ಸಹಸ್ರಾರು ಜನಕ್ಕೆ ಅನ್ನಸಂತರ್ಪಣೆ
ಹುಳಿಯಾರು:ಪಟ್ಟಣದ ಆಂಜನೇಯಸ್ವಾಮಿಯ ದೇವಾಲಯದಲ್ಲಿ ಸೋಮವಾರದಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ನಡೆದ ಶ್ರೀಸ್ವಾಮಿಯವರ ರಥೋತ್ಸವ. |
ಮುಂಜಾನೆ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಾಪರಮೇಶ್ವರಿ ದೇವಿಯವರ ಆಗಮನದೊಂದಿಗೆ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಅಷ್ಟಾವಧಾನ ಸೇವೆ, ಪಂಚಾಮೃತ ಸೇವೆ ನಡೆಯಿತು.ಪೂರ್ಣಾಹುತಿ ಸಲ್ಲಿಸಿದ ನಂತರ ಮಹಾಮಂಗಳಾರತಿ ನಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಅಲಂಕೃತ ರಥದಲ್ಲಿ ಸ್ವಾಮಿಯನ್ನು ಭಕ್ತರ ಜೈಕಾರದೊಂದಿಗೆ ರಥಕ್ಕೇರಿಸಿ ಆಂಜನೇಯನ ಜೈಕಾರದ ಉದ್ಘೋಷದೊಂದಿಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ರಥವನ್ನೆಳೆದು ಸಂಭ್ರಮಿಸಿದರು.
ಜೈ ಮಾರುತಿ ಯುವಕ ಸಂಘ ,ಭಜರಂಗಿ ಗ್ರೂಪ್ಸ್,ಕೆಎಂಎಲ್ ಗ್ರೂಪ್ಸ್ ಸದಸ್ಯರಿಂದ ಕೋಸುಂಬರಿ, ಮಜ್ಜಿಗೆ,ಪಾನಕ ವಿತರಿಸಲಾಯಿತು.
ಜಯಂತಿ ಅಂಗವಾಗಿ ಮಹಿಳೆಯರಿಂದ ಭಜನೆ ನಡೆಯಿತು. ಮಧ್ಯಾಹ್ನ ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಪ್ರಾಣ ದೇವರಿಗೆ ಮಾಡಿದ ಅಲಂಕಾರ ಮನಸೂರೆಗೊಂಡಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಸಾಲುಗಟ್ಟಿ ನಿಂತು ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು.
ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಆರ್.ರಾಮನಾಥ್ ಶೆಟ್ಟಿ, ಟ್ರಾಕ್ಟರ್ ಮಂಜುನಾಥ್, ಎಚ್.ವಿ.ಧನಂಜಯ ಮೂತಿ೯, ಕೆ.ಎಂ.ರಾಮಯ್ಯ, ಮೀಸೆ ರಂಗಪ್ಪ,ಕೃಷ್ಣ ಮೂರ್ತಿ,ನಂಜುಂಡಪ್ಪ,ಶೇಷಾದ್ರಿ,ತರಕಾರಿ ರಾಮಣ್ಣ, ಡಾಬಾ ಸುರೇಶ್,ಪೈಲ್ವಾನ್ ಜಯಣ್ಣ,ಕಲಾವಿದ ಗೌಡಿ, ಶಿವಕುಮಾರ್,ಆರ್ಚಕರಾದ ಸುನೀಲ್ ,ಯತೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ