ಹುಳಿಯಾರು: ಪಟ್ಟಣ ಸೇರಿದಂತೆ ಸಮೀಪದ ಕೆಂಕೆರೆ,ಹೊಸಳ್ಳಿ,ರಂಗಾಪುರ, ದೊಡ್ಡಬಿದರೆ,ಚಿಕ್ಕಬಿದರೆ, ಸೀಗೆಬಾಗಿ,ದೊಡ್ಡೆಣೆಗೆರೆ,ಕಂಪನಹಳ್ಳಿ,ಕಾರೇಹಳ್ಳಿ ಮುಂತಾದ ಹಳ್ಳಿಗಳಲ್ಲಿ ಹನುಮ ಜಯಂತಿಯನ್ನು ಸೋಮವಾರದಂದು ಅದ್ದೂರಿಯಾಗಿ ಆಚರಿಸಲಾಗಿದ್ದು ಎಲ್ಲಡೆ ಸ್ವಾಮಿಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರುಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಪಟ್ಟಣದ ವಾಸವಿ ದೇವಾಲಯದಲ್ಲಿ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಹನುಮಜಯಂತಿ ಅಂಗವಾಗಿ ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಸೀತಾರಾಮಾಂಜನೇಯ ಮೂರ್ತಿಗಳಿಗೆ ವಿಶೇಷ ಅಲಂಕಾರದಿಂದ ಮಾಡಲಾಗಿತ್ತು.
ಶಂಕರಪುರದಲ್ಲಿ ಬಸ್ಟಾಂಡ್ ಹೋಟಲ್ ನ ಗೋಪಾಲ್ ಅವರ ನಿವಾಸದಲ್ಲಿ ಪವಮಾನ ಹೋಮ,ಮುಖ್ಯಪ್ರಾಣ ಹಾಗೂ ವಿಪ್ರಮಹಿಳಾ ಸಂಘದಿಂದ ಭಜನೆ ಹಾಗೂ ಬಡಾವಣೆಯವರಿಗೆ ಅನ್ನ ಸಂತರ್ಪಣೆ ನಡೆಯಿತು.
ದೊಡ್ಡಎಣ್ಣೆಗೆರೆಯ ಶ್ರೀ ಅಂಜನೇಯ ಸ್ವಾಮಿಗೆ ಮಾಡಲಾಗಿದ್ದ ನಾಣ್ಯದ ಅಲಂಕಾರ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ