ಹುಳಿಯಾರು: ಕೊಬ್ಬರಿಯ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತಸಂಘದವರು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆಸುತ್ತಿರುವ ಧರಣಿಯನ್ನ ಬೆಂಬಲಿಸಿ ತುಮಕೂರು ಜಿಲ್ಲಾ ರೈತಸಂಘದ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಸೋಮವಾರದಂದು ಪ್ರತಿಭಟನಾ ಮೆರವಣಿಗೆ ಹಾಗೂ ಕೆಲ ಕಾಲ ರಸ್ತೆತಡೆ ನಡೆಸಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ತುಮಕೂರು ಜಿಲ್ಲಾ ರೈತಸಂಘದವರು ಉಪತಹಸೀಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಸಲ್ಲಿಸಿದರು. |
ಹುಳಿಯಾರಿನ ರಾಂಗೋಪಾಲ್ ಸಮೀಪದ ಸಂಘದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ, ಡಾ:ರಾಜ್‌ಕುಮಾರ್‌ರಸ್ತೆ, ಬಸ್ ನಿಲ್ದಾಣ, ಗಾಂಧಿಪೇಟೆ ಮೂಲಕ ಸಾಗಿ ರಾಷ್ಟೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲವು ಸಮಯ ರಸ್ತೆ ತಡೆ ನಡೆಸಿ ನಂತರ ಮೆರವಣಿಗೆಯು ಮಾರುಕಟ್ಟೆಯ ಆವರಣದ ಧರಣಿ ಸ್ಥಳಕ್ಕೆ ತೆರಳಿತು.
ಈ ವೇಳೆ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ರೈತರು ಬೆಳೆಯುಬ ಕೊಬ್ಬರಿ ,ದ್ವಿದಳ ಧಾನ್ಯಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಬೆಲೆಸಿಗದೆ ,ಬೆಲೆಗಾಗಿ ಹೋರಾಡುವ ಪರಿಸ್ಥಿರಿ ಒದಗಿರುವುದು ದುರದೃಷ್ಟ.ರೈತರು ಸಂಕಷ್ಟದಲ್ಲಿ ಸಿಲುಕಿದಾಗ ಸರಕಾರಗಳು ಎಚ್ಚೆತ್ತುಕೊಂಡು ಪರಿಹಾರ ನೀಡುವಂತಹ ಕ್ರಮಗಳನ್ನು ತ್ವರಿತಗತಿಯಲ್ಲಿ ಕಾರ್ಯಾರೂಪಕ್ಕೆ ತರುವಂತೆ ಒತ್ತಾಯಿಸಿದರು.
ಕೊಬ್ಬರಿ ಬೆಳೆ ಬೆಳೆಯಲು ಸಾವಿರಾರು ರೂ ತಗುಲುವುದಿದ್ದು ಕೊಬ್ಬರಿಗೆ ಕನಿಷ್ಟ ೧೭ಸಾವಿರ ಬೆಲೆ ದೊರೆಯುವಂತೆ ಸರಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ರೈತರು ಪ್ರತಿ ಗ್ರಾಮದಲ್ಲೂ ಸಂಘಟಿತರಾದಲ್ಲಿ ಹೋರಾಟಕ್ಕೊಂದು ಹಾದಿಯಾಗುತ್ತದೆ ಎಂದರು
ಈಗಾಗಲೆ ರಾಜ್ಯ ಸರಕಾರ ನೀರಾ ನೀತಿ ಜಾರಿಗೆ ತಂದಿರುವುದು ಶ್ಲಾಘನೀಯ. ತೆಂಗು ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲೂ ಸಹಾ ನೀರಾ ಇಳಿಸಲು ಅವಕಾಶ ಕಲ್ಪಿಸಿ ಪ್ರತಿ ಹೋಬಳಿಗಳಲ್ಲಿ ಶುದ್ಧ ನೀರಾ ಘಟಕಗಳನ್ನ ತೆರೆದು ಪ್ರತಿ ಗ್ರಾಮಗಳಿಗೊಂದು ನೀರಾ ಡೈರಿಗಳನ್ನು ತೆರೆಯುವಂತೆ ಹಾಗೂ ನೀರಾ ಇಳಿಸುವ ಬಗ್ಗೆ ರೈತರಿಗೆ ಉಚಿತವಾಗಿ ತರಬೇತಿ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿದರು |
ರೈತಸಂಘದ ಮುಖಂಡ ಮಲ್ಲಿಕಾರ್ಜುನಯ್ಯ ಮಾತನಾಡಿ ಈಗಾಗಲೆ ವಿವಿಧ ತಾಲ್ಲೂಕಿನ ಶಾಸಕರು ಮತ್ತು ಸಂಸದರು ಈ ಧರಣಿ ಸ್ಥಳಕ್ಕೆ ಆಗಮಿಸಿ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಪ್ರಾಧಾನ ಮಂತ್ರಿಗಳ ಬಳಿಗೆ ನಿಯೋಗ ತೆರಳೋಣವೆಂದು ಭರವಸೆ ನೀಡಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ. ಆದರೆ ಕೊಬ್ಬರಿ ಬೆಲೆ ಹೆಚ್ಚಳ ಆಗುವ ತನಕ ಈ ಧರಣಿಯನ್ನ ನಿರಂತರವಾಗಿ ಮುಂದುವರೆಯುತ್ತದೆ ಎಂದರು.
ನಂತರ ಸ್ಥಳಕ್ಕೆ ಆಗಮಿಸಿದ ಉಪತಾಹಶೀಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಸಲ್ಲಿಸಿದರು.
ರೈತರಂಘದ ಲೋಕಣ್ಣ, ಮಲ್ಲಪ್ಪ, ಸತೀಶ್ ಮಾತನಾಡಿದರು.ಧರಣಿಯಲ್ಲಿಸೃಜನಾ ಮಹಿಳಾ ಘಟಕದ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ,ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಂದಿರಾ ರಾಜಶೇಖರ್,ತಾಲ್ಲೂಕ್ ರೈತ ಸಂಘದ ಅಧ್ಯಕ್ಷ ಕೆ.ಈಶ್ವರಪ್ಪ.ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕುಮಾರ್, ಪಾಳ್ಯ ಬೀರಪ್ಪ,ಉಪಾಧ್ಯಕ್ಷ ಶಂಕರಪ್ಪ,ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಗೋವಿಂದಪ್ಪ ಮತ್ತಿತರರು ಸೇರಿದಂತೆ ಐವತಕ್ಕೂ ಹೆಚ್ಚು ಮಹಿಳೆಯರೂ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ