ಕಾರೇಹಳ್ಳಿಯಲ್ಲಿ ಘೇರಾವ್ ಕಾರ್ಯಕ್ರಮ
ಹುಳಿಯಾರುಎಪಿಎಂಸಿ ಮುಂದೆ ನಡೆಯುತ್ತಿರುವ ಕೊಬ್ಬರಿ ಚಳುವಳಿಗೆ ಶನಿವಾರದಂದು ೩೦ ದಿನ ತುಂಬಿದ್ದು ಶಾಸಕರ ನಿರ್ಲಕ್ಷ್ಯವನ್ನು ಧರಣಿನಿರತರು ಖಂಡಿಸಿದರು. |
ಹುಳಿಯಾರು:ಪಟ್ಟಣದ ಎಪಿಎಂಸಿ ಮುಂದೆ ನಡೆಯುತ್ತಿರುವ ಕೊಬ್ಬರಿಚಳುವಳಿಗೆ ಶನಿವಾರದಂದು ೩೦ ದಿನ ತುಂಬಿದ್ದು, ಇಷ್ಟು ದಿನವಾದರೂ ನಮ್ಮನ್ನು ಏನೆಂದು ಕೇಳದ ಶಾಸಕರನ್ನು ರೈತರುಗಳೇ ಹುಡುಕಿಕೊಂಡು ಹೊರಟಿದ್ದು ಆಗಲಾದರೂ ನಮ್ಮನ್ನು ಭೇಟಿಯಾಗಿ ನಮ್ಮ ಸಮಸ್ಯೆ ಆಲಿಸಬಹುದೆಂಬ ಕಿಂಚಿತ್ ಭರವಸೆ ನಮ್ಮಲ್ಲಿದ್ದು ಈ ನಿಟ್ಟಿನಲ್ಲಿ ಸೋಮವಾರದಂದು ಚಿಕ್ಕನಾಯಕನಹಳ್ಳಿಗೆ ರೈತರುಗಳು ತೆರಳುತ್ತಿರುವುದಾಗಿ ಹೋರಾಟದ ಸಂಚಾಲಕ ಹಾಗೂ ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಬೇಸರದಿಂದ ನುಡಿದರು,
ಎಪಿಎಂಸಿ ಮುಂದೆ ನಡೆಯುತ್ತಿರುವ ಕೊಬ್ಬರಿ ಚಳುವಳಿ ಶುರುವಾದಾಗಲಿಂದಲೂ ಇದುವರೆಗೂ ನಮ್ಮ ಪ್ರತಿನಿಧಿಸುವ ಶಾಸಕರು ಬಾರದಿರುವುದು ನಾಚಿಕೇಗೇಡಿನ ವಿಚಾರ.ನಮ್ಮೊಂದಿಗೆ ಕೂತೂ ಚರ್ಚೆ ಮಾಡಿ ನಮ್ಮಗಳ ಜೊತೆಯೇ ವಿಧಾನಸೌದ ಮುಂದೆ ಧರಣಿ ಕೂತಿದ್ದರೆ ನ್ಯಾಯಯುತವಾಗಿರುತ್ತಿತ್ತು. ಇದೇ ೧೫ರಂದು ಕಾರೇಹಳ್ಳಿಯಲ್ಲಿ ಗೋಶಾಲೆಯ ಉದ್ಘಾಟನೆಗೆ ಶಾಸಕರು ಬರಲಿದ್ದು ಅಲ್ಲಿ ರೈತಸಂಘದ ಪ್ರತಿನಿಧಿಗಳು ಅವರನ್ನುಘೇರಾವ್ ಮಾಡಲಿರುವುದಾಗಿ ಎಚ್ಚರಿಕೆ ನೀಡಿದರು.
ಇದೇ ದಾರಿಯಲ್ಲೇ ನಿತ್ಯವೂ ಸಂಚರಿಸುವ ಮಾಜಿ ಶಾಸಕರು ಕೂಡ ಇತ್ತ ಕಣ್ಣು ಹಾಯಿಸದಿರುವುದು ದುರಾದೃಷ್ಟ.ಇವರ ಸ್ವಂತ ಸ್ಥಳದಲ್ಲೆ ಬರಗಲದಿಂದ ಕಂಗಾಲಾಗಿರುವ ಹಾಗೂ ತಮ್ಮ ಬೆಳೆಗೆ ಬೆಂಬಲ ಬೆಲೆ ಕೊಡಿ ಎಂದು ಹೋರಾಡುತ್ತಿರುವ ರೈತರಿದ್ದರೂ ಸಹ ಇವರುಗಳನ್ನು ಏನೆಂದು ವಿಚಾರಿಸದ ಇವರು ಬಿಜಿಪಿ ತಂಡದೊಂದಿಗೆ ಪಕ್ಕದ ತಾಲ್ಲೂಕಿನಲ್ಲಿ ಬರವೀಕ್ಷಣೆಗೆ ತೆರಳಿದ್ದು ನ್ಯಾಯ ಸಮ್ಮತವಾ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳಾದ ಇವರುಗಳು ಕನಿಷ್ಟ ಸೌಜನ್ಯಕ್ಕಾದರೂ ತಿಂಗಳಿನೊಳಗೆ ಒಮ್ಮೆಯಾದರೂ ಕ್ಷಣ ಹೊತ್ತಾದರೂ ಬರಬಹುದಿತ್ತು.ಇವರುಗಳ ವರ್ತನೆ,ನಿರ್ಲಕ್ಷ್ಯ ಮನೋಭಾವವನ್ನು ರೈತಸಂಘ ಖಂಡಿಸುತ್ತಿದ್ದು ಪಕ್ಷ- ಜಾತಿ ರಾಜಕಾರಣ ಮಾಡುವ ಇವರುಗಳಿಗೆ ಬರಲಿರುವ ಚುನಾವಾಣೆ ಸಮಯದಲ್ಲಿ ರೈತರುಗಳು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೈತರ ಬಗ್ಗೆ ಗಮನ ಮಾಡದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೀತಿ ವಿರುದ್ಧ ಧಿಕ್ಕಾರ ಕೂಗಲಾಯಿತು.
ಇಂದಿನ ಧರಣಿಯಲ್ಲಿ ಟ್ರಾಕ್ಟರ್ ಮಂಜಣ್ಣ,ಹೂವಿನ ರಘು,ಲಕ್ಷ್ಮೀಪುರದ ಶಿವಣ್ಣ,ಕೆರೆಸುರಗೊಂಡನಹಳ್ಳಿ ಗಂಗಣ್ಣ,ರಂಗಸ್ವಾಮಿ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ