣ, ಕಳಸಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಪುರುಷಸೂಕ್ತಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಂತರ ಮಧ್ಯಾಹ್ನ ೧.೩೦.ರಿಂದ ಅನ್ನಸಂತರ್ಪಣೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯವರು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವಸ್ತು ಪ್ರದರ್ಶನ ಸಹಕಾರಿ

ಹುಳಿಯಾರು: ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಸ್ತು ಪ್ರದರ್ಶನಗಳು ಅಗತ್ಯವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಇನ್ನಿತರ ವಿಷಯಗಳಲ್ಲಿ ಆಸಕ್ತಿವಹಿಸಿ ಆ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರು ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಕಾರ್ಯಾದರ್ಶಿ ಕವಿತ ಕಿರಣ್‌ಕುಮಾರ್ ತಿಳಿಸಿದರು. ಹುಳಿಯಾರಿನ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶನಿವಾರದಂದು ಪುಟಾಣಿ ಮಕ್ಕಳ ವಸ್ತುಪ್ರದರ್ಶನವನ್ನು ಕವಿತಾ ಕಿರಣ್‌ ಉದ್ಘಾಟಿಸಿದರು, ಪ್ರಾಂಶುಪಾಲರಾದ ಮಹದೇವ್,ಐಶ್ವರ್ಯ,ಅಮಿತ್ ಇದ್ದಾರೆ.            ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಆವರಣದಲ್ಲಿ ಶನಿವಾರದಂದು ಎಲ್.ಕೆ.ಜಿ ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಎಕ್ಸ್ ಪೋ-೧೬ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.            ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳ್ಳದೆ ಇಂತಹ ಕಾರ್ಯಕ್ರಮಗಳು ನಡೆದಾಗ ಪ್ರತಿ ಮಕ್ಕಳು ಸಹಾ ಭಾಗವಹಿಸುವ ಮೂಲಕ ತಮ್ಮಲ್ಲಿನ ಪ್ರತಿಭೆ ತೋರಿಸುವಂತೆ ಸಲಹೆ ನೀಡಿದರು.               ಈ ವಸ್ತು ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ತಯಾರಿಸಿದ ವಿಧಾನಸೌಧದ ಪ್ರತಿಕೃತಿ,ಪೋಸ್ಟ್ ಆಫೀಸ್,ಬ್ಯಾಂಕ್,ಅರಣ್ಯ ಪ್ರದೇಶ, ಸರಕಾರಿ ಆಸ್ಪತ್ರೆ, ಗೋಲ್‌ಗುಂಬಸ್ಸ್, ತಾಜ್ ಮಹಲ್,ಬೇಕರಿ, ಶ್ರೀಅಯ್ಯಪ್ಪಸ

ಹುಳಿಯಾರಿನಲ್ಲಿ ನೋಟು ಬದಲು ದೇಶ ಮೊದಲು ಅಭಿಯಾನದ ರ್ಯಾಲಿ

ಹುಳಿಯಾರು: ನೋಟು ಬದಲು ದೇಶ ಮೊದಲು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅಭಿಯಾನ ಶನಿವಾರದಂದು ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ರಾಂಗೋಪಾಲ್ ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ಬೈಕ್ ರ್ಯಾಲಿ ನಡೆಯಿತು. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ಮಾಡಬಹುದಾದ ವಿವಿಧ ವಿಧಾನಗಳ ಬಗ್ಗೆ ವಿಡಿಯೋ ಪ್ರದರ್ಶನದ ಮೂಲಕ ತಿಳಿಸಲಾಯಿತು.            ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹನುಮಂತರಾಜ್ ಪ್ರಾಧಾನಿ ಮೋದಿಯವರು ನೋಟಿನ ಅಪನಗಧೀಕರಣ ಮಾಡುವ ಕ್ರಾಂತಿಕಾರಿ ನಿರ್ಧಾರದ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದ್ದು ನಾಗರೀಕರು ಅವರ ನಿರ್ಧಾರವನ್ನು ಬೆಂಬಲಿಸಿ ಸಹಕರಿಸುವ ಮುಖಾಂತರ ಪ್ರಧಾನಿಯವರ ಕೈ ಬಲಪಡಿಸಿ,ದೇಶದ ಆರ್ಥಿಕ ಅಭಿವೃದ್ಧಿಗೆ ನಾವೆಲ್ಲಾ ಭಾಗಿಯಾಗಬೇಕಿದೆ ಎಂದರು.              ಬಿಜೆಪಿ ಯುವ ಮೋರ್ಚಾದ ಕೆಂಕೆರೆ ನವೀನ್ ಮಾತನಾಡಿ ದೇಶದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು , 1000 ಹಾಗೂ 500ರೂ. ನೋಟು ರದ್ದು ಮಾಡುವ ಮೂಲಕ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣ,ಖೋಟಾನೋಟಿನ ಜಾಲ ಇನ್ನೂ ಮುಂತಾದ ದೇಶದ್ರೋಹಿ ಕೆಲಸಗಳಿಗೆ ಮೋದಿಯವರ ಈ ನಿರ್ಧಾರದಿಂದ ಕಡಿವಾಣ ಬಿದ್ದಂತಾಗಿದೆ ಎಂದರು. ನೋಟ

ಅಂತೂ ಬಂದರೂ ಶಾಸಕರು

ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಭೇಟಿಯ ಭರವಸೆ ನೀಡಿದರು ಹುಳಿಯಾರು:  ೩೫ದಿನಗಳ ತರವಾಯ ಕೊಬ್ಬರಿ ಹೋರಾಟಗಾರರ ಕೂಗು ಆಲಿಸಿಕೊಂಡ ಶಾಸಕ ಸಿ.ಬಿ.ಸುರೇಶ್ ಬಾಬು ಕಡೆಗೂ ಧರಣಿ ಸ್ಥಳಕ್ಕಾಗಮಿಸಿ ಗಂಟೆಗಳ ಕಾಲ ಪ್ರತಿಭಟನಕಾರರ ಆಕ್ರೋಷ,ನೋವುಗಳನ್ನು ಶಾಂತಚಿತ್ತರಾಗಿ ಆಲಿಸಿ,ಜಿಲ್ಲೆಯ ಕೊಬ್ಬರಿ ಬೆಳೆಯುವ ಎಲ್ಲಾ ತಾಲ್ಲೂಕಗಳ ಶಾಸಕರೊಂದಿಗೆ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರೈತರ ಸಮಸ್ಯೆ ಖುದ್ದಾಗಿ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪರಿಹಾರಕ್ಕೆ ದಾರಿಮಾಡಿಕೊಡುವುದಾಗಿ ಭರವಸೆಯಿತ್ತರು. ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಧರಣಿನಿರತರನ್ನು ಉದ್ದೇಶಿಸಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿದರು.          ಹುಳಿಯಾರು ಎಪಿಎಂಸಿ ಮುಂದೆ ನಡೆಯುತ್ತಿರುವ ಧರಣಿ ಸ್ಥಳಕ್ಕೆ ೩೫ ನೇ ದಿನವಾದ ಗುರುವಾರದಂದು ಭೇಟಿಯತ್ತ ಅವರನ್ನು ರೈತರು ಮೌನವಹಿಸುವ ಮೂಲಕ ಸ್ವಾಗತಿಸಿದರು.         ತಾಲ್ಲೂಕ್ ಯಜಮಾನರಾದ ತಾವೇ ಈ ರೀತಿ ವರ್ತಿಸಿದರೆ ನಮ್ಮ ಅಳಲನ್ನು ಕೇಳುವರ್ಯಾರು,ಸಂಸದರು,ಮಾಜಿ ಮುಖ್ಯಮಂತ್ರಿಗಳು,ಜಿಲ್ಲಾಧಿಕಾರಿಗಳು ಹೀಗೆ ಎಲ್ಲರು ಬಂದುಹೋದರೂ ಸಹ ಶಾಸಕರಾಗಿ ತಾವು ಇತ್ತ ಮುಖಹಾಕದಿದ್ದು ತರವಲ್ಲ ಎಂದು ತಮ್ಮ ನೋವನ್ನು ಹೊರಹಾಕಿದರು.ನಿಮ್ಮನ್ನು ಚುನಾಯಿಸಿ ಕಳುಹಿಸಿರುವ ರೈತರ ಪರವಾಗಿ ವಿಧಾನಸಭೆಯಲ್ಲಿ ಕೊಬ್ಬರಿ ಬೆಲೆ ಹೆಚ್ಚಿಸುವ ಬಗ್ಗೆ ತಾವೇಕೆ ಇದ

ಪುರದ ಚನ್ನಬಸವಣ್ಣನ ಕಾರ್ತೀಕದಲ್ಲಿ ರಾಗಿಮುದ್ದೆ ಊಟ ವಿಶೇಷ

ಸಂಜೆಯವರೆಗೂ ನಡೆದ ಮುದ್ದೆಸಾರಿನ ಸಂತರ್ಪಣೆ ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿ ಸೋಮವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಮಾರು ಹತ್ತುಸಾವಿರದಷ್ಟಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸಾರಿನ ಸವಿ ಸವಿದರು. ಪುರದ ಮಠದಲ್ಲಿ ಮುದ್ದೆಸಾರಿನ ಸಂತರ್ಪಣೆ ಸವಿಯುತ್ತಿರುವ ಮಹಿಳೆಯರು.          ಇಂದು ಮುಂಜಾನೆ ಕೆಂಕೆರೆ ಗ್ರಾಮದಲ್ಲಿರುವ ಸ್ವಾಮಿಗೆ ವಿಶೇಷ ಪೂಜೆ ನಡೆಸಿ,ನಂತರ ಗ್ರಾಮದೇವತೆ ಲೋಕಮಾತೆ ಕಾಳಿಕಾಂಭ ದೇವಿ ಹಾಗೂ ಸ್ವಾಮಿಯವರನ್ನು ಧ್ವಜಕುಣಿತದೊಂದಿಗೆ ಊರಿನ ಬೀದಿಯಲ್ಲಿ ಉತ್ಸವದೊಂದಿಗೆ ಸುಮಾರು ೩ ಕೀ.ಮೀ ದೂರದ ಸ್ವಾಮಿಯ ಮೂಲಸ್ಥಾನ ಪುರದಮಠಕ್ಕೆ ಕರೆದ್ಯೊಯಲಾಯಿತು.         ನಂತರ ಮಧ್ಯಾಹ್ನ 1 ಗಂಟೆಗೆ ಪುರದಮಠದಲ್ಲಿ ಗಂಗಾಸ್ನಾನ ನಡೆಸಿ ಸ್ವಾಮಿಯ ಹಾಗೂ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಎಡೆ ಸಲ್ಲಿಸಲಾಯಿತು. ನಂತರ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾಗಿ ಮುದ್ದೆ ವಿಶೇಷ: ಪುರದಮಠದಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದಲ್ಲಿ ರಾಗಿ ಮುದ್ದೆ ಸಾರಿನ ಊಟ ವಿಶೇಷವಾಗಿದ್ದು ಇಲ್ಲಿಗೆ ಜಿಲ್ಲೆಯ ನಾ

ಹುಳಿಯಾರು: ಫಲಪ್ರದವಾಗದ ಜಿಲ್ಲಾಧಿಕಾರಿಗಳ ಭೇಟಿ

ರಾಜ್ಯ ಸರ್ಕಾರದ ಭರವಸೆ ಮೇಲೆ ನಂಬಿಕೆಯಿಲ್ಲ:ರೈತರು ಮೊದಲು ಖರೀದಿ ಪ್ರಾರಂಭಿಸಿ:ನಂತರ ಧರಣಿ ಅಂತ್ಯಗೊಳಿಸುವೆವು ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತಸಂಘದ ವತಿಯಿಂದ ಪಟ್ಟಣದ ಎಪಿಎಂಸಿಯಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ನಿರತರೊಂದಿಗೆ ಬುಧವಾರ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಚರ್ಚಿಸಿದರು.     ಹುಳಿಯಾರು: ಪಟ್ಟಣದ ಎಪಿಎಂಸಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಕೊಬ್ಬರಿಚಳುವಳಿಗೆ ಬುಧವಾರ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಭೇಟಿ ನೀಡಿ ರೈತ ಮುಖಂಡರೊಂದಿಗೆ ಚರ್ಚಿಸಿದರಾದರೂ ನಫೆಡ್ ಖರೀದಿ ಬಗ್ಗೆ ಏನೊಂದು ಸ್ಪಷ್ಟವಾದ ಮಾಹಿತಿ ನೀಡದೆ ಸ್ವಯಂ ಅವರೇ ಗೊಂದಲದಲ್ಲಿ ಮುಳುಗಿದ್ದರಿಂದ,ಇಅವರ ಮಾತನ್ನು ನಂಬದ ರೈತರುಗಳು, ಜಿಲ್ಲಾಧಿಕಾರಿಗಳೇ ನಮಗೆ ಭರವಸೆಯ ಮಾತು ಬೇಕಿಲ್ಲ,ನೀವು ಖರೀದಿ ಶುರುಮಾಡುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಧರಣಿ ಮುಂದುವರಿಸಿದರು. ಹುಳಿಯಾರಿನ ನಫೇಡ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರೈತರ ನೊಂದಣಿ ಪುಸ್ತಕ ಪರಿಶೀಲಿಸಿದರು.         ಪಟ್ಟಣದ ಎಪಿಎಂಸಿಗೆ ಎರಡು ಗಂಟೆ ಸುಮಾರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ನೇರವಾಗಿ ನಫೆಡ್ ಖರೀದಿ ಕೇಂದ್ರ ಬಳಿ ತೆರಳಿದರು. ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಇದುವರೆಗೂ ಕೊಬ್ಬರಿ ಎಷ್ಟು ಕೊಳ್ಳಲಾಗಿದೆ ಎಂದು ಪ್ರಶ್ನಿಸಿದಲ್ಲದೆ ತೂಕದ ಯಂತ್ರ,ಗುಣಮಟ್ಟ ಪರೀಕ್ಷಿಸುವ ಮಾಪಕ ಮುಂತಾದವನ್ನು ಪರಿಶೀಲ

ಹುಳಿಯಾರು ಆಂಜನೇಯಸ್ವಾಮಿಯ ವಿಜೃಂಭಣೆಯ ರಥೋತ್ಸವ

ಸಹಸ್ರಾರು ಜನಕ್ಕೆ ಅನ್ನಸಂತರ್ಪಣೆ ಹುಳಿಯಾರು: ಪಟ್ಟಣದ ಆಂಜನೇಯಸ್ವಾಮಿಯ ದೇವಾಲಯದಲ್ಲಿ ಸೋಮವಾರದಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ನಡೆದ ಶ್ರೀಸ್ವಾಮಿಯವರ ರಥೋತ್ಸವ. ಮುಂಜಾನೆ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಾಪರಮೇಶ್ವರಿ ದೇವಿಯವರ ಆಗಮನದೊಂದಿಗೆ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಅಷ್ಟಾವಧಾನ ಸೇವೆ, ಪಂಚಾಮೃತ ಸೇವೆ ನಡೆಯಿತು.ಪೂರ್ಣಾಹುತಿ ಸಲ್ಲಿಸಿದ ನಂತರ ಮಹಾಮಂಗಳಾರತಿ ನಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಅಲಂಕೃತ ರಥದಲ್ಲಿ ಸ್ವಾಮಿಯನ್ನು ಭಕ್ತರ ಜೈಕಾರದೊಂದಿಗೆ ರಥಕ್ಕೇರಿಸಿ ಆಂಜನೇಯನ ಜೈಕಾರದ ಉದ್ಘೋಷದೊಂದಿಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ರಥವನ್ನೆಳೆದು ಸಂಭ್ರಮಿಸಿದರು.        ಜೈ ಮಾರುತಿ ಯುವಕ ಸಂಘ ,ಭಜರಂಗಿ ಗ್ರೂಪ್ಸ್,ಕೆಎಂಎಲ್ ಗ್ರೂಪ್ಸ್ ಸದಸ್ಯರಿಂದ ಕೋಸುಂಬರಿ, ಮಜ್ಜಿಗೆ,ಪಾನಕ ವಿತರಿಸಲಾಯಿತು.         ಜಯಂತಿ ಅಂಗವಾಗಿ ಮಹಿಳೆಯರಿಂದ ಭಜನೆ ನಡೆಯಿತು. ಮಧ್ಯಾಹ್ನ ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಪ್ರಾಣ ದೇವರಿಗೆ ಮಾಡಿದ ಅಲಂಕಾರ ಮನಸೂರೆಗೊಂಡಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಸಾಲುಗಟ್ಟಿ ನಿಂತು ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು.          ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮ

ಹುಳಿಯಾರು ಹೋಬಳಿಯಾದ್ಯಂತ ಹನುಮಜಯಂತಿ ಸಂಭ್ರಮ

ಹುಳಿಯಾರು: ಪಟ್ಟಣ ಸೇರಿದಂತೆ ಸಮೀಪದ ಕೆಂಕೆರೆ,ಹೊಸಳ್ಳಿ,ರಂಗಾಪುರ, ದೊಡ್ಡಬಿದರೆ,ಚಿಕ್ಕಬಿದರೆ, ಸೀಗೆಬಾಗಿ,ದೊಡ್ಡೆಣೆಗೆರೆ,ಕಂಪನಹಳ್ಳಿ,ಕಾರೇಹಳ್ಳಿ ಮುಂತಾದ ಹಳ್ಳಿಗಳಲ್ಲಿ ಹನುಮ ಜಯಂತಿಯನ್ನು ಸೋಮವಾರದಂದು ಅದ್ದೂರಿಯಾಗಿ ಆಚರಿಸಲಾಗಿದ್ದು ಎಲ್ಲಡೆ ಸ್ವಾಮಿಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರುಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.               ಪಟ್ಟಣದ ವಾಸವಿ ದೇವಾಲಯದಲ್ಲಿ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಹನುಮಜಯಂತಿ ಅಂಗವಾಗಿ ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಸೀತಾರಾಮಾಂಜನೇಯ ಮೂರ್ತಿಗಳಿಗೆ ವಿಶೇಷ ಅಲಂಕಾರದಿಂದ ಮಾಡಲಾಗಿತ್ತು.            ಶಂಕರಪುರದಲ್ಲಿ ಬಸ್ಟಾಂಡ್ ಹೋಟಲ್ ನ ಗೋಪಾಲ್ ಅವರ ನಿವಾಸದಲ್ಲಿ ಪವಮಾನ ಹೋಮ,ಮುಖ್ಯಪ್ರಾಣ ಹಾಗೂ ವಿಪ್ರಮಹಿಳಾ ಸಂಘದಿಂದ ಭಜನೆ ಹಾಗೂ ಬಡಾವಣೆಯವರಿಗೆ ಅನ್ನ ಸಂತರ್ಪಣೆ ನಡೆಯಿತು.            ದೊಡ್ಡಎಣ್ಣೆಗೆರೆಯ ಶ್ರೀ ಅಂಜನೇಯ ಸ್ವಾಮಿಗೆ ಮಾಡಲಾಗಿದ್ದ ನಾಣ್ಯದ ಅಲಂಕಾರ ಕೆಂಕೆರೆಯಲ್ಲೂ ಸಹ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ಇದೇರೀತಿ ಹೊಸಹಳ್ಳಿ ಹಾಗೂ ಸೀಗೆಬಾಗಿಯ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ `ಮುಖ್ಯಪ್ರಾಣ'ನಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರಾಮಭಜನೆ ನಡೆದಿದ್ದು ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಎಲ್ಲಡೆ ಬೆಲವತ್ತೆ ಪಾನಕ,ಕಡ್ಲೇಬೇಳೆ ಕೋಸುಂಬ

ಇಂದು ರಂಗಾಪುರದಲ್ಲಿ ಹನುಮಜಯಂತಿ

ಹುಳಿಯಾರು ಸಮೀಪದ ಗೂಬೇಹಳ್ಳಿಯ ರಂಗಾಪುರದಲ್ಲಿ ೨೪ನೇ ವರ್ಷದ ಹನುಮಜಯಂತಿಯು ಡಿ೧೧ರಿಂದ ೧೩ ರವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ.         ಭಾನುವಾರದಂದು ಧ್ವಜಾರೋಹಣದ ಮೂಲಕ ಜಯಂತಿಗೆ ಚಾಲನೆ ನೀಡಲಾಗಿದ್ದು ರಾತ್ರಿ ಸ್ವಾಮಿಯವರ ಉತ್ಸವ ಹಾಗೂ ಅಖಂಡ ಭಜನೆ ನಡೆಯಿತು.          ಇಂದು (೧೨ರ ಸೋಮವಾರದಂದು) ಬೆಳಿಗ್ಗೆ ಪಂಚಾಮೃತ ಅಭಿಷೇಕ,ಸಹಸ್ರ ನಾಮ ನಡೆದು ಸಾಯಂಕಾಲ ನೂರೊಂದೆಡೆ ಸೇವೆ ಹಾಗೂ ಮದ್ದಿನ ಪ್ರದರ್ಶನದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ.ರಾತ್ರಿ ೧೦ ಗಂಟೆಗೆ ಭದ್ರಾವತಿಯ ತಂಡದಿಂದ ಆರ್ಕೇಸ್ಟ್ರಾ ಹಮ್ಮಿಕೊಳ್ಳಲಾಗಿದೆ. ನಾಳೆ(೧೩ ರ ಮಂಗಳವಾರದಂದು) ರಾತ್ರಿ ಕರ್ಪೂರೋತ್ಸವ ,ನಾಸಿಕ್ ಡೋಲು ಕಾರ್ಯಕ್ರಮ ನಡೆದು ಧ್ವಜಾವರೋಹಣದ ಮೂಲಕ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.         ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾರುತಿ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಪುರದ ಮಠದಲ್ಲಿ ಚನ್ನಬಸವೇಶ್ವರ ಸ್ವಾಮಿಯವರ ಉತ್ಸವ ಹಾಗೂ ಮುದ್ದೆ ಊಟ ದಾಸೋಹ

ಹುಳಿಯಾರು: ಸಮೀಪದ ಕೆಂಕೆರೆಯ ಪುರದ ಮಠದಲ್ಲಿ ಡಿ,12ರ ಸೋಮವಾರದಂದು ಕೃತಿಕಾ ಮಹೋತ್ಸವದ ಪ್ರಯುಕ್ತ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಉತ್ಸವ ಹಾಗೂ ದಾಸೋಹ ನಡೆಯಲಿದೆ.        ಬೆಳಿಗ್ಗೆ ಪುರದ ಚನ್ನಬಸವೇಶ್ವರ ಸ್ವಾಮಿಯವರನ್ನು ಕೆಂಕೆರೆ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಗುವುದು.ಕೆಂಕೆರೆ ಗ್ರಾಮದೇವತೆ ಕಾಳಮ್ಮ ಹಾಗೂ ಸ್ವಾಮಿಯವರನ್ನು ಮೂಲಸ್ಥಾನ ಪುರದಮಠಕ್ಕೆ ಕರೆದೊಯ್ದು ಉತ್ಸವ ನಡೆಸಲಾಗುವುದು.ಮಧ್ಯಾಹ್ನ ೨.೩೦ ರಿಂದ ಭಕ್ತಾಧಿಗಳಿಗೆ ದಾಸೋಹ ನಡೆಯುವುದು.           ಇಲ್ಲಿನ ವಿಶೇಷವೇ ರಾಗಿಮುದ್ದೆಯ ದಾಸೋಹವಾಗಿದ್ದು ಸುಮಾರು ೮-೧೦ ಸಾವಿರದಷ್ಟು ಆಗಮಿಸುವ ಭಕ್ತಾಧಿಗಳಿಗೆ ಸ್ವಾಮಿಯ ಪ್ರಸಾದವಾಗಿ ರಾಗಿ ಮುದ್ದೆ ಊಟವನ್ನು ಉಣಬಡಿಸಲಾಗುತ್ತದೆ. ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ.

ಸೌಕರ್ಯ ವಂಚಿತ ಪುರದ ಮಠದ ಚನ್ನಬಸವಣ್ಣ ದೇಗುಲ

ಇಂದಿನ ಕೃತಿಕೋತ್ಸವಕ್ಕೆ ಹತ್ತುಸಾವಿರದಷ್ಟು ಜನ ಸೇರುವ ನಿರೀಕ್ಷೆ: ಕನಿಷ್ಟ ಸೌಲಭ್ಯ ಒದಗಿಸಲು ಕೂಡ ಬಾರದ ಮುಜರಾಯಿ ಇಲಾಖೆ ಹುಳಿಯಾರು: ಈ ಭಾಗದಲ್ಲಿ ಪುರದ ಮಠ ಎಂದರೆ ತಕ್ಷಣ ಜ್ಞಾಪಕ ಬರುವುದು ಅಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದ ರಾಗಿ ಮುದ್ದೆ ಸಾರಿನ ಊಟ ಹಾಗೂ ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಪೂಜೆಯಾಗಿದ್ದು ಇದಕ್ಕಾಗಿ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ.ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.             ಮುಜರಾಯಿ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪುರದ ಶ್ರೀ ಚನ್ನಬಸವಣ್ಣ ದೇವಸ್ಥಾನ  ಪುರದ ಶ್ರೀಚನ್ನಬಸವಣ್ಣನಿಗೆ ಅದರದ್ದೇ ಆದ ಇತಿಹಾಸವಿದ್ದು ಗೋಸಲ ಚನ್ನಬಸವಣ್ಣನವರು ಇಲ್ಲಿನ ಗವಿಯಲ್ಲಿ ತಪ್ಪಸ್ಸು ಕೂತಿದ್ದ ತಪೋಕ್ಷೇತ್ರವಾಗಿ ಹೆಸರಾಗಿದೆ.ಈತನ್ನನ್ನು ನಂಬಿದರೆ ಭಕ್ತರ ಸಕಲಸಮಸ್ಯೆಗಳು ಕಷ್ಟಕಾರ್ಪಣ್ಯಗಳು ಬಗೆಹರಿಯುತ್ತದೆ ಎನ್ನುವ ಅಪಾರವಾದ ನಂಬಿಕೆಯಿದೆ.ಸುತ್ತೇಳು ಗ್ರಾಮಗಳು ಸೇರಿದಂತೆ ನಾನಾ ಕಡೆಗಳಿಂದ ಅಪಾರ ಭಕ್ತರು ಸ್ವಾಮಿಯ ದರ್ಶನಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಹುಳಿಯಾರಿನಿಂದ ೮ ಕಿಮೀ ದೂರದಲ್ಲಿರುವ ಪುರದಮಠಕ್ಕೆ ನಿತ್ಯ ಭಕ್ತರ ಸಂಖ್ಯೆ ಅಷ್ಟಾಗಿರದಿದ್ದರೂ ಪ್ರತಿ ಸೋಮವಾರ ನಡೆಯುವ ಕ್ವಾರಣ್ಯ ಸೇವೆಗೆ ನೂರಾರು ಭಕ್ತರು ಆಗಮಿಸುತ್ತಾರೆ.ಪೂಜೆ ಮುಗಿಯುತ್ತಿದ್ದಂತೆಯೇ ರಾಗಿಮುದ್ದೆ ಕಾಳಿನ ಊಟವನ್ನು ಪ್ರಸ