ಬರ ನಿರ್ವಹಣೆ ಬಗ್ಗೆ ಕೇಂದ್ರ ಸರಕಾರದ ಸ್ಪಂದನೆಯಿಲ್ಲ
ಹುಳಿಯಾರು: ಸರ್ಕಾರ ೧೩೯ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರೈತರ ನೆರವಿಗೆ ಸೂಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು ,ಇದರ ನಿರ್ವಹಣೆ ಬಗ್ಗೆ ಗಮನಹರಿಸಲು ಎಲ್ಲಾ ತಾಲ್ಲೂಕುಗಳ ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ತೆರಳಿ ರೈತರನ್ನು ಸಂಪರ್ಕಿಸಿ ನೈಜ ಮಾಹಿತಿಯನ್ನು ಸಂಗ್ರಹಿಸಿ ಎಂದು ಕೆಪಿಸಿಸಿ ತಿಳಿಸಿರುವ ಮೇರೆಗೆ ನಾವುಗಳು ಬರಪೀಡೀತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಪೀಡೀತ ಪ್ರದೇಶ ಹಾಗೂ ತೆರೆದಿರುವ ಗೋಶಾಲೆಗಳನ್ನು ಭೇಟಿ ನೀಡಿ ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.ಸರ್ಕಾರ ಬರ ಎದುರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗೋಶಾಲೆಗಳನ್ನು ತೆರೆಯುವುದರ ಮೂಲಕ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯಲ್ಲಿ ನಡೆಸಿದ ಬರ ಅಧ್ಯಯನದ ವೇಳೆ ಕಂಡುಬಂದಿರುವ ಹಾಗೂ ರೈತರು ಹೇಳಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಸುಮಾರು ೭೨ ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿತ್ತು.ಆದರೆ ಈಗಿನ ಕೇಂದ್ರಸರ್ಕಾರ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದಂತೆ ವರ್ತಿಸುತ್ತಿದ್ದು ನಯಾಪೈಸೆಯಷ್ಟು ನೆರವು ನೀಡುತ್ತಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತರ ಸಮಸ್ಯೆ ಚರ್ಚಿಸಲು ಪ್ರಧಾನಿಗಳ ಭೇಟಿಗೆ ಪತ್ರ ಬರೆದು ಅವಕಾಶ ಕೋರುತ್ತಿದ್ದರೂ ಸಹ ಇದುವರೆಗೂ ಭೇಟಿಗೆ ಸಮಯನೀಡದೆ ಕೇವಲ ಡಿಜಿಟಲ್ ಇಂಡಿಯಾ ಮಂತ್ರ ಜಪಿಸುತ್ತಾ ಉದ್ಯಮಿಗಳ ಹಿತ ಕಾಯುತ್ತಿರುವುದು ಅವರ ರೈತ ಪರ ಕಾಳಹಿ ಎಷ್ಟಿದೆ ಎಂದು ತೋರಿಸುತ್ತಿದೆ.ಪ್ರಧಾನಿ ಮೋದಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ಈ ಕೂಡಲೇ ರೈತರ ಎಲ್ಲಾ ಸಲ ಮನ್ನಾ ಮಾಡುವ ಬಗ್ಗೆ ಘೋಷಿಸಲಿ ಎಂದರು.
ನೋಟು ರದ್ದು ಮಾಡಿದ್ದು ಸಮಸ್ಯೆಯಾಗಿದ್ದರೂ ಸಹ ಅಡ್ಡಿಯಿಲ್ಲ.ಆದರೆ ನೋಟು ಬದಲಾವಣೆ ಬಗ್ಗೆ ಮುಂಜಾಗ್ರತೆ ವಹಿಸದ ಕಾರಣ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು ಚಿಲ್ಲರೆ ಹಣಕ್ಕಾಗಿ ದಿನವಿಡಿ ಸರತಿ ಸಾಲಿನಲ್ಲಿ ಕಾಯುವಂತಾಗಿದೆ.ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಿ ಆಕ್ರೋಷ್ ದಿನವಾಗಿ ಆಚರಿಸಿದರೆ ಬಿಜೆಪಿಯವರು ಇದನ್ನೆ ಸಂಭಮ ದಿನವೆಂದು ಆಚರಿಸಿದ್ದು ಲಜ್ಜೆಗೇಡಿತನ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮಾತನಾಡಿ ಎಲ್ಲಾ ತಾಲ್ಲೂಕಿನಲ್ಲಿ ಹದಿನೈದು ಮುಂಚೆಯೇ ಗೋಶಾಲೆ ಆರಂಭವಾದರೆ ಚಿಕ್ಕನಾಯಕನಹಳ್ಳಿ ತಾಲ್ಲೀಕಿನಲ್ಲಿ ಮಾತ್ರ ಶಾಸಕರ ಉದಾಸೀನತೆಯಿಂದ ಈಗಷ್ಟೆ ಆರಂಭವಾಗಿದ್ದು ಅಧಿಕಾರಳು ಅಂಧ ದರ್ಬಾರು ನಡೆಸುತ್ತಿದ್ದು ಸ್ಥಳಿಯರನ್ನುಗಣನೆಗೆ ತೆಗೆದುಕೊಳ್ಳದೆ ಜಿಪಂ ಸದಸ್ಯರನ್ನೂ ಸಹ ಕನಿಷ್ಟ ಉದ್ಘಾಟನೆಗೂ ಆಹ್ವಾನಿಸದೆ ಕಡೆಗಣಿಸಿದ್ದಾರೆ.ಅಧಿಕಾರಿಗಳೇ,ಬರದಲ್ಲೂ ರಾಜಕೀಯ ಮಾಡುವುದನ್ನು ಕೈ ಬಿಡಿ ಎಂದು ಛೇಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈನ್ಸ್ ಬಸವರಾಜು, ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಹಂದನಕೆರೆ ಜಿಪಂ ಮಾಜಿ ಅಧ್ಯಕ್ಷ ರಘುನಾಥ್, ತಾಪಂ ಮಾಜಿ ಸದಸ್ಯ ಸ್ವಾಮಿನಾಥ್, ಕೃಷ್ಣೇಗೌಡ,ನಿರಂಜನ್, ಬಗರ್ ಹುಕುಂ ಕಮಿಟಿ ಸದಸ್ಯ ಹೊಸಳ್ಳಿ ಅಶೋಕ್, ಗ್ರಾಪಂ ಸದಸ್ಯರುಗಳಾದ ದಸೂಡಿ ಚಂದ್ರಣ್ಣ , ಎಚ್.ಆರ್.ವೆಂಕಟೇಶ್, ಹಾಗೂ ಹೊಯ್ಸಳಕಟ್ಟೆ ಗಿರೀಶ್ ,ಪ್ರದೀಪ್,ಕುಮಾರ್, ಉಮೇಶ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ