ಹುಳಿಯಾರು:ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಸದಾ ಬರಪೀಡಿತವಾಗಿದ್ದು ತೆಂಗ-ಕೊಬ್ಬರಿಯನ್ನೆ ಅವಲಂಬಿಸಿ ಜೀವನ ಮಾಡುತ್ತಿರುವ ಕೃಷಿಕರ ಬದುಕು ಮೂರಾಬಟ್ಟೆಯಾಗಿದ್ದು , ಸಾಲ ಸೋಲ ಮಾಡಿ ಉಸಿರು ಹಿಡಿದುಕೊಂಡಿರುವ ರೈತರ ನೆರವಿಗೆ ಸರಕಾರ ಬರಬೇಕೆಂದು ಬಡಕೇಗುಡ್ಲು ನರಸಿಂಹಯ್ಯ ಒತ್ತಾಯಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೩೯ ನೇ ದಿನದಂದು ಬಡಕೆಗುಡ್ಲು ಗ್ರಾಮಸ್ಥರು ಪಾಲ್ಗೊಂಡಿದ್ದರು. |
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ೩೯ ನೇ ದಿನದಂದು ಪಾಲ್ಗೊಂಡು ಮಾತನಾಡಿದ ಅವರು ರೈತರ ಬೆಳೆಯುವ ಯಾವುದೇ ಕೊಬ್ಬರಿ,ಅಡಿಕೆ,ರಾಗಿ,ಟೊಮ್ಯಾಟೊ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದಿರುವುದು ರೈತರ ಕೃಷಿ ಬದುಕನ್ನೆ ಅಣಕಮಾಡುವಂತಿದೆ ಎಂದರು
ಭೂಮಿಯಿದ್ದರೆ ಹಸಿರು,ಹಸಿರಿದ್ದರೆ ರೈತರು,ರೈತರಿದ್ದರೆ ಜೀವಸಂಕುಲಕ್ಕೆ ಉಳಿಗಾಲವಿದ್ದು ಕೃಷಿ ಬಗ್ಗೆ ತಾತ್ಸಾರ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕೃಷಿಯನ್ನೆ ನಂಬಿ ಜೀವನ ಮಾಡುವ ರೈತರುಗಳೇ ಇಲ್ಲದಂತಾಗುತ್ತಾರೆಂದು ಎಚ್ಚರಿಸಿದರು.
ಬಡಕೆಗುಡ್ಲುವಿನಿಂದ ಸುಮಾರು ಐವತ್ತಕ್ಕೂ ಹೆಚ್ಚು ರೈತರು ಟ್ರಾಕ್ಟರ್ ನಲ್ಲಿ ದಿನಸಿ ಸಮೇತ ಆಗಮಿಸಿ ರಸ್ತೆಯಲ್ಲೆ ಅಡುಗೆ ಮಾಡಿ ಧರಣಿನಿರತ ರೈತರಿಗೆ ಮುದ್ದೆ ಊಟ ಉಣಬಡಿಸಿದರು.
ಧರಣಿಯಲ್ಲಿ ಗ್ರಾಮದ ಗಂಗಾಧರಯ್ಯ,ಕೃಷ್ಣಪ್ಪ,ರಮೇಶ್,ಕೃಷ್ಣಪ್ಪ,ಹರ್ಷ,ವೆಂಕಟೇಶ್,ಪಟೇಲ್ ರಾಮಿ,ಅನಂತಕುಮಾರ್,ಹೊನ್ನಪ್ಪ,ಗಜೇಂದ್ರ,ವಿಶ್ವೇಶ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ