ಹುಳಿಯಾರು ಸಮೀಪದ ಗೂಬೇಹಳ್ಳಿಯ ರಂಗಾಪುರದಲ್ಲಿ ೨೪ನೇ ವರ್ಷದ ಹನುಮಜಯಂತಿಯು ಡಿ೧೧ರಿಂದ ೧೩ ರವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ.
ಭಾನುವಾರದಂದು ಧ್ವಜಾರೋಹಣದ ಮೂಲಕ ಜಯಂತಿಗೆ ಚಾಲನೆ ನೀಡಲಾಗಿದ್ದು ರಾತ್ರಿ ಸ್ವಾಮಿಯವರ ಉತ್ಸವ ಹಾಗೂ ಅಖಂಡ ಭಜನೆ ನಡೆಯಿತು.
ಇಂದು (೧೨ರ ಸೋಮವಾರದಂದು) ಬೆಳಿಗ್ಗೆ ಪಂಚಾಮೃತ ಅಭಿಷೇಕ,ಸಹಸ್ರ ನಾಮ ನಡೆದು ಸಾಯಂಕಾಲ ನೂರೊಂದೆಡೆ ಸೇವೆ ಹಾಗೂ ಮದ್ದಿನ ಪ್ರದರ್ಶನದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ.ರಾತ್ರಿ ೧೦ ಗಂಟೆಗೆ ಭದ್ರಾವತಿಯ ತಂಡದಿಂದ ಆರ್ಕೇಸ್ಟ್ರಾ ಹಮ್ಮಿಕೊಳ್ಳಲಾಗಿದೆ.
ನಾಳೆ(೧೩ ರ ಮಂಗಳವಾರದಂದು) ರಾತ್ರಿ ಕರ್ಪೂರೋತ್ಸವ ,ನಾಸಿಕ್ ಡೋಲು ಕಾರ್ಯಕ್ರಮ ನಡೆದು ಧ್ವಜಾವರೋಹಣದ ಮೂಲಕ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.
ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾರುತಿ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ