ಹುಳಿಯಾರು:ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನ.೧೧ರಿಂದ ತಾಲ್ಲೂಕ್ ರೈತಸಂಘದ ವತಿಯಿಂದ ಧರಣಿ ಕುಳಿತಿದ್ದು ಭಾನುವಾರಕ್ಕೆ ಇಪ್ಪತ್ತ್ನಾಲ್ಕು ದಿನಗಳಾಗಿದ್ದರೂ ಸಹ ಕೂಗಳತೆಯಲ್ಲಿರುವ ಕ್ಷೇತ್ರದ ಶಾಸಕರಾಗಲಿ ,ಜಿಲ್ಲೆಯಲ್ಲಿ ಇಂತಹದೊಂದು ಪ್ರತಿಭಟೆನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಾಗಲಿ ಇದುವರೆಗೂ ಆಗಮಿಸದಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದ್ದು ಜಿಲ್ಲೆಯಲ್ಲಿ ಆಡಳಿತ ಇನ್ನೂ ಜೀವಂತವಾಗಿದೆಯಾ ಎಂದು ಅನುಮಾನಿಸುವಂತಾಗಿದೆ ಎಂದು ತಾಲ್ಲೂಕ್ ರೈತಸಂಘದ ಗೌರವಾಧ್ಯಕ್ಷ ಕೆ.ಪಿ.ಮಲ್ಲೇಶ್ ಆಕ್ರೋಷದ ನುಡಿಗಳಾಡಿದರು.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಭಾನುವಾರದಂದು ಪಾಲ್ಗೊಂಡಿದ್ದ ವಿವಿಧ ಗ್ರಾಮಗಳ ರೈತ ಮುಖಂಡರುಗಳು
ನ.೨೩ರಂದೇ ಖರೀದಿ ಕೇಂದ್ರ ಪ್ರಾರಂಭಿಸಲು ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು ಇದುವರೆಗೂ ಏನಾಗಿದೆಯೆಂದು ಸಹ ಕೇಳಿಲ್ಲ.ಸ್ಥಳಕ್ಕಾಗಮಿಸಿದ್ದ ಕೃಷಿ ಬೆಲೆ ಆಯೋಗದ ಡಾ.ಪ್ರಕಾಶ್ ಕಮ್ಮರಡಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪನಿರ್ದೇಶಕ ರಾಜಣ್ಣನವರು ಸೋಮವಾರದಿಂದ ನಫೆಡ್ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದು ಅದರಂತೆ ಸೋಮವಾರದಂದು ತೆರೆಯದಿದ್ದ ಪಕ್ಷದಲ್ಲಿ ಧರಣಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಇದವರೆಗೂ ರೈತರ ಕೂಗನ್ನು ಆಲಿಸದ ಶಾಸಕ ಸಿ.ಬಿ.ಸುರೇಶ್ ಬಾಬು ಮನೆ ಎದುರು ಬಾಯಿಬಡಿದುಕೊಳ್ಳುವ ಚಳುವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿಯ ೨೪ ನೇ ದಿನದ ನೇತೃತ್ವ ವಹಿಸಿ ಮಾತನಾಡಿದ ಅವರು ಇಷ್ಟು ದಿನದ ಧರಣಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳು ಸಮಸ್ಯೆ ಏನೆಂದು ಕೇಳಲು ಸೌಜನ್ಯವಹಿಸದಿರುವುದು ಇವರ ರೈತ ವಿರೋಧಿತನವನ್ನು ಬಿಂಬಿಸುತ್ತದೆ.
ಕೆಂಕೆರೆ ಮಾಜಿ ಗ್ರಾಪಂ ಸದಸ್ಯ ಬೆಂಕಿ ಬಸವರಾಜು ಮಾತನಾಡಿ ದಪ್ಪಚರ್ಮದ ಸರ್ಕಾರಕ್ಕೆ ನಮ್ಮ ಕೂಗು ಕೇಳುವುದಿಲ್ಲ.ಇನ್ನೂ ಚುನಾವಣೆ ಸಮಯದಲ್ಲಿ ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್ ಶಾಸಕರಾದ ಸುರೇಶ್ ಬಾಬು ಸ್ಥಳದಲ್ಲಿಯೇ ಇದ್ದರೂ ನಮ್ಮ ಸಮಸ್ಯೆ ಆಲಿಸಲು ಮುಂದಾಗುತ್ತಿಲ್ಲ.ಪ್ರತಿಭಟನೆಯ ಕೂಗು ಸರ್ಕಾರಕ್ಕೆ ಕೇಳಬೇಕಂದರೆ ನಮ್ಮ ಪ್ರತಿಭಟನೆಯನ್ನು ಹುಳಿಯಾರು ಬದಲು ಜಿಲ್ಲಾಧಿಕಾರಿಗಳ ಕಛೇರಿ ಎದುರು ಸ್ಥಳಾಂತರಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಅಧ್ಯಕ್ಷ ಬಂಡಿಮನೆ ಲೋಕಣ್ಣ,ಕೆಂಕೆರೆ ಸತೀಶ್, ಕೋರಗೆರೆ ಬಸವರಾಜು,ತಿಮ್ಮನಹಳ್ಳಿ ಜಯಣ್ಣ,ತೊರೆಸೂರಗೊಂಡನಹಳ್ಳಿ ಗಂಗಾಧರಯ್ಯ,ಲಕ್ಷ್ಮೀಪುರ ಶಿವಣ್ಣ,ತಮ್ಮಡಿಹಳ್ಳಿ ಓಂಕಾರ್ ಮೂರ್ತಿ,ಬಡಕೆಗುಡ್ಲು ನರಸಿಂಹಯ್ಯ,ಕೆಂಕೆರೆ ರಮೇಶ್,ಗೊಲ್ಲರಹಟ್ಟಿ ರಮೇಶಣ್ಣ,ತಾಲ್ಲೂಕ್ ಉಪಾಧ್ಯಕ್ಷ ಮಲ್ಲೀಕಣ್ಣ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ