ಹುಳಿಯಾರು:ರೈತರು ಬೆಳೆದ ಯಾವ ಬೆಳೆಗೂ ಉತ್ತಮ ಬೆಲೆ ಸಿಗ್ಗುತ್ತಿಲ್ಲ.ರಾಜ್ಯದ ತೆಂಗು ಸೇರಿದಂತೆ ಅಡಿಕೆ ಬೆಳೆಗಾರರು ಸಹ ತೀವ್ರ ಸಂಕಷ್ಟದಲ್ಲಿದ್ದು ಈ ಬಗ್ಗೆ ಪ್ರಧಾನಮಂತ್ರಿ ಮೋದಿಯನ್ನು ಭೇಟಿಯಾಗಿ ರೈತರ ಸಮಸ್ಯೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕೊಬ್ಬರಿಗೆ ಸೂಕ್ತ ಬೆಲೆ ಕೊಡಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಭರವಸೆಯಿತ್ತರು.
ಮಾಜಿ ಪ್ರಧಾನ ಮಂತ್ರಿ ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಶಾಸಕರುಗಳ ಹಾಗೂ ಸಂಸದರ ನಿಯೋಗ. |
ಮಾಜಿ ಪ್ರಾಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಕರೆದೊಯ್ಯುವ ಮೂಲಕ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಾನಾ ತಾಲ್ಲೂಕಿನ ಶಾಸಕರುಗಳು ಹಾಗೂ ಸಂಸದ ಮುದ್ಧಹನುಮೇಗೌಡರು ಮತ್ತು ಹುಳಿಯಾರಿನ ರೈತ ಮುಖಂಡರ ನಿಯೋಗ ಶನಿವಾರದಂದು ಮಾಜಿ ಪ್ರಧಾನ ಮಂತ್ರಿ ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಮೇಲ್ಕಂಡಂತೆ ನುಡಿದರು.
ರೈತರ ಸಮಸ್ಯೆ ಸಂಕಷ್ಟಗಳ ಬಗ್ಗೆ ನನಗೆ ಅರಿವಿದ್ದು ಕೊಬ್ಬರಿಗೆ ಸಧ್ಯ ನೀಡಲಾಗುತ್ತಿರುವ ೬೨೪೦ರೂ ಗಳು ಕೊಬ್ಬರಿಯ ಕನಿಷ್ಟ ಬೆಲೆಯೂ ಅಲ್ಲವಾಗಿದ್ದು ಕೇಂದ್ರ ಬೆಂಬಲ ಬೆಲೆಯಾಗಿ ೧೫ ಸಾವಿರ ರೂಪಾಯಿಯಾದರೂ ನೀಡಿದಲ್ಲಿ ರೈತರು ನಿರಾಳರಾಗಬಹುದಾಗಿದೆ.
ತೆಂಗು,ಅಡಿಕೆ ಸೇರಿದಂತೆ ರಬ್ಬರ್ ಬೆಳೆಗಾರರಿಗೂ ಬೆಲೆ ಕುಸಿತದ ಸಮಸ್ಯೆಯಿದ್ದು ಈ ಬಗ್ಗೆ ಮುಂದಿನ ಬಜೆಟ್ ಅಧಿವೇಶನದ ಸಮಯದಲ್ಲಿ ಚರ್ಚಿಸುವುದಾಗಿ ಹೇಳಿದರು.ಕೇರಳ ಸರ್ಕಾರ ರಬ್ಬರ್ ಗೆ ಬೆಂಬಲ ಬೆಲೆ ನೀಡುವ ಮೂಲಕ ಅಲ್ಲಿನ ರೈತರ ಹಿತಕಾಯ್ದಿದೆ.ಅದೇ ನೀತಿಯನ್ನು ರಾಜ್ಯ ಸರ್ಕಾರವೂ ಕೂಡ ಜಾರಿಗೊಳಿಸಿ ಕೊಬ್ಬರಿ ,ಅಡಿಕೆಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದರು.
ಸಂಸದ ಅನಂತಕುಮಾರ್,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಹ ಕರೆದೊಯ್ದು ರಾಜ್ಯದ ತೆಂಗು ಬೆಳೆಗಾರರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲೋಣ.ಪ್ರಧಾನಮಂತ್ರಿಯವರು ಸಮಸ್ಯೆಗೆ ಸ್ಪಂದಿಸುವ ಭರವಸೆಯಿದ್ದು ಬಗೆಹರಿಸದಿದ್ದಲ್ಲಿ ಪ್ರಧಾನಿಗಳ ನಿವಾಸದ ಮುಂದೆಯೇ ಧರಣಿ ಕೂತಾದರೂ ಸರಿ ರಾಜ್ಯದ ರೈತರ ಹಿತಕಾಪಾಡುವುದಾಗಿ ಭರವಸೆಯಿತ್ತರು.
ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಮಾತನಾಡಿದ ಮಾಜಿ ಪ್ರಧಾನ ಮಂತ್ರಿ ದೇವೇಗೌಡ. |
ಸಭೆಯಲ್ಲಿ ಸಂಸದ ಮುದ್ಧಹನುಮೇಗೌಡರು ಜಿಲ್ಲೆಯ ರೈತರ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನಫೆಡ್ ತೆರಯಲು ಸರ್ಕಾರ ಅನುಸರಿಸುತ್ತಿರುವ ದ್ವಂದ್ವ ನೀತಿಯ ಬಗ್ಗೆ ಗಮನಸೆಳೆದರು.
ಅರಸಿಕೆರೆ ಶಾಸಕ ಶಿವಲಿಂಗೇಗೌಡ,ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸೇರಿದಂತೆ ರಾಜ್ಯ ಹಸಿರುಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್,ತಾಲ್ಲೂಕ್ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್,ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಾರ್ಜುನ್ ಮತ್ತಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ