ಹುಳಿಯಾರು:ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಸ್ತು ಪ್ರದರ್ಶನಗಳು ಅಗತ್ಯವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಇನ್ನಿತರ ವಿಷಯಗಳಲ್ಲಿ ಆಸಕ್ತಿವಹಿಸಿ ಆ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರು ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಕಾರ್ಯಾದರ್ಶಿ ಕವಿತ ಕಿರಣ್‌ಕುಮಾರ್ ತಿಳಿಸಿದರು.
ಹುಳಿಯಾರಿನ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶನಿವಾರದಂದು ಪುಟಾಣಿ ಮಕ್ಕಳ ವಸ್ತುಪ್ರದರ್ಶನವನ್ನು ಕವಿತಾ ಕಿರಣ್ ಉದ್ಘಾಟಿಸಿದರು, ಪ್ರಾಂಶುಪಾಲರಾದ ಮಹದೇವ್,ಐಶ್ವರ್ಯ,ಅಮಿತ್ ಇದ್ದಾರೆ. |
ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಆವರಣದಲ್ಲಿ ಶನಿವಾರದಂದು ಎಲ್.ಕೆ.ಜಿ ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಎಕ್ಸ್ ಪೋ-೧೬ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳ್ಳದೆ ಇಂತಹ ಕಾರ್ಯಕ್ರಮಗಳು ನಡೆದಾಗ ಪ್ರತಿ ಮಕ್ಕಳು ಸಹಾ ಭಾಗವಹಿಸುವ ಮೂಲಕ ತಮ್ಮಲ್ಲಿನ ಪ್ರತಿಭೆ ತೋರಿಸುವಂತೆ ಸಲಹೆ ನೀಡಿದರು.
ಈ ವಸ್ತು ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ತಯಾರಿಸಿದ ವಿಧಾನಸೌಧದ ಪ್ರತಿಕೃತಿ,ಪೋಸ್ಟ್ ಆಫೀಸ್,ಬ್ಯಾಂಕ್,ಅರಣ್ಯ ಪ್ರದೇಶ, ಸರಕಾರಿ ಆಸ್ಪತ್ರೆ, ಗೋಲ್‌ಗುಂಬಸ್ಸ್, ತಾಜ್ ಮಹಲ್,ಬೇಕರಿ, ಶ್ರೀಅಯ್ಯಪ್ಪಸ್ವಾಮಿ ದೇವಾಲಯ,ಉದ್ಯಾನವನ, ಜಲಪಾತದ ಮಾಡಲ್,ಧಾನ್ಯಗಳ ಬಗೆ, ಮನೆಗಳ ಕಟ್ಟಡ, ಗೋಲ್ಡನ್‌ಟೆಂಪಲ್, ಗಿಡಗಳ ನರ್ಸರಿ ,ಹಳೇ ನಾಣ್ಯಗಳ ಸಂಗ್ರಹ,ಹಾಲಿನ ಕೇಂದ್ರ,ಸ್ಮಾರ್ಟ್ ಸಿಟಿ, ಸೇರಿದಂತೆ ವಿವಿಧ ಬಗೆಯ ಪ್ರತಿಕೃತಿಗಳನ್ನು ರಚಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು.ಎಲ್ ಕೆಜಿಯ ಪುಟಾಣಿ ನೇಸರ ತಯಾರಿಸಿದ್ದ ಡೈನೋಸಾರ್ ಎಲ್ಲರ ಗಮನ ಸೇಳೆಯಿತು.ಪುಟಾಣಿಗಳು ತಾವು ತಯಾರಿಸಿರುವ ಮಾದರಿ ,ಅದರ ಉದ್ದೇಶ ಮತ್ತು ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.
ಪುಟಾಣಿಗಳ ಸಾಧನೆಯ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಮಹದೇವ್,ಮಹಂತೇಶ್, ಪ್ರಶಾಂತ್, ಐಶ್ವರ್ಯ, ಅಮಿತ್ ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ