ಹುಳಿಯಾರು:ಪಟ್ಟಣದ ಶ್ರೀ ಆಂಜನೇಯಸ್ವಾಮಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ೮ ನೇ ವರ್ಷದ ಹನುಮಜಯಂತಿ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಡಿ೧೧ ರ ಭಾನುವಾರ ಸಂಜೆ ಜೀ ಟಿವಿ ವಾಹಿನಿಯ ಡ್ರಾಮ ಜ್ಯೂನಿಯರ್ಸ್ ಹಾಗೂ ಸರಿಗಮಪ ಮಕ್ಕಳ ತಂಡದಿಂದ ಹಾಗೂ ಖ್ಯಾತ ಹಿನ್ನಲೆ ಗಾಯಕರುಗಳಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
೧೨ ರ ಸೋಮವಾರದಂದು ಮುಂಜಾನೆ ೬ ಗಂಟೆಗೆ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಮ್ಮುಖದಲ್ಲಿ ಪವಮಾನ ಹೋಮ ನಡೆದು ೧೦ ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.೧೧ಗಂಟೆಗೆ ಮಹಾರಥೋತ್ಸವ ಹಾಗೂ ೧೨ ಗಂಟೆಯಿಂದ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಡಿ.೧೩ರ ಸಂಜೆ ೬ ಗಂಟೆಯಿಂದ ಸ್ವಾಮಿಯವರ ಹಾಗೂ ಗ್ರಾಮದೇವತೆಗಳ ವೈಭವದ ರಾಜಬೀದಿ ಉತ್ಸವ ನಡೆಯಲಿದ್ದು ಅದರೊಂದಿಗೆ ಮೈಸೂರಿನ ಡಿಜೆ ಸೌಂಡ್ಸ್ ಹಿನ್ನಲೆಯಲ್ಲಿ ವೀರಭದ್ರನ ಕುಣಿತ ,ಮಂಡ್ಯಾದ ಮಹಿಳಾ ಪೂಜಾ ಕುಣಿತ,ಬೆಂಕಿ ಬರಾಟೆ,ನಾದಸ್ವರ ಹಾಗೂ ಚಿಕ್ಕಮಗಳೂರು ಹುಲಿಹಳ್ಳಿಯ ಬಸವ ಜ್ಯೋತಿ ಮಹಿಳಾ ವೀರಗಾಸೆ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ನೀಡಲಿದೆ.
ಮೂರು ದಿನಗಳ ಕಾಲದ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಸ್.ರಾಮನಾಥ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ