ಹುಳಿಯಾರು:ನೋಟು ಬದಲು ದೇಶ ಮೊದಲು ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅಭಿಯಾನ ಶನಿವಾರದಂದು ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ರಾಂಗೋಪಾಲ್ ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ಬೈಕ್ ರ್ಯಾಲಿ ನಡೆಯಿತು. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ಮಾಡಬಹುದಾದ ವಿವಿಧ ವಿಧಾನಗಳ ಬಗ್ಗೆ ವಿಡಿಯೋ ಪ್ರದರ್ಶನದ ಮೂಲಕ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹನುಮಂತರಾಜ್ ಪ್ರಾಧಾನಿ ಮೋದಿಯವರು ನೋಟಿನ ಅಪನಗಧೀಕರಣ ಮಾಡುವ ಕ್ರಾಂತಿಕಾರಿ ನಿರ್ಧಾರದ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದ್ದು ನಾಗರೀಕರು ಅವರ ನಿರ್ಧಾರವನ್ನು ಬೆಂಬಲಿಸಿ ಸಹಕರಿಸುವ ಮುಖಾಂತರ ಪ್ರಧಾನಿಯವರ ಕೈ ಬಲಪಡಿಸಿ,ದೇಶದ ಆರ್ಥಿಕ ಅಭಿವೃದ್ಧಿಗೆ ನಾವೆಲ್ಲಾ ಭಾಗಿಯಾಗಬೇಕಿದೆ ಎಂದರು.
ಬಿಜೆಪಿ ಯುವ ಮೋರ್ಚಾದ ಕೆಂಕೆರೆ ನವೀನ್ ಮಾತನಾಡಿ ದೇಶದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು , 1000 ಹಾಗೂ 500ರೂ. ನೋಟು ರದ್ದು ಮಾಡುವ ಮೂಲಕ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣ,ಖೋಟಾನೋಟಿನ ಜಾಲ ಇನ್ನೂ ಮುಂತಾದ ದೇಶದ್ರೋಹಿ ಕೆಲಸಗಳಿಗೆ ಮೋದಿಯವರ ಈ ನಿರ್ಧಾರದಿಂದ ಕಡಿವಾಣ ಬಿದ್ದಂತಾಗಿದೆ ಎಂದರು. ನೋಟು ರದ್ಧತಿಯಿಂದ ದೇಶದ ಅರ್ಥವ್ಯವಸ್ಥೆ ಬದಲಾಗಲಿದ್ದು ನಗದು ರಹಿತ ವಾತಾವರಣ ಸೃಷ್ಟಿಯಾಗಲಿದೆ ಎಂದರು.
ಹುಳಿಯಾರಿನಲ್ಲಿ ನೋಟು ಬದಲು ದೇಶ ಮೊದಲು ಅಭಿಯಾನದ ರ್ಯಾಲಿ ನಡೆಯಿತು.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹನುಮಂತರಾಜ್,ಕೆಂಕೆರೆ ನವೀನ್,ಬೆಂಕಿ ಬಸವರಾಜು,ಹಾರ್ಡ್ ವೇರ್ ಸ್ವಾಮಿ,ನರೇಂದ್ರ ಬಾಬು,ಅಜಿತ್,ಪಾಳ್ಯ ಗಂಗಣ್ಣ ಮೊದಲಾದವರಿದ್ದಾರೆ. |
ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ವ್ಯವಸ್ಥೆ ಬಳಕೆ ಮಾಡುವ ಕುರಿತು ಮತ್ತು ನೋಟು ರದ್ಧತಿಯಿಂದ ಮುಂದಾಗುವ ಬದಲಾವಣೆಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿಡಿಯೋ ಶೋ ಪ್ರದರ್ಶಿಸಲಾಯಿತು.
ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಕೇಶ್,ಉಪಾಧ್ಯಕ್ಷ ಶ್ರೀನಿವಾಸ್,ತೀರ್ಥ ಕುಮಾರ್,ಕೆಂಕೆರೆ ಗಂಗಾಧರಪ್ಪ,ಗೋಪಿಕೃಷ್ಣ ,ಮಾಜಿ ಗ್ರಾಪಂ ಸದಸ್ಯ ಬಸವರಾಜು, ಯು.ಸಿ.ಗೌಡ, ಬಳ್ಳೆಕಟ್ಟೆ ರಾಮಣ್ಣ,ಹಾರ್ಡ್ ವೇರ್ ಸ್ವಾಮಿ,ವಿಕ್ಕಿ ,ಅಭಾವಿಪ ನರೇಂದ್ರ ಬಾಬು,ಅಜಿತ್,ಪಾಳ್ಯ ಗಂಗಣ್ಣ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ