ಹುಳಿಯಾರು:ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ವೀರಶೈವ ಸಮಾಜ ಬಾಂಧವರು,ಶ್ರೀ ಮಲ್ಲೇಶ್ವರ ಸ್ವಾಮಿ ಟ್ರಸ್ಟ್ ಹಾಗೂ ಕಾಮಶೆಟ್ಟಿಪಾಳ್ಯದ ಶ್ರೀ ಬನಶಂಕರಿ, ಶ್ರೀ ಬಸವೇಶ್ವರ ಸ್ವಾಮಿ ಟ್ರಸ್ಟ್ ನವರು ಬೆಂಬಲ ಸೂಚಿಸಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ವೀರಶೈವ ಸಮಾಜ ಬಾಂಧವರು ಬೆಂಬಲ ಸೂಚಿಸಿದರು.ತಿಪಟೂರಿನ ನಿವೃತ್ತ ಉಪನ್ಯಾಸಕ ರೇಣುಕಾರ್ಯ ಮಾತನಾಡಿದರು. |
ಈ ಸಂದರ್ಭದಲ್ಲಿ ವಕೀಲರಾದ ರಮೇಶ್‌ಬಾಬು ಮಾತನಾಡಿ ಇಷ್ಟು ದಿನದ ಧರಣಿಗೆ ಸರ್ಕಾರವಿನ್ನೂ ಇತ್ತ ಮುಖಮಾಡಿಲ್ಲ.ಪ್ರತಿಭಟನೆಯನ್ನು ಇನ್ನೂ ತೀವ್ರತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾಕೇಂದ್ರದಲ್ಲಿ ಧರಣಿ ಮುಂದುವರಿಸಬೇಕು.೨೦೧೬-೧೭ ನೇಸಾಲಿನ ಖಾರೀಫ್ ಬೆಳೆ ಬೆಲೆ ನಿರ್ಧಾರವಾಗದಿರುವ ಹಿನ್ನಲೆಯಲ್ಲಿ ಸಂಸದ ಮುದ್ಧಹನುಮೇಗೌಡರ ನಾಯಕತ್ವದಲ್ಲಿ ದೆಹಲಿಗೆ ನಿಯೋಗ ತೆರಳಿ ಕೇಂದ್ರದ ಸಚಿವರುಗಳನ್ನು ಭೇಟಿಮಾಡಿ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಬೇಕು ಎಂದರು.
ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿರ್ದೇಶಕ ಅಶೋಕ್‌ಬಾಬು ಅವರು ಮಾತನಾಡಿ ರಾಜ್ಯ ಸರ್ಕಾರ ಸಾಲಮನ್ನಾ ಸೇರಿದಂತೆ ಕೊಬ್ಬರಿ ಬೆಲೆ, ಕಾವೇರಿ, ಮಹದಾಯಿ ಎಲ್ಲವನ್ನೂ ಕೇಂದ್ರ ಸರ್ಕಾರದ ಮೇಲೆ ಬೆಟ್ಟು ಮಾಡಿ ತಮ್ಮ ಹೊಣೆಯಿಂದ ನುಣಿಚಿಕೊಳ್ಳುತ್ತಿದೆ. ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ ಮೊದಲು ಬರಗಾಲದಿಂದ ತತ್ತರಿಸುತ್ತಿರುವ ರೈತರ ಸಾಲಮನ್ನಾ ಮಾಡಿ, ಕೊಬ್ಬರಿಗೆ ೩ ಸಾವಿರ ಪ್ರೋತ್ಸಾಹಧನ ಕೊಟ್ಟು ಆ ನಂತರ ಕೇಂದ್ರದತ್ತ ಬೆಟ್ಟುತೋರಿಸಲಿ ಎಂದರು.
ತಿಪಟೂರಿನ ಮಾಜಿ ಜಿಪಂ ಸದಸ್ಯ ಹಾಗೂ ನಿವೃತ್ತ ಉಪನ್ಯಾಸಕ ರೇಣುಕಾರ್ಯ,ನಂಜುಂಡಪ್ಪ, ತೋಟದಮನೆ ಜಯಣ್ಣ,ಗ್ರಾಪಂ ಸದಸ್ಯೆ ಗೀತಾ ಬಾಬು, ಪಟೇಲ್ ರಾಜ್ ಕುಮಾರ್, ಆಂಜನೇಯ ಸ್ವಾಮಿ ದೇವಾಲಯದ ಧನಂಜಯ, ಮೆಡಿಕಲ್ ಚನ್ನಬಸವಯ್ಯ, ಎಂ.ಕುಮಾರ್, ನಾಗೇಂದ್ರಪ್ಪ, ನಿಜಲಿಂಗಪ್ಪ, ಎಚ್.ಸಿ.ಈಶ್ವರಪ್ಪ, ಶಿವನಂಜಪ್ಪ, ಆರತಿಯೋಗೀಶ್, ಶಂಕರಪ್ಪ, ಧನಿಯಕುಮಾರ್, ಪಿಗ್ಮಿಕುಮಾರ್, ಸತೀಶ್, ಶಶಿಧರ್, ಮಲ್ಲಿಕಣ್ಣ ಸೇರಿದಂತೆ ವೀರಶೈವ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ