ಹುಳಿಯಾರು:ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಹರಿಜನ–ಗಿರಿಜನ ಕಲ್ಯಾಣ ಉಪ ಯೋಜನೆಯಡಿ ೧೩೩.೭೭ ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಶುಕ್ರವಾರದಂದು ಚಾಲನೆ ನೀಡಿದರು.
ಹುಳಿಯಾರು ಹೋಬಳಿಯ ಗುರುವಾಪುರದಲ್ಲಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಸುರೇಶ್ ಬಾಬು ಭೂಮಿ ಪೂಜೆ ನೆರವೇರಿಸಿದರು. |
ಎಸ್.ಸಿ.ಪಿ ಯೋಜನೆಯಡಿ ಹೋಬಳಿಯ ಮೇಲನಹಳ್ಳಿ ,ಗುರುವಾಪುರ,ಮರೆನಾಡು ಲಂಬಾಣಿ ತಾಂಡ್ಯ,ಅಂಬಾರಪುರ ಲಂಬಾಣಿ ತಾಂಡ್ಯ,ಮಾರುಹೊಳೆ ಮತ್ತು ದಸೂಡಿ ಗ್ರಾಮಪಂಚಾಯ್ತಿಯ ಗಿಲ್ಯಾನಾಯಕನ ತಾಂಡ್ಯದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಒಟ್ಟು ೬೮.೭೭ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.
ಟಿ.ಎಸ್.ಪಿ ಯೋಜನೆಯಡಿ ಗಾಣಧಾಳು ಗ್ರಾಮಪಂಚಾಯ್ತಿಯ ಹನುಮದಾಸನ ಪಾಳ್ಯ , ಹೆಚ್.ಮೇಲನಹಳ್ಳಿ,ದಸೂಡಿ ಎಸ್.ಟಿ ಕಾಲೋನಿ, ಹೊಯ್ಸಳಕಟ್ಟೆಯ ಎಸ್.ಟಿ ಕಾಲೋನಿ,ಬೆಳ್ಳಾರ ಎಸ್.ಟಿ ಕಾಲೋನಿಗಳಿಗೆ ಒಟ್ಟು ೬೫ ಲಕ್ಷ ರೂಗಳ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
ಗುರುವಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸುರೇಶ್ ಬಾಬು ತಾವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆಧ್ಯತೆ ನೀಡಿದ್ದು ಹಳ್ಳಿಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪ್ರಥಮವಾಗಿ ಅಗತ್ಯ ಕುಡಿಯುವ ನೀರು, ರಸ್ತೆ, ವಿದ್ಯುತ್ ಮತ್ತಿತರ ಅಗತ್ಯ ಮೂಲಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.ಅವ್ಯವಸ್ಥೆಯಿಂದ ಕೂಡಿದ ಗ್ರಾಮದಲ್ಲಿನ ಕಾಲೋನಿಗಳು ರಸ್ತೆ ಕಾಣದೆ ಇಲ್ಲಿನ ನಿವಾಸಿಗಳಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದಿದ್ದನ್ನು ಮನಗಂಡು ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿಯಲ್ಲಿ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಸುರೇಶ್ ಬಾಬು ಭೂಮಿ ಪೂಜೆ ನೆರವೇರಿಸಿದರು. |
ಹೆಚ್.ಮೇಲನಹಳ್ಳಿಯ ದುರ್ಗಮ್ಮನ ದೇವಸ್ಥಾನಕ್ಕೆ ನಾಲ್ಕು ಲಕ್ಷ ರೂಪಾಯಿಗಳನ್ನು ಶಾಸಕರ ಅನುದಾನಡಡಯಲ್ಲಿ ನೀಡುವುದಾಗಿ ತಿಳಿಸಿದ ಅವರು ಬಗರ್ ಹುಕ್ಕುಂ ಅರ್ಜಿಗಳನ್ನು ಹೊಸದಾಗಿ ಸ್ವೀಕಾರ ಮಾಡುತಿಲ್ಲ.ಈ ಹಿಂದೆ ಕೊಟ್ಟವರಿಗೆ ಹಂತಹಂತವಾಗಿ ಮಂಜೂರು ಮಾಡಲಾಗುವುದು ಎಂದರು.
ದಸೂಡಿ ತಾಲ್ಲೂಕ್ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್,ಹುಳಿಯಾರು ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಇಂಜಿನೀಯರ್ ಮೋಹನ್ ಕುಮಾರ್,ಗ್ರಾಪಂ ಸದಸ್ಯರಾದ ಶಿವಕುಮಾರ್,ಲಕ್ಷ್ಮೀಶ್ ಮುಖಂಡರಾದ ರೇಣುಕಾಪ್ರಸಾದ್,ವಿಎಸ್ ಎಸ್ ಎನ್ ದೇವರಾಜು,ಮುದ್ದರಂಗಪ್ಪ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ