ಹುಳಿಯಾರು : ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.ಹೊಸ ವರ್ಷಾಚರಣೆಗೆ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು ದುಬಾರಿಯಾದರೂ ಪರವಾಗಿಲ್ಲ, ಹೊಸ ವರ್ಷಾಚರಣೆಗೆ ಕೇಕ್ ಬೇಕೆಬೇಕು ಎಂಬಂತಾಗಿದ್ದು ಈಗಾಗಲೇ ಬೇಕರಿಗಳಲ್ಲಿ ನೂರಾರು ಸಂಖ್ಯೆಯ ಕೇಕ್‌ಗಳು ತಯಾರಾಗಿ ಮಾರಾಟವಾಗುತ್ತಿದೆ.
ಹುಳಿಯಾರಿನ ರಾಂಗೋಪಾಲ್ ಸರ್ಕಲ್ ಬಳಿಯಿರುವ ಬೆಂಗಳೂರು ಬೇಕರಿಯಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು. |
ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಕಾಲು ಕೆಜಿ ಗಾತ್ರದ ಸಣ್ಣ ಕೇಕ್‌ನಿಂದ ೧೦ಕೆಜಿಯ ಬೃಹತ್ ಗಾತ್ರದ ಕೇಕ್‌ಗಳನ್ನು ಬೇಕರಿಗಳಲ್ಲಿ ಮಾರಾಟಕ್ಕೆ ಸಿದ್ಧಪಡಿಸಲಾಗಿದೆ. ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಭರದಿಂದ ವ್ಯಾಪಾರ ಸಾಗಿದ್ದು ಜ.1ರಂದೂ ಕೂಡ ಕೇಕ್ ಮಾರಾಟ ಮುಂದುವರಿಯುತ್ತದೆ.ಕೇಜಿ ಕೇಕ್ ಗೆ ರು. 250 ರೂನಿಂದ ೪೦೦ ರೂವರೆಗೆ ಮಾರಾಟವಾಗುತ್ತಿದೆ.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ರಾಂಗೋಪಾಲ್ ಸರ್ಕಲ್ ಬಳಿಯಿರುವ ಬೆಂಗಳೂರು ಬೇಕರಿ, ಎಸ್.ಎಲ್.ಆರ್.ಬೇಕರಿ,ಡಾ.ರಾಜ್ ಕುಮಾರ್ ರಸ್ತೆಯ ಬೆಂಗಳೂರು ಬೇಕರಿ,ಲಕ್ಷ್ಮಿಬೇಕರಿ, ವೆಂಕಟೇಶ್ವರ ಬೇಕರಿ, ಸಿದ್ದಲಿಂಗೇಶ್ವರ ಬೇಕರಿ,ಗಣೇಶ್ ಬೇಕರಿಗಳಲ್ಲಿ ಶುಕ್ರವಾರದಿಂದಲೇ ವಿವಿಧ ಕೇಕ್ ಗಳ ತಯಾರಿ,ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.
ಕಳೆದ ಇಪ್ಪತ್ತು ವರ್ಷದಿಂದ ಬೇಕರಿ ನಡೆಸುತ್ತಿದ್ದು ಹೊಸವರ್ಷದ ಆಚರಣೆಯ ವೇಳೆ ಹೆಚ್ಚಿನ ಕೇಕ್ ಗೆ ಡಿಮ್ಯಾಂಡ್ ಇರುತ್ತದೆ.ಅದಕ್ಕಾಗಿ ಗ್ರಾಹಕರ ಬಯಕೆಗೆ ತಕ್ಕಂತೆ ಕೇಕ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದೇವೆ. ಗ್ರಾಹಕರಿಂದ ಅರ್ಡರ್ ತೆಗೆದುಕೊಂಡು ಕೆಲ ಕೇಕ್ ತಯಾರಿಸಿದರೆ , ಮತ್ತೆ ಕೆಲ ಕೇಕ್ ಗಳನ್ನು ವಿವಿಧ ಮಾದರಿಗಳಲ್ಲಿ ನಾವೇ ತಯಾರಿಸುತ್ತೇವೆ ಎನ್ನುತ್ತಾರೆ ಬೆಂಗಳೂರು ಬೇಕರಿಯ ಕೇಶವಮೂರ್ತಿ .
ಫೈನಾಫಲ್, ಅರೇಂಜ್, ಐಸ್ ಕ್ರೀಂ ಕೇಕ್, ಆಪಲ್ ಕೇಕ್, ಚಾಕಲೇಟ್ ಕೇಕ್,ಹನಿಕೇಕ್,ಪ್ಲಂ ಕೇಕ್ ಸೇರಿದಂತೆ ಹಲವು ಬಗೆಯ,ನಾನಾ ತೂಕದ ಕೇಕ್ ಗಳು ಎಲ್ಲಾ ಬೇಕರಿಯಲ್ಲೂ ಸಿದ್ದಪಡಿಸಿದ್ದು,ಮಿಕ್ಕಿಮೌಸ್,ಹೂವಿನಕುಂಡ, ಹೃದಯ, ಗಿಟಾರ್,ಫ್ಲವರ್ ಸೇರಿದಂತೆ ವಿವಿಧ ಆಕೃತಿ ಹಾಗೂ ಬಣ್ಣದಲ್ಲಿ ಜನರು ಹೇಳುವ ಆಕೃತಿಯಲ್ಲಿ ಕೇಕ್ ತಯಾರಿಸಿಕೊಡುತ್ತಾರೆ.
ಬೆಂಗಳೂರು ಬೇಕರಿಯ ಧರ್ಮರಾಜ್ ಅವರು ಕಳೆದ ಹತ್ತಾರು ವರ್ಷದಿಂದ ಹೊಸವರ್ಷದ ಆಚರಣೆ ಅಂಗವಾಗಿ ಆಕರ್ಷಕ ಕೇಕ್ ಗಳ ತಯಾರಿ ಮಾಡುತ್ತಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಕೇಕ್ ತಯಾರಿಸಿಕೊಡುತ್ತಾರೆ.
ಒಟ್ಟಾರೆ ಹೊಸವರ್ಷ ಆಚರಣೆಯಲ್ಲಿ ಕೇಕ್ ವ್ಯಾಪಾರ ಭರಾಟೆಯಿಂದ ಕೂಡಿದ್ದು ಪಟ್ಟಣದ ಪ್ರತಿ ಬೇಕರಿಗಳಲ್ಲಿ ಗ್ರಾಹಕರಿಗಾಗಿ ಕೇಕ್ ಗಳು ಸಿದ್ದಗೊಂಡು ಕಾಯುತ್ತಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ