ಹುಳಿಯಾರು: ಸಮೀಪದ ಹೊಯ್ಸಳಕಟ್ಟೆಯ ಗ್ರಾಮವೊಂದರ ಅಪ್ರಾಪ್ತೆಯೊಬ್ಬಳ್ಳನ್ನು ಪುಸಲಾಯಿಸಿ ಕರೆದೊಯ್ದು ಮದುವೆ ಮಾಡಿಕೊಂಡಿರುವ ಮೂರು ಮಕ್ಕಳ ತಂದೆಯನ್ನು ಬಂಧಿಸಿ ಆತನ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಹುಳಿಯಾರು ಠಾಣೆಯಲ್ಲಿ ಬುಧವಾರ ಜರುಗಿದೆ.
ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯ ತಿಮ್ಮಪ್ಪನಹಟ್ಟಿಯ ನಿವಾಸಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತೆಯನ್ನು ಆಕೆಯ ಸಂಬಂಧಿಯಾದ ಹಿರಿಯೂರು ಸೂರಪ್ಪನಹಟ್ಟಿ ವಾಸಿ ಕೃಷ್ಣಪ್ಪ(೩೨ವರ್ಷ) ಎಂಬಾತ ಅಪಹರಿಸಿಕೊಂಡು ಹೋಗಿ ಭಾನುವಾರದಂದು ಪುರ್ಲಳ್ಳಿಯ ದೇವಾಲಯದಲ್ಲಿ ವಿವಾಹವಾಗಿದ್ದು ಫೋಷಕರು ಕೊಟ್ಟ ದೂರಿನ ಮೇರೆಗೆ ಆತನ ಜಾಡನ್ನು ಹಿಡಿದ ಹುಳಿಯಾರು ಪೋಲಿಸರು ಬುಧವಾರದಂದು ಆತನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆತ ಈಗಾಗಲೇ ವಿವಾಹಿತನಾಗಿದ್ದು ೫ ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೂ ಸೇರಿದಂತೆ ಮೂರು ಜನ ಹೆಣ್ಣುಮಕ್ಕಳಿದ್ದು ಗಂಡು ಸಂತಾನ ಬೇಕೆಂಬ ಹಿನ್ನಲೆಯಲ್ಲಿ ಸಂಬಂಧಿಯಾದ ಯುವತಿಯನ್ನು ಹೆಂಡತಿಗೆ ತಿಳಿಯದಂತೆ ಅಪಹರಿಸಿ ಮದುವೆಯಾಗಿದ್ದಾಗಿ ತಿಳಿಸಿರುತ್ತಾನೆ.ಆತನ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಸ್ಕೋ ಅಡಿಯಲ್ಲಿ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ