ಇಂದಿನ ಕೃತಿಕೋತ್ಸವಕ್ಕೆ ಹತ್ತುಸಾವಿರದಷ್ಟು ಜನ ಸೇರುವ ನಿರೀಕ್ಷೆ: ಕನಿಷ್ಟ ಸೌಲಭ್ಯ ಒದಗಿಸಲು ಕೂಡ ಬಾರದ ಮುಜರಾಯಿ ಇಲಾಖೆ
ಹುಳಿಯಾರು:ಈ ಭಾಗದಲ್ಲಿ ಪುರದ ಮಠ ಎಂದರೆ ತಕ್ಷಣ ಜ್ಞಾಪಕ ಬರುವುದು ಅಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದ ರಾಗಿ ಮುದ್ದೆ ಸಾರಿನ ಊಟ ಹಾಗೂ ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಪೂಜೆಯಾಗಿದ್ದು ಇದಕ್ಕಾಗಿ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ.ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
ಮುಜರಾಯಿ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪುರದ ಶ್ರೀ ಚನ್ನಬಸವಣ್ಣ ದೇವಸ್ಥಾನ |
ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಯಾವುದೇ ವಾಹನ ವ್ಯವಸ್ಥೆಯಿಲ್ಲ.ಸ್ವಂತ ವಾಹನಗಳಲ್ಲಿ ಬರುವವರು ಕಿರಿದಾದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಬರುವುದರೊಳಗೆ ಹೈರಾಣೆದ್ದು ಹೋಗುತ್ತಾರೆ.ಇಲ್ಲಿ ಉಳಿದಿಕೊಳ್ಳಲು ಸ್ವಲ್ಪ ಮಟ್ಟಿನ ವ್ಯವಸ್ಥೆ ಮಾಡಲಾಗುತ್ತದೆಯಾದರೂ ಸ್ನಾನಗೃಹ,ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯವಿಲ್ಲದೆ ಭಕ್ತರು ಪರದಾಡುವ ಸ್ಥಿತಿ ಇದೆ.
ಇಂದು ಡಿ.೧೨ರಂದು ನಡೆಯಲಿರುವ ಕಾರ್ತಿಕ ಮಹೋತ್ಸವಕ್ಕೆ ಕನಿಷ್ಟ ಎಂಟರಿಂದ ಹತ್ತು ಸಾವಿರದಷ್ಟು ಭಕ್ತರು ಸೇರುವುದಿದ್ದು ಅದರಲ್ಲೂ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಆಗಮಿಸುವುದಿದ್ದು ಅಗತ್ಯ ಸೌಲಭ್ಯಗಳು ಇಲ್ಲಿಲ್ಲ .ಕನಿಷ್ಟ ಶೌಚಕ್ಕೂ,ಮೂತ್ರಕ್ಕೂ ಕೂಡ ವ್ಯವಸ್ಥೆಯಿಲ್ಲದೆ ವಿಸರ್ಜನೆಗೆ ಬಯಲಿಗೆ ಹೋಗುವ ಅನಿವಾರ್ಯತೆಯಿದೆ.ಯಾವುದೇ ಸೌಕರ್ಯ ಕಲ್ಪಿಸದ ಮುಜರಾಯಿ ಇಲಾಖೆಗೆ ಭಕ್ತರು ಹಿಡಿ ಶಾಪ ಹಾಕುತ್ತಾ ತೆರಳುವುದು ಮಾಮೂಲಿಯಾಗಿದೆ.
ಇಲ್ಲಿನ ಭಕ್ತರೇ ಸೇರಿಕೊಂದು ಶಾಸಕರ ,ತಾಲ್ಲೂಕ್ ಪಂಚಾಯ್ತಿ ಅನುದಾನದಿಂದ ಸಮುದಾಯ ಭವನ ನಿರ್ಮಿಸಿದ್ದಾರೆ ಗ್ರಾಮಪಂಚಾಯ್ತಿ ಅನುದಾನದಿಂದ ನೀರಿನ ವ್ಯವಸ್ಥೆ ಮಾಡಿಕೊಂಡಿದೆ.ತದನಂತರದ ದಿನದಲ್ಲಿ ಸಮುದಾಯ ಭವನಕ್ಕೆ ಲಗ್ಗತ್ತಾಗಿ ಅಡುಗೆ ಕೋಣೆ ಮಾಡಿದ್ದು ಆ ಸಮಯದಲ್ಲಿ ಎರಡು ಸ್ನಾನಗೃಹ ನಿರ್ಮಿಸಲಾಗಿದೆ.ಅದಕ್ಕೆ ಹಾಕಿದ್ದ ಬಾಗಿಲು ಒಡೆದು ಐದಾರು ವರ್ಷಗಳೆ ಕಳೆದಿದ್ದು ಯಾರೊಬ್ಬರೂ ರಿಪೇರಿಗೆ ಮುಂದಾಗಿಲ್ಲ.
ಭಕ್ತಾಧಿಗಳಿಗೆ ನಿರ್ಮಿಸಲಾಗಿರುವ ನಿರುಪಯುಕ್ತ ಸ್ನಾನಗೃಹ |
ದೇವಾಲಯ ನಿರ್ವಹಣೆಗೆ ಸ್ಥಳಿಯ ಆಡಳಿತ ಮಂಡಳಿ ಇಲ್ಲಿಲ್ಲದ ಕಾರಣ ದೇವಾಲಯ ಸೇರಿದಂತೆ ಎಲ್ಲದರ ನಿರ್ವಹಣೆ ಸಮಸ್ಯೆಯಾಗಿದೆ.ಸಮಿತಿಯಾದರೂ ಇದ್ದಿದ್ದರೆ ಅಷ್ಟೊಇಷ್ಟೊ ಕೆಲಸ ಕಾರ್ಯಗಳು ನಡೆಯಬಹುದಿದ್ದು ತಹಸೀಲ್ದಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಸಮಿತಿಯ ಪ್ರಸ್ತಾಪ ನೆನೆಗುದಿಗೆ ಬಿದ್ದಿದ್ದೆ.ಇದರಿಂದ ಗ್ರಾಮಸ್ಥರು ಇಲಾಖೆ ವಿರುದ್ಧ ಭಕ್ತರು ಬೇಸರಗೊಂಡಿದ್ದಾರೆ.
ಮುಜರಾಯಿ ದೇವಸ್ಥಾನ ಎಂದು ಗ್ರಾಮಸ್ಥರು ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದರಿಂದ ಅಭಿವೃದ್ಧಿ ಕಾಣದಾಗಿದೆ.
ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಛತ್ರ,ಶೌಚಾಲಯ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ,ರಸ್ತೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.
------------------------------
ಮುಜರಾಯಿಗೆ ಒಳಪಟ್ಟಿದ್ದರೂ ಇದರ ಅಭಿವೃದ್ಧಿ ಮಾತ್ರ ನಾಸ್ತಿ.ಇಲ್ಲಿಗೆ ಕನಿಷ್ಟ ಮೂಲ ಸೌಕರ್ಯವನ್ನು ಒದಗಿಸದ ಇಲಾಖೆ ಪ್ರತಿ ಆರು ತಿಂಗಳಿಗೊಮ್ಮೆ ಮಾತ್ರ ಹುಂಡಿ ಹಣ ಎಣಿಕೆ ಮಾಡಿ ಕೊಂಡೊಯ್ಯುವುದನ್ನು ಮಾತ್ರ ಮರೆಯುವುದಿಲ್ಲ.ದೇವಾಲಯದ ಅರ್ಚಕರಿಗೆ ತಸ್ತಿಕ್ ಹಣ ಮಾತ್ರ ನೀಡುವ ಇಲಾಖೆ ಅಭಿವೃದ್ಧಿ ವಿಚಾರಕ್ಕೆ ಇತ್ತ ತಿರುಗಿ ನೋಡದಂತಿರುವುದು ಮಾತ್ರ ವಿಪರ್ಯಾಸ: ಜೆಸಿಬಿ ಬಸವರಾಜು,ಬಸವನಗುಡಿ
----------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ