ಹುಳಿಯಾರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚಿಕ್ಕನಾಯ್ಕನಹಳ್ಳಿ ತಾಲೂಕಿನ ಬರ ವೀಕ್ಷಣೆಯ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರ ೧.೫ ಲಕ್ಷ ಸೇರಿದಂತೆ ಅನೇಕ ಮುಖಂಡರ ಹಣ ಪಿಕ್ ಪಾಕೇಟ್ ಆಗಿದೆ.
ಹುಳಿಯಾರು ಹೋಬಳಿಗೆ ಬರ ಸಮೀಕ್ಷೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದ ಸಮಯದಲ್ಲಿ ಜನಜಾತ್ರೆಯೇ ಸೇರಿ ನೂಕುನುಗ್ಗಲು ಉಂಟಾಗಿತ್ತು. ಕಾರೆಹಳ್ಳಿ ಗೋಶಾಲೆ, ಕಂಪನಹಳ್ಳಿ ತೆಂಗಿನ ತೋಟ, ಎಪಿಎಂಸಿ ರೈತರ ಧರಣಿ ಹೀಗೆ ಯಡಿಯೂರಪ್ಪ ಅವರು ಹೋದ ಕಡೆಯಲ್ಲೆಲ್ಲಾ ನೂಕನುಗ್ಗಲು ಏರ್ಪಟ್ಟಿತ್ತು.
ಇದೇ ಸಂದರ್ಬದಲ್ಲಿ ಜೇಬು ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದು ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರ ಪ್ಯಾಂಟ್ ಜೇಬಿನಲ್ಲಿದ್ದ ಕೊಬ್ಬರಿ ಕೊಟ್ಟಿದ್ದ ಬಾಬ್ತು ಹಣ ೧.೫ ಲಕ್ಷ ರೂ. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಅವರ ೨೪೦೦ ರೂಪಾಯಿ ಹಾಗೂ ಕಾರ್ಯಕರ್ತ ನಂದೀಶಣ್ಣ ಅವರ ೩ ಸಾವಿರ ರೂ ಕದ್ದಿದ್ದಾರೆ.
ಯಾರೊಬ್ಬರ ಜೇಬಿಗೂ ಕತ್ತರಿ ಹಾಕದಿದ್ದರೂ ಜೇಬಿನೊಳಗೆ ಕೈಯಿಟ್ಟು ಹಣ ಲಪಟಾಯಿಸಿ ತಮ್ಮ ಕರಾಮತ್ತು ಮೆರೆದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ