ಹುಳಿಯಾರು:ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ೨೫ ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಡಿ.30 ರಿಂದ ಜ.1 ರವರೆಗೆ ಮೂರುದಿನಗಳ ಕಾಲ ಅದ್ದೂರಿ ಸಮಾರಂಭ,ವೈಭವಪೂರಿತ ಉತ್ಸವ ಆಯೋಜಿಸಲಾಗಿದೆ.
ಡಿ.30 ರ ಶುಕ್ರವಾರ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರು,ದುರ್ಗಪರಮೇಶ್ವರಿ ದೇವಿ ,ಆಂಜನೇಯ ಸ್ವಾಮಿಯವರ ಆಗಮನದೊಂದಿಗೆ ಬೆಲಗೂರು ಅವಧೂತರಾದ ಬಿಂಧುಮಾಧವ ಸ್ವಾಮಿಗಳ ಉಪಸ್ಥಿತಿಯಲ್ಲಿ ಗಂಗಾಪೂಜೆ ಹಮ್ಮಿಕೊಳ್ಳಲಾಗಿದೆ.ಮುಂಜಾನೆ 108 ಕಳಸ ಹೊತ್ತ ಮಹಿಳೆಯರೊಂದಿಗೆ ಕೆರೆಬಾವಿಯಿಂದ ಅಯ್ಯಪ್ಪನ ದೇವಸ್ಥಾನದವರೆಗೆ ನಡೆಮುಡಿ ಉತ್ಸವ ನಡೆಯಲಿದೆ.
ಸಂಜೆ ಪುತ್ತೂರು ನರಸಿಂಹ ನಾಯಕ್ ತಂಡದಿಂದ ಅಯ್ಯಪ್ಪ ಸಂಗೀತ ಕಾರ್ಯಕ್ರಮವಿದೆ.
31 ರ ಶನಿವಾರದಂದು ಬೆ.7 ಗಂಟೆಗೆ ಮಹಾಗಣಪತಿ ಅಷ್ಟದ್ರವ್ಯ ಹವನ,ಸುಬ್ರಹ್ಮಣ್ಯ ಮೂಲ ಮಂತ್ರ ಹವನ,ಅಯ್ಯಪ್ಪಸ್ವಾಮಿ ಗಾಯತ್ರಿ ಹವನ ಹಮ್ಮಿಕೊಳ್ಳಲಾಗಿದೆ.
ಜ.1 ರ ಭಾನುವಾರದಂದು ಸಂಜೆ ವೈಭವದ ರಾಜಬೀದಿ ಉತ್ಸವ ನಡೆಯಲಿದ್ದು ಸ್ವಾಮಿಯನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಗುವುದು.ಚಂಡೆವಾದ್ಯ, ಚಿರುಕುನ್ನಯ್ಯ ಪೂಜಾ ಕುಣಿತ ಕಾರ್ಯಕ್ರಮ ,ವೀರಗಾಸೆ,ಕೇರಳದ ಹೂ ಕವಡೆ ಕಾರ್ಯಕ್ರಮ,ಚಿಟ್ಟಿಮೇಳ ಮುಂತಾದ ಕಲಾಪ್ರಕಾರಗಳ ಪ್ರದರ್ಶನವಿದೆ.
ಭಕ್ತಾಧಿಗಳು,ಸಾರ್ವಜನಿಕರು ರಜತೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷ ಕೆ.ಎಂ.ಎಲ್.ನರಸಿಂಹ ಮೂರ್ತಿ ಮನವಿಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ