ಹುಳಿಯಾರು:ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ,ಜೈ ಕರ್ನಾಟಕ ಸಂಘ,ದಲಿತ ಸಂಘ,ಸೃಜನಾ ಮಹಿಳಮಂಡಳಿ,ವಿಶ್ವ ಮಾನವ ಹಕ್ಕು ಆಯೋಗ ಮತ್ತು ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಜಿಲ್ಲಾ ರೈತಸಂಘದ ಹೊಸಳ್ಳಿ ಚಂದ್ರಣ್ಣನ ಬಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ರಾಂಗೋಲಾಲ್ ಸರ್ಕಲ್ ಬಳಿ ರಸ್ತೆ ತಡೆಯನ್ನು ಡಿ. ೧೯ ರ ಸೋಮವಾರದಂದು ಬೆಳಿಗ್ಗೆ ೧೧ ಕ್ಕೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ,ಸೃಜನಾ ಮಹಿಳಾ ಘಟಕದ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ,ವಿ.ಮಾ.ಹ ಆಯೋಗದ ಅಧ್ಯಕ್ಷ ಪ್ರಭುದೇವ್,ಕರವೇ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್,ಜಯಕರ್ನಾಟಕ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ,ದಲಿತ ಸಂಘದ ಅಧ್ಯಕ್ಷ ನಂದಿಹಳ್ಳಿ ಗಿರೀಶ್,ಯಗಚೀಹಳ್ಳಿ ರಾಮಕೃಷ್ಣಪ್ಪ,ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಂದಿರಾ ರಾಜಶೇಖರ್,ತಾಲ್ಲೂಕ್ ರೈತ ಸಂಘದ ಅಧ್ಯಕ್ಷ ಕೆ.ಈಶ್ವರಪ್ಪ.ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕುಮಾರ್,ಉಪಾಧ್ಯಕ್ಷ ಶಂಕರಪ್ಪ,ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಗೋವಿಂದಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ